ವಿಐಎಸ್’ಎಲ್ ಕಾರ್ಖಾನೆ ಉಳಿಸುವ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಇದಕ್ಕೆ ಈಗ ಸ್ಯಾಂಡಲ್’ವುಡ್ ಹಿರಿಯ ನಟ ದೊಡ್ಡಣ್ಣ ಎಂಟ್ರಿಯಾಗಿದ್ದಾರೆ.
ಕಾರ್ಖಾನೆ ಇಂದಿನ ಸ್ಥಿತಿಗತಿ ಹಾಗೂ ಕಾರ್ಖಾನೆ ಉಳಿವಿನ ವಿಚಾರದಲ್ಲಿ ಗುತ್ತಿಗೆ ಕಾರ್ಮಿಕರ ಸಂಘ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಕುರಿತು ಕಾರ್ಮಿಕರ ನಿಯೋಗ ಬೆಂಗಳೂರಿನಲ್ಲಿ ಕಾರ್ಖಾ ನೆಯ ನಿವೃತ್ತ ನೌಕರ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಹಾಗೂ ಕಾರ್ಖಾನೆಯ ನಿವೃತ್ತ ಅಧಿಕಾರಿಗಳನ್ನು ಭೇಟಿಮಾಡಿ ಚರ್ಚೆ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ದೊಡ್ಡಣ್ಣ, ನಮಗೆ ಅನ್ನ, ಬದುಕು ನೀಡಿರುವ ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚಬಾರದು. ಮುಂದಿನ ಪೀಳಿಗೆಗೆ ಇದು ಉಳಿಯ ಬೇಕು. ಈ ಹಿನ್ನೆಲೆಯಿಂದ ವಿಐಎಸ್’ಎಲ್ ಉಳಿಸಿ ಜಂಟಿ ಕ್ರಿಯಾ ಸಮಿತಿ ರಚಿಸಿ ಮುಖ್ಯಮಂತ್ರಿ ಹಾಗೂ ರಾಜ್ಯದಿಂದ ಆಯ್ಕೆಯಾಗಿರುವ ಎ?ಲ ಸಂಸದರನ್ನು ತುರ್ತಾಗಿ ಭೇಟಿಯಾಗಿ ಕಾರ್ಖಾನೆ ಉಳುಸಿಕೊಳ್ಳಲು ಹೋರಾಟ ನಡೆಸುವು ದಾಗಿ ಭರವಸೆ ನೀಡಿದರು.
ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಅಧ್ಯP?ಷರು, ಪದಾಧಿಕಾರಿಗಳು, ಕಾಯಂ ಹಾಗು ನಿವೃತ್ತ ಕಾರ್ಮಿಕರು ಉಪಸ್ಥಿತರಿದ್ದರು.