ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಮಾತ್ರ ಆತಂಕ. ಭಯದಿಂದ ಓದಿನ ಕಡೆಗೆ ಗಮನ ಕೊಡುತ್ತಾರೆ ಜೂನ್ ತಿಂಗಳಿಂದ ಮಾರ್ಚ್, ಏಪ್ರಿಲ್ ತಿಂಗಳವರೆಗೆ ಸಮಯವನ್ನು ವ್ಯಯ ಮಾಡಿ ಪರೀಕ್ಷೆ ಹತ್ತಿರ ಸಮೀಪಿಸುತ್ತಿದ್ದಂತೆ ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಒತ್ತಡವೇರು ವುದರಿಂದ ಅವರ ಆತ್ಮ ಸ್ಥೈರ್ಯ ಕುಂಠಿತವಾಗು ವುದರಲ್ಲಿ ಸಂಶಯವಿಲ್ಲ. ಆದುದರಿಂದ ಶಾಲೆ ಪ್ರಾರಂ ಭದ ದಿನಗಳಲ್ಲಿ ವಿದ್ಯಾರ್ಥಿಗಳ ಓದಿನ ಬಗ್ಗೆ ಕಾಳಜಿ ವಹಿಸಿದ್ದಲ್ಲಿ ಉತ್ತಮ ಫಲಿತಾಂಶ ಪಡೆಯುವಲ್ಲಿ ಸಫಲವಾಗಬಹುದು.


ವಿದ್ಯಾರ್ಥಿಗಳ ನಿಲುವು ಈಗ ತದ್ವಿರುದ್ಧವಾಗಿ ಬೆಳೆ ಯುತ್ತಾ ಇದೆ. ಮಾರ್ಚ್, ಏಪ್ರಿಲ್ ತಿಂಗಳು ಬಂತೆಂದರೆ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ, ಪೋಷಕ ಹಾಗೂ ಶಿಕ್ಷಕ ವೃದದವರಿಗೆ ದುಗುಡ, ಪರೀಕ್ಷೆ ಸಮಯದಲ್ಲಿ ಅತಿ ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ಬರುತ್ತದೆ. ಮಕ್ಕಳು ಓದುವುದಿಲ್ಲ ಎಂಬಾರೋಪವನ್ನು ಎಲ್ಲಾ ಪೋಷಕರು ಹೇಳುತ್ತಾರೆ . ಮಕ್ಕಳು ಸದಾ ಟಿ.ವಿ. ನೋಡುತ್ತಾರೆ, ಓದುವುದೆ ಇಲ್ಲ ಎಂಬ ದೂರು ಸರ್ವ ಸಾಮಾನ್ಯ. ವಿದ್ಯಾರ್ಥಿ ಪಬ್ಲಿಕ್ ಪರೀಕ್ಷೆ ಎದುರಿಸಲಿದ್ದಾರೆ ಎಂದರೆ ಅದರ ಆತಂಕವೇ ಬೇರೆ.


ಪೋಷಕರು ತಮ್ಮ ಮಕ್ಕಳು ಶಾಲೆಯಲ್ಲಿ ಕಲಿಕೆಯ ಯಾವ ಹಂತದಲ್ಲಿದ್ದಾರೆ. ಅವನ ನ್ಯೂನ್ಯತೆಗಳೇನು? ಆತನ ಬೇಕು ಬೇಡಗಳೇನು? ಎಂಬ ವಿಷಯಗಳ ಬಗ್ಗೆ ವರ್ಷವಿಡಿ ಸುಮ್ಮನಿದ್ದು ವರ್ಷದ ಕೊನೆಯಲ್ಲಿ ಪರೀಕ್ಷೆ ಸಮೀಪಿಸುತ್ತಿದ್ದಂತೆಯೇ ಮಗುವನ್ನು ಓದಿಸಿ ಬೆಳಕು ಹರಿಯುವುದರಲ್ಲಿ ಆತನಲ್ಲಿ ಪವಾಡವನ್ನು ನಿರೀಕ್ಷಿ ಸುವುದು.ನಾವು ಕಾಣುತ್ತಿರುವ ಪದ್ಧತಿಯ ಒಂದು ಮುಖ. ಇದೆಷ್ಟು ಸರಿ? ಪೋಷಕರು ಸ್ವಲ್ಪ ಚಿಂತಿಸಬೇಕು. ಮಕ್ಕಳಿಗೆ ನನಗೆ ವರ್ಷ ಇಡೀ ಓದಿದ್ದು ನೆನಪಿನಲ್ಲಿ ಉಳಿದಿಲ್ಲ ಎಂಬುದು ಗೊತ್ತಾಗುವ ವೇಳೆಗೆ ಕಾಲ ಮೀರಿರುತ್ತದೆ. ದೈನಂದಿನ ಪಠ್ಯ ವಿಷಯಗಳನ್ನು ಅಂದಂದೆ ಅಭ್ಯಾಸಿಸದೇ ಶಾಲಾ ತರಗತಿಯಲ್ಲಿ ಶಿಕ್ಷಕರು ವರ್ಷಾಂತ್ಯದಲ್ಲಿ ಪುನರಾವರ್ತಿಸುವಾಗ ಈ ಅರಿವು ಮೂಡುತ್ತದೆ. ಶಿಕ್ಷಕರು ಇಂತಹ ಸಮಯದಲ್ಲೆ ಖಿನ್ನತೆ ಮಾನಸಿಕ ಕ್ಲೇಷ ಬರುವುದು ಇದರಿಂದ ಮುಂದೆ ಪರೀಕ್ಷೆಗೆ ಕೂರಲಾಗದ ಅಸಹಾಯಕತೆ ಬರುತ್ತದೆ. ಇದು ಸಮಸ್ಯೆಯ ಮತ್ತೊಂದು ಮುಖ.


ಇನ್ನು ಶಿಕ್ಷಕರಂತೂ ಕಾರಣಾಂತರಗಳಿಂದ ಮಗು ವಿನಲ್ಲಿ ಕಲಿಕೆ ಆಗುತ್ತಿರುವುದೇ ಇಲ್ಲವೆ ಎಂದು ನೋಡ ಲಾಗದೆ, ಪಾಠ ಮುಗಿಸಿ,ಮಾಸಿಕ ಹಾಗೂ ವಾರ್ಷಿಕ ಪರೀಕ್ಷೆಗಳನ್ನು ನಡೆಸಿ ವರ್ಷದ ಕೊನೆಯಲ್ಲಿ ತನ್ನ ವಿದ್ಯಾರ್ಥಿಗಳು ತಾನು ಕಲಿಸಿದ ಪಾಠವನ್ನು ಸಮರ್ಪಕ ವಾಗಿ ಬರೆದು ಉತ್ತಮ ಅಂಕಗಳನ್ನು ಗಳಿಸಬೇಕೆಂದು ಬಯಸುವುದು ಮತ್ತೊಂದೆಡೆ ಆದರೆ ಇದು ಪರೀಕ್ಷೆಯನ್ನು ನಾಮಿಂದ ಎದುರಿಸುತ್ತಿರುವ ರೀತಿ ಮಕ್ಕಳಿಗೆ ಪರೀಕ್ಷಾ ಭಯ ಬಂದೊದಗುವುದಕ್ಕೆ ನಗರ ಪ್ರದೇಶಗಳ ಕೌಟುಂಬಿಕ ಸ್ಥಿತಿ ಗತಿಯು ಕಾರಣ. ತಂದೆ- ತಾಯಿಗಳಿಬ್ಬರು ದುಡಿಯಲೆಬೇಕಾದಂತಹ ಇಂದಿನ ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ರತಿಯೊಂದು ಮನೆ ಯಲ್ಲೂ ಮಕ್ಕಳ ಒಂಟಿತನ, ಮಕ್ಕಳಿಗೆ ವಿದ್ಯಾಭ್ಯಾಸದ ಮೇಲಿನ ಆಸಕ್ತಿ ಕುಂಠಿತವಾಗುತ್ತದೆ. ಇನ್ನು ಮಗು ಟ್ಯೂಷನ್ ಹಾವಳಿಗೆ ತುತ್ತಾಯಿತೆಂದರೆ ಹೇಳುವುದೇ ಬೇಡ.


ಹಿಂದಿನ ಕಾಲದಲ್ಲಿ ಟ್ಯೂಷನ್‌ಗೆ ಮಕ್ಕಳನ್ನು ಕಳುಹಿಸುವುದು ಎಂದರೆ ಅವಮಾನ ಕರ ಎಂಬ ಭಾವನೆಯಿದ್ದರು ಮಗು ಕಲಿಕೆಯಲ್ಲಿ ತುಂಬಾ ಹಿಂದೆ ಬಿದ್ದಿದ್ದಾನೆ ಎಂಬ ದೋರಣೆ ಇತ್ತು ಆದರೆ ಈಗ ಎಲ್.ಕೆ.ಜಿ. ಮಗು ಶಾಲೆಯಿಂದ ಸೀದಾ ಟ್ಯೂಷನ್‌ಗೆ ಹೋಗಿ ಬರುವುದು ಸರ್ವ ಸಾಮಾನ್ಯವಾಗಿದೆ. ಮಗು ಏಳನೇ ತರಗತಿ ಅಥವಾ ೧೦ನೇ ತರಗತಿ ಓದುತ್ತಿರುವಾಗ ಆತನನ್ನು ಟ್ಯೂಷನ್‌ಗೆ ಸೇರಿಸುವುದು ಪಬ್ಲಿಕ್ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ಒಳ್ಳೆಯ ಅಂಕಗಳನ್ನು ಗಳಿಸಿ , ಒಳ್ಳೆಯ ಕಾಲೇಜಿಗೆ ಸೇರಲಿ ಎಂಬ ಆಸೆಯಿಂದ ಈ ವಿಷಯ ವರ್ತುಲದ ಸುಳಿಯಲ್ಲಿ ಸಿಲುಕಿಕೊಂಡು ತಮಗರಿವಿಲ್ಲದಂತೆಯೇ ಮಕ್ಕಳ ಮೇಲಿನ ಒತ್ತಡಕ್ಕೆ ಪ್ರತಿಯೊಬ್ಬರು ಪ್ರತ್ಯಕ್ಷ ಅಥವಾ ರೋಕ್ಷ ಕಾರಣರಾಗಿರುತ್ತಾರೆ.
ಪೋಷಕ, ಶಿಕ್ಷಕ ಹಾಗೂ ವಿದ್ಯಾರ್ಥಿಯ ಪಾತ್ರವೇನು?


ಮಾರ್ಚ್ ಏಪ್ರಿಲ್ ಬಂತೆಂದರೆ ಆಟ, ಸಿನಿಮಾ , ಸ್ನೇಹಿತರ ಸಂಘ ಎಲ್ಲದಕ್ಕೂ ಕತ್ತರಿ, ಓದು, ಓದು ಬರಿ ಓದು. ಸೀಮಿತ ಅವಕಾಶಗಳಿಗಾಗಿರುವ ಅಪಾರ ಪೈಪೋಟಿ ಇಂದಿನ ವಿದ್ಯಾರ್ಥಿಗಳಿಗೆ ಸಂಪೂರ್ಣ ಮನದಟ್ಟಾಗಿದ್ದು ಪೋಷಕರ ತಲೆಯನ್ನು ಕೆಡಿಸುತ್ತದೆ. ಸ್ನೇಹಿತರ ವಲಯದಲ್ಲಿ ಉತ್ತಮ ಅಂಕ ಗಳಿಸಬೇಕೆನ್ನುವ ತುಡಿತ ವಿದ್ಯಾರ್ಥಿಗಳಲ್ಲಿ ಹೆಚ್ಚಾಗುತ್ತಿದ್ದರೆ, ಮಕ್ಕಳು ಸಾಧ್ಯವಾದಷ್ಟು ಹೆಚ್ಚಿನ ಅಂಕಗಳೊಂದಿಗೆ ತೇರ್ಗಡೆಯಾಗಿ ಮೆರಿಟ್ ಸೀಟು ಪಡೆಯಬೇಕೆಂಬ ಹಂಬಲ ಪೋಷಕರಲ್ಲಿ ಇಂದಿನ ದಿನಗಳಲ್ಲಿ ಸಾಮಾನ್ಯ ವಾಗುತ್ತಿರುವ ಈ ಬೆಳವಣಿಗೆ ಸಹಜವಾಗಿಯೇ ಯುವ ಸಮೂಹದ ಮಾನಸಿಕ ಸ್ವಾಸ್ಥ್ಯವನ್ನು ಕದಡುತ್ತದೆ. ಸ್ಪರ್ಧಾತ್ಮಕ ದಿನಗಳಲ್ಲಿ ಗರಿಷ್ಠ ಪೈಪೋಟಿ ಎದುರಿಸಿ ಉತ್ತಮ ಅಂಕಗಳಿಸಬೇಕಾದ ಅನಿವಾರ್ಯತೆ ಮತ್ತು ಪೋಷಕರು, ಶಿಕ್ಷಕರ ಒತ್ತಡಗಳಿಂದಾಗಿ ಜರ್ಝರಿತ ವಾಗುತ್ತಿರುವ ವಿದ್ಯಾರ್ಥಿ ಸಮೂಹ ನಿಧಾನವಾಗಿ ಆತ್ಮಹತ್ಯೆಗಳತ್ತ ವಾಲುತ್ತದೆ.


ಪರೀಕ್ಷೆಗಳಲ್ಲಿ ಉತ್ತಮ ಅಂಕ ಬರದಿದ್ದರೆ ನಪಾಸು ಆದರೆ , ಸಹಪಾಠಿ ಹೆಚ್ಚು ಅಂಕ ಗಳಿಸಿದರೆ ಪೋಷಕರು ಬೈದರೆ , ಹೀಗೆ ಎಲ್ಲದಕ್ಕೂ ಸಾವೊಂದೆ ಆಯ್ಕೆಯಾಗಿರುತ್ತದೆ.ವಿದ್ಯಾರ್ಥಿಗಳ ಮನಸ್ಸಿನ ಪ್ರಶಾಂತತೆ ಹಾಳು ಮಾಡಿ ಅನಗತ್ಯ ಉದ್ವಿಗ್ನತೆ ಉಂಟು ಮಾಡುವ ಪರೀಕ್ಷಾ ಸಮಯ ನಿಜಕ್ಕೂ ವಿದ್ಯಾರ್ಥಿಗಳ ಪಾಲಿಗೆ ಶತ್ರುವೇ? ಇಲ್ಲ ಎನ್ನುತ್ತಾರೆ ಮನಃಶಾಸ್ತ್ರಜ್ಞರು , ಶಿಕ್ಷಕರಲ್ಲಿ ಮರೆಯಾಗುತ್ತಿರುವ ತಿಳಿ ಹೇಳುವ ಪ್ರವೃತ್ತಿ , ಮಕ್ಕಳ ಮನಸ್ಸಿನ ಮೇಲೆ ಪೋಷಕರು ಹೇರುತ್ತಿರುವ ಅತಿಯಾದ ಒತ್ತಡ , ಸೀಮಿತ ಅವಕಾಶಗಳಿಗೆ ಬೆಟ್ಟದಷ್ಟಿರುವ ಪೈಪೋಟಿ ಮೊದಲಾದವು ವಿದ್ಯಾರ್ಥಿಗಳ ಮನಸ್ಥಿತಿ ಮೇಲೆ ಪರಿಣಾಮ ಬೀರುತ್ತಿದ್ದು ಆತ್ಮಹತ್ಯೆಗಳಿಗೆ ಪ್ರೇರೇಪಿಸುತ್ತಿದೆ ಎಂದು ವಿಶ್ಲೇಷಿಸಿದ್ದಾರೆ. ಮನಃಶಾಸ್ತ್ರಜ್ಞರು . ಈ ಮಾತನ್ನು ಸಂಪೂರ್ಣ ಒಪ್ಪುವ ಶಿಕ್ಷಣ ತಜ್ಞರು , ಶಿಕ್ಷಣ ಇಲಾಖೆಯಲ್ಲಿನ ವ್ಯವಸ್ಥೆಯನ್ನು ದೂಷಿಸುತ್ತಾರೆ.ಇಲ್ಲ ಸಲ್ಲದ ವಿಚಾರಗಳಲ್ಲಿ ತಲೆತೂರಿಸಿಕೊಂಡು ಕಾಲ ವ್ಯಯ ಮಾಡುವ ಶಿಕ್ಷಕರ ಒಂದು ಸಂತತಿಯೇ ನಿಧಾನವಾಗಿ ಬೆಳೆಯು ತ್ತಿದೆ. ತರಗತಿಗಳಿಗೆ ಸರಿಯಾಗಿ ಹಾಜರಾಗದಿರುವುದು ,ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವುದು, ವಿದ್ಯಾರ್ಥಿಗಳ ಮನಸ್ಥಿತಿ ಅರಿತು ಕಾರ್ಯ ನಿರ್ವಹಿಸುವುದು. ಮಾನಸಿಕ ಖಿನ್ನತೆ ಉಂಟಾಗುತ್ತದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಮೇಲಿನ ಮಾತು ಎಲ್ಲರಿಗೂ ಅನ್ವಯಿಸದಿದ್ದರೂ

ಸಾವಿಗೆಶರಣಾಗುತ್ತಿರುವ ಸಂಗತಿಗಳು ವರದಿಯಾಗುತ್ತಲೆ ಇವೆ. ಖ್ಯಾತ ವ್ಯಕ್ತಿತ್ವ ವಿಕಾಸನ ತಜ್ಞ ಡಾ|| ಭರತ್ ಚಂದ್ರ ಒಮ್ಮೆ ಉಪನ್ಯಾಸದಲ್ಲಿ ಉಲ್ಲೇಖಿಸಿ ದಂತೆ ಮಗು ತನ್ನನ್ನು ಹಿರಿಯರು,ಬೇರೊಬ್ಬರೊಡನೆ ಹೋಲಿಸಿ , ಹಿಯ್ಯಾಳಿಸಿದಾಗ ಅದನ್ನು ಸವಾಲು ಎಂದು ಪರಿಗಣಿಸಿ , ತಾನೂ ಸಾಧಿಸಿಯೇ ತೀರುತ್ತೇನೆ ಎಂಬ ಛಲದಿಂದ ಕಲಿತರೆ ಖಂಡಿತ ಸಾಧಿಸಲು ಸಾಧ್ಯವಾ ಗುತ್ತದೆ. ಮಗು ಮೊದಲು ತನ್ನಲ್ಲಿ ತಾನು ಆತ್ಮ ವಿಶ್ವಾಸವನ್ನು ಮೂಡಿಸಿಕೊಳ್ಳುವುದು ಅತ್ಯಾವಶ್ಯಕ, ತನ್ನ ಕಲಿಕೆ ತನ್ನ ಏಳಿಗೆಗಾಗಿ ಎಂಬ ಅರಿವು ಮೂಡಿದರೆ ಕಲಿಕೆಯ ಶ್ರಮ ಸಾರ್ಥಕ.
ಪರೀಕ್ಷೆ ಭಯ, ಆತಂಕ, ನಿವಾರಣೆ ಹೇಗೆ?


ತಾನು ಓದಲು ಕೂರುವ ಸ್ಥಳದಲ್ಲಿ ವೇಳಾ ಪಟ್ಟಿ ದಿನಚರಿಯ ಪಟ್ಟಿಯನ್ನು ಸದಾ ಕಣ್ಣಿಗೆ ಕಾಣುವಂತೆ ಇರಿಸಿಕೊಳ್ಳಬೇಕು. ತರಗತಿಯಲ್ಲಿ ತನಗಿಂತ ಹೆಚ್ಚು ಅಂಕ ಪಡೆದ ಸಹಪಾಠಿಯನ್ನು ಕಂಡು ಅಸೂಯೆ ಪಡದೆ ಅವನ ಓದಿನ ವಿಧಾನವನ್ನು ಅರಿತು ತಾನೂ ಅದನ್ನು ಕ್ರಮೇಣ ಅಳವಡಿಸಿಕೊಳ್ಳಬಹುದು.ಓದುವಾಗ ಏಕಾಗ್ರತೆ ಹೆಚ್ಚಲು ತನಗೆ ತಾನೆ ಸಕಾರತ್ಮಾಕವಾದ ಅಂಶಗಳನ್ನು ಹೇಳಿಕೊಂಡು ಓದಲು ಕೂರುವ ಮುನ್ನ ಎಲ್ಲವನ್ನು ಬಳಿಯಲ್ಲಿರಿಸಿಕೊಂಡು ಒಂದೆಡೆ ಏಕಾಗ್ರತೆಯಿಂದ ಕೂತು ಕಲಿಯಲು ಪ್ರಯತ್ನಿಸಬೇಕು. ೧೦ ನಿಮಿಷಗಳ ನಂತರ ಪುಸ್ತಕವನ್ನು ಮುಚ್ಚಿ ಅಲ್ಲಿಯವರೆಗೆ ಓದಿದ್ದನ್ನು ಮರುಕಳಿಸಬೇಕು.


ಪರೀಕ್ಷೆಯ ಸಮಯದಲ್ಲಾಗಲಿ ಇತರ ದಿನಗಳ ಲ್ಲಾಗಲಿ , ವಿದ್ಯಾರ್ಥಿ ೮ ಗಂಟೆಗಳ ನಿದ್ರೆ ಅತ್ಯಾವಶ್ಯಕ. ಪರೀಕ್ಷೆಯ ಸಮಯದಲ್ಲಿ ಓದಿನ ಜೊತೆಗೆ ನಿದ್ರೆಯೂ ಇರಬೇಕು. ಪೋಷಕರು ಮಕ್ಕಳನ್ನು ವಿನಾಕಾರಣ ದೂಷಿಸುವುದಾಗಲಿ , ಮತ್ತೊಬ್ಬರೊಡನೆ ಹೋಲಿಸಿ ಶಿಕ್ಷಿಸುವುದಾಗಲಿ ಮಾಡಬಾರದು.


ಅವನು ಒಬ್ಬ ಡಾಕ್ಟರ್, ಇಂಜಿನಿಯರ್, ತೆಂಡೂ ಲ್ಕರ‍್ನಂತೆ ಕ್ರಿಕೆಟ್ ಆಟಗಾರನಾಗಬೇಕೆಂಬ ಕನಸು ಕಾಣಬಾರದು ಹಾಗೂ ಮಗುವಿನ ಮಾನಸಿಕ ಸಮತೋಲನ ಏರುಪೇರಾಗುವಂತಹ ಒತ್ತಡಗಳನ್ನು ತರಬಾರದು . ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟು ಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಯೂ ವಿದ್ಯಾಭ್ಯಾಸ ಮಾಡಿದ್ದಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾರ್ಥಕವಾಗುತ್ತದೆ.

By admin

ನಿಮ್ಮದೊಂದು ಉತ್ತರ

error: Content is protected !!