ಜನರ ಹಣ ಜನರಿಗೇ ಸಲ್ಲಬೇಕು ಎಂಬುದು ಕಾಂಗ್ರೆಸ್ ಸಿದ್ಧಾಂತವಾಗಿದ್ದು, ಪ್ರತಿ ಮನೆಗೆ ೨೦೦ ಯೂನಿಟ್‌ಉಚಿತ ವಿದ್ಯುತ್, ಪ್ರತಿ ಮನೆಯ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯಡಿ ೨೦೦೦ ರೂ,.ನೇರವಾಗಿ ಬ್ಯಾಂಕ್ ಖಾತೆಗೆ ಮತ್ತು ರಾಜ್ಯದ ೪ಕೋಟಿ ಜನರಿಗೆ ಪ್ರತಿಯೊ ಬ್ಬರಿಗೂ ೧೦ ಕೆ.ಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕಾರ್ಡ್ ನೀಡುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.
ಅವರು ಇಂದುನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಶಿವಮೊಗ್ಗ ಜಿಲ್ಲಾ ಮಟ್ಟದ ಕಾಂಗ್ರೆಸ್ ಪ್ರಮುಖರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿಯ ಭ್ರಷ್ಟಾಚಾರ ಕನ್ಯಾಕುಮಾರಿ ಯಿಂದ ಕಾಶ್ಮೀರದವರೆಗೆ ದೇಶದ ಎಲ್ಲಾ ಜನರು ಮಾತನಾಡುತ್ತಿದ್ದಾರೆ. ೪೦% ಕಮಿಷನ್ ಬಗ್ಗೆ ಇಡೀ ದೇಶದ ಗಮನ ವನ್ನು ಕರ್ನಾಟಕ ಸೆಳೆದಿದೆ. ಆರೋಪ ಕಾಂಗ್ರೆಸ್ ಮಾಡುತ್ತಿಲ್ಲ. ರಾಜ್ಯದ ೫೦ಸಾವಿರ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಆರೋಪಿಸಿದ್ದಾರೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಗುತ್ತಿಗೆದಾರ ಬೆಳಗಾವಿಯ ಸಂತೋಷ್ ಪಾಟೀಲ್ ತಾನು ಮಾಡಿದ ಕೆಲಸಕ್ಕೆ ೪೦% ಕಮಿಷನ್ ನೀಡಲಾಗದೆ ಆತ್ಮಹತ್ಯೆ ಮಾಡಿಕೊಂಡ. ಆತನ ವೃದ್ಧ ತಂದೆ ಮತ್ತು ಪತ್ನಿ ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.
ಇನ್ನೋರ್ವ ಗುತ್ತಿಗೆದಾರ ಬೆಂಗಳೂರು ಗ್ರಾಮಾಂತರದ ಟಿ.ಎನ್. ಪ್ರಸಾದ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಜೇಂದ್ರ ಎಂಬ ವ್ಯಕ್ತಿ ಕೂಡ ಕಮಿಷನ್ ನೀಡಲಾಗದೆ ಸತ್ತಿದ್ದಾನೆ. ಬಿಜೆಪಿಗೆ ಎಷ್ಟು ಹಣ ಬೇಕು ಎಂದು ಹೇಳಲಿ. ಅವರ ಹಣದ ದಾಹವನ್ನು ಕಾಂಗ್ರೆಸ್ ತೀರಿಸುತ್ತದೆ. ಆದರೆ ಸತ್ತ ಗುತ್ತಿಗೆದಾರರನ್ನು ಅವರು ವಾಪಾಸು ಕೊಡಬಲ್ಲರೇ ಎಂದು ಅವರು ಪ್ರಶ್ನಿಸಿದರು.
ಮಾ.೧೧ರಿಂದ ನಮ್ಮ ಗ್ಯಾರಂಟಿ ಕಾರ್ಡ್ ಅನ್ನು ರಾಜ್ಯದ ಎಲ್ಲರ ಮನೆಗೂ ತಲುಪಿಸುತ್ತೇವೆ. ಅದರ ಒಂದು ಭಾಗದಲ್ಲಿ ಅವರಿಂದ ನಂಬರ್ ಪಡೆದು ಇನ್ನರ್ಧ ಭಾಗವನ್ನು ಗ್ಯಾರಂಟಿಯಾಗಿ ನೀಡುತ್ತೇವೆ. ನಮ್ಮ ಸರ್ಕಾರ ಬಂದ ತಕ್ಷಣ ಈ ಮೂರೂ ಯೋಜನೆಗಳುಜಾರಿಗೆ ಬರುತ್ತವೆ ಜನರ ಹಣವನ್ನೇ ಜನರಿಗೆ ನೀಡುತೇವೆ. ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯ ದರ್ಶಿ ಮಯೂರ್ ಜಯಕುಮಾರ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ, ಪ್ರಮುಖರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್, ಕೆ.ಬಿ. ಪ್ರಸನ್ನಕುಮಾರ್, ಆರ್ ಪ್ರಸನ್ನಕುಮಾರ್, ಮಧು ಬಂಗಾರಪ್ಪ, ಎನ್. ರಮೇಶ್, ಆರ್‌ಎಂ. ಮಂಜುನಾಥ್ ಗೌಡ, ಹೆಚ್. ಎಂ. ಚಂದ್ರಶೇಖರಪ್ಪ, ಹೆಚ್.ಸಿ. ಯೋ ಗೀಶ್, ಇಸ್ಮಾಯಿಲ್ ಖಾನ್, ಎಸ್.ಪಿ. ದಿನೇಶ್, ವೈ.ಹೆಚ್. ನಾಗರಾಜ್, ಪಲ್ಲವಿ, ಸತ್ಯನಾರಾಯಣರಾವ್, ರವಿಕುಮಾರ್, ಎಸ್.ಕೆ. ಮರಿಯಪ್ಪ, ಡಾ ಶ್ರೀನಿವಾಸ ಕರಿಯಣ್ಣ, ರಾಮೇಗೌಡ, ಬೇಳೂರು ಗೋಪಾಲಕೃಷ್ಣ ಇತರರಿದ್ದರು.