ಹೊಸನಗರ: ತಾಲ್ಲೂಕಿನ ಮಾರುತಿಪುರದ ಸುರೇಶ್ ಶೆಟ್ಟಿಯವರ ಮನೆಯ ಮೇಲೆ ಹೊಸನಗರ ಅಬಕಾರಿ ಇಲಾಖೆಯವರು ಖಚಿತ ಅಧಾರದ ಮೇಲೆ ದಾಳಿ ನಡೆಸಿ ಸುಮಾರು 64.75 ಲೀಟರ್ ಅಕ್ರಮವಾಗಿ ಮಾರಾಟ ಮಾಡುವ ಸಲುವಾಗಿ ಸಂಗ್ರಹಿಸಿಟ್ಟಿದ್ದ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಅಕ್ರಮ ಮದ್ಯದ ಬೆಲೆಯು 28,134 ರೂ.ಗಳಾಗಿದ್ದು ಸುರೇಶ್‌ಶೆಟ್ಟಿಯ ವಿರುದ್ದ ಕೇಸ್ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಬಕಾರಿ ಆಯುಕ್ತರು ಬೆಂಗಳೂರು ಹಾಗೂ ನಾಗರಾಜಪ್ಪ ಟಿ ಅಬಕಾರಿ ಜಂಟಿ ಆಯುಕ್ತರು ಮಂಗಳೂರು ವಿಭಾಗರವರ ಮಾರ್ಗದರ್ಶನದಲ್ಲಿ ಕ್ಯಾಪ್ಟನ್ ಅಜಿತ್ ಕುಮಾರ್ ಅಬಕಾರಿ ಉಪ ಆಯುಕ್ತರು ಶಿವಮೊಗ್ಗ ಜಿಲ್ಲೆ ರವರ ನಿರ್ದೇಶನದಂತೆ ಹಾಗೂ ಶಿವ ಪ್ರಸಾದ್ ಅಬಕಾರಿ ಉಪ ಅಧೀಕ್ಷಕರು ತೀರ್ಥಹಳ್ಳಿ ರವರ ಆದೇಶದಂತೆ ಹೊಸನಗರದ ಅಬಕಾರಿ ನಿರೀಕ್ಷಕ ನಾಗರಾಜ್‌ರವರ ನೇತೃತ್ವದಲ್ಲಿ ದಾಳಿ ನಡೆದಿದೆ.
ಈ ದಾಳಿಯ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ನಿರೀಕ್ಷಕರಾದ ನಾಗರಾಜ ಎ.ಜೆ, ಅಬಕಾರಿ ಇನ್ಸ್‌ಪೆಕ್ಟರ್ ವಾಸವಿ ಪಿ.ಎನ್, ಚುನಾವಣೆ ಅಧಿಕಾರಿ ತಹಶೀಲ್ದಾರ್ ಧರ್ಮಂತ ಗಂಗಾರಾಮ್ ಕೋರಿ, ಎಫ್ ಎಸ್ ತಂಡದ ರಮೇಶ್ ಕುಮಾರ್ ಆರ್, ಬಿ ಎಂ ರಾಜು ಶೆಟ್ಟಿ, ಪೊಲೀಸ್ ಕಾನ್ಸ್‌ಟೇಬಲ್ ಗೋಪಾಲ ಕೃಷ್ಣ ಹೆಚ್, ಅಬಕಾರಿ ಕಾನ್ಸ್‌ಟೇಬಲ್ ಗಳಾದ ರಾಘವೇಂದ್ರ ಕೆ, ಪ್ರಕಾಶ್, ಪಾಂಡು, ವಾಹನ ಚಾಲಕರಾದ ಉಮೇಶ್ ಮತ್ತು ಬಸವರಾಜ್ ಇನ್ನೂ ಉಪಸ್ಥಿತರಿದ್ದರು.