ಬೆಂಗಳೂರು,ಅ.07:
ಅಂತೂ ಇಂತೂ ಮಾಸ್ಕ್ ಇಲ್ಲದಿದ್ದರೇನಂತು ಅನ್ನಬೇಡಿ. ಮೂರ್ನಾಕು ದಿನದ‌ ಹಿಂದೆ ಹಾಕಿದ್ದ ದಂಡದ ಪ್ರಮಾಣ ಕುಗ್ಗಿದೆ ಅಷ್ಟೆ…!?
 ಮಾಸ್ಕ್ ಹಾಕದವರಿಗೆ ದಂಡವನ್ನು ಕಡಿತಗೊಳಿಸಿ ಇಂದು ಸರಕಾರ ಮಹತ್ವದ ಆದೇಶವನ್ನು ನೀಡಿದೆ.
ಮುಖ್ಯಮಂತ್ರಿ
ಬಿ.ಎಸ್​.ಯಡಿಯೂರಪ್ಪ, ದಂಡದ ಪ್ರಮಾಣ ಇಳಿಕೆ ಮಾಡಿ ಆದೇಶವನ್ನು ನೀಡಿದ್ದಾರೆ. ನಗರದಲ್ಲಿ 1,000 ರೂ. ದಂಡದ ಬದಲು 250 ರೂ.ಗೆ, ಗ್ರಾಮೀಣ ಪ್ರದೇಶದಲ್ಲಿ 500 ರೂ. ಬದಲು 100 ರೂಪಾಯಿ ದಂಡದ ಪ್ರಮಾಣ ನಿಗದಿ ಮಾಡಿ ಬುಧವಾರ ಮಧ್ಯಾಹ್ನ ಆದೇಶಿಸಿದ್ದಾರೆ.
 ಕೋವಿಡ್​ ನಿಯಮ ಉಲ್ಲಂಘಿಸಿ ಮಾಸ್ಕ್​ ಹಾಕದೆ ಹೊರ ಬರುತ್ತಿದ್ದವರಿಗೆ ದುಬಾರಿ ದಂಡವನ್ನು ಇತ್ತೀಚೆಗೆ ಸರಕಾರ ವಿಧಿಸಿ ಆದೇಶವನ್ನು ನೀಡಿತ್ತು. ಇದು ಸಾರ್ಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
 

By admin

ನಿಮ್ಮದೊಂದು ಉತ್ತರ

error: Content is protected !!