ಶಿವಮೊಗ್ಗ,ಮಾ.29 :

ಶಿವಮೊಗ್ಗ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ.


ಈ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಪ್ರತಿಯೊಂದು ಅಥ್ಲೆಟಿಕ್ ಕ್ರೀಡೆಗಳ ಬಗ್ಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ. ಶಿಬಿರಾರ್ಥಿಗಳಿಗೆ ಸಾವಯವ ಸತ್ವಯುತ ಪಾನೀಯವನ್ನು  ನೀಡಲಾಗುತ್ತದೆ. ಅಲ್ಲದೇ ಮೆಡಿಟೇಷನ್, ರಿಲ್ಯಾಕ್ಷೇಷನ್ ಬಗ್ಗೆ ವಿಶೇಷ ತರಬೇತಿಯನ್ನು ಕೊಡಲಾಗುತ್ತದೆ. ಇದರ ಜೊತೆಗೆ ಎಂಡ್ಯೂರೆನ್ಸ್ ಸ್ಟ್ರೆಂಥ್ ಬ್ಯಾಲೆನ್ಸ್ ಫ್ಲೆಕ್ಸಿಬಿಲಿಟಿ ಹಾಗೂ ಪ್ರತಿಯೊಂದು ಕ್ರೀಡೆಯ ಬಗ್ಗೆ ಸಮಯದ ತರಬೇತಿಯನ್ನು ಹೇಳಿಕೊಡಲಾಗುತ್ತದೆ.


ಬೆಳಿಗ್ಗೆ 6-30 ರಿಂದ 8-30ರವರೆಗೆ ಹಾಗೂ ಸಂಜೆ ೪4-30 ರಿಂದ 6-30ರವರೆಗೆ ಎರಡು ಅವಧಿಯಲ್ಲಿ ತರಬೇತಿ ಹಾಗೂ ಶಿಬಿರ ನಡೆಯಲಿದ್ದು, ಆಸಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್‌ನ ತರಬೇತುದಾರ ಶಿವಕುಮಾರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8892325558 ಅಥವಾ 6366400936ಗೆ ಸಂಪರ್ಕಿಸಬಹುದಾಗಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!