ಶಿವಮೊಗ್ಗ:  ಪತ್ರಕರ್ತರ ಮುಕ್ತ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿದ ದಾವಣಗೆರೆ ಎಸ್.ಪಿ. ಅವರನ್ನು ಕೂಡಲೇ ಅಮಾನತ್ತುಗೊಳಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವಕ್ತಾರ ರಮೇಶ್ ಶಂಕರಘಟ್ಟ ಗೃಹ ಸಚಿವರನ್ನು ಅಗ್ರಹಿಸಿದ್ದಾರೆ.  

ಇದೇ ತಿಂಗಳು 26 ರಂದು ನಡೆದ ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮ ಸಂದರ್ಭದಲ್ಲಿ ಶಿವಮೊಗ್ಗದ ಭಾರತ್ ಟಿ.ವಿ. ಸಂಪಾದಕ ಆರ್.ಎಸ್. ಹಾಲಸ್ವಾಮಿಯವರಿಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅಡ್ಡಿಪಡಿಸಿದಲ್ಲದೇ, ಕ್ಯಾಮೆರಾ ಕಸಿದುಕೊಂಡು ಅಮಾನವೀಯ ವರ್ತನೆ ತೋರಿದ ದಾವಣಗೆರೆ ಜಿಲ್ಲಾ ಪೊಲೀಸ್ ಅಧಿಕಾರಿ ಸಿ.ಬಿ. ರಿಷ್ಯಂತ್ ಅವರನ್ನು ಈ ಕೂಡಲೇ ಕರ್ತವ್ಯದಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.

ಅಂದಿನ ಕಾರ್ಯಕ್ರಮದ ವರದಿ ಮಾಡುವ ಸಲುವಾಗಿ ಎಂದಿನಂತೆ ಪತ್ರಕರ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಪತ್ರಕರ್ತರು ತಮ್ಮ ಕರ್ತವ್ಯದಲ್ಲಿ ತೊಡಗಿದ್ದಾರೆ. ಅಂದಿನ ಭದ್ರತೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ದಾವಣಗೆರೆ ಎಸ್ಪಿ ರಿಷ್ಯಂತ್ ಅವರು ಇದ್ದ ಸ್ಥಳದಲ್ಲಿ ಅಪಾರ ಜನಸಂದಣಿಯಲ್ಲಿ ನೂಕು ನುಗ್ಗಲಾಗಿದೆ. ನೂಕು ನುಗ್ಗಲಾಗಿದ್ದನ್ನು ಚಿತ್ರೀಕರಣ ಮಾಡುತ್ತಿದ್ದಾಗ ಏಕಾಏಕಿ ಹಾಲಸ್ವಾಮಿಯವರ ಬಳಿ ಬಂದು ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದ್ದಾರೆ.

ಅಧಿಕಾರಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಈ ಘಟನೆಯನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!