ಶಿವಮೊಗ್ಗ,
ಎಲ್ಲಾ ವರ್ಗದ ಕಲ್ಯಾಣಕ್ಕಾಗಿ ಕಾಂಗ್ರೆಸ್ ಪಣತೊಟ್ಟಿದ್ದು, ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದು, ಇದರ ಜೊತೆಗೆ ಪ್ರತಿ ಮನೆಗೂ ‘ಗ್ಯಾರಂಟಿ ಕಾರ್ಡ್’ ನೀಡಲಾಗು ವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು…


ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಬೆಲೆ ಏರಿಕೆಯ ಬಿಸಿಯಲ್ಲಿ ನರಳಿದ್ದಾರೆ. ಬಿಜೆಪಿಯ ವೈಫಲ್ಯದ ಆಡಳಿತಕ್ಕೆ ಆಕ್ರೋಶ ವ್ಯಕ್ತಪಡಿಸು ತ್ತಿದ್ದಾರೆ. ಈ ಸರ್ಕಾರದಲ್ಲಿ ಬಡವರು ಬದುಕು ವುದೇ ಕಷ್ಟವಾಗಿದೆ. ಈ ಎಲ್ಲಾ ವಿಷಯ ಗಳನ್ನು ಮತದಾರರಿಗೆ ಮುಟ್ಟಿಸುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ನಮ್ಮ ನಾಯಕರು ಪಣ ತೊಟ್ಟಿದ್ದಾರೆ ಎಂದರು…


ಭ್ರಷ್ಟಾಚಾರವನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿರುವ ಬಿಜೆಪಿ ಶೇ. ೪೦ ರಷ್ಟು ಕಮಿಷನ್ ಗೆ ಹೆಸರಾಗಿದೆ. ಶಿವಮೊಗ್ಗದ ಲ್ಲಿಯೇ ಸ್ಮಾರ್ಟ್ ಸಿಟಿಗೆ ಸಂಬಂಧಿಸಿದಂತೆ ಸಾಕಷ್ಟು ಅವ್ಯವಹಾರ ನಡೆದಿದೆ. ಹಾಗೆಯೇ, ಭದ್ರಾವತಿಯ ಎರಡು ಕಾರ್ಖಾನೆಗಳ ನೌಕರರ ಬದುಕು ಬೀದಿ ಪಾಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಎರಡೂ ಕಾರ್ಖಾನೆಗಳನ್ನು ಪುನಃ ಆರಂಭಿಸಲಾಗುವುದು ಎಂದರು.
ಎಲ್ಲಾ ಬಡ ಮತ್ತು ಮಧ್ಯಮವರ್ಗದ ಮನೆಗಳಿಗೆ ಪ್ರತಿ ತಿಂಗಳು ೨೦೦ ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಈಗಾಗಲೇ ರಾಷ್ಟ್ರೀಯ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಘೋಷಣೆಯಂತೆ ಮನೆಯ ಜವಾಬ್ದಾರಿ ನಿರ್ವಹಿಸುವ ಪ್ರತಿ ಕುಟುಂಬ ಯಜಮಾನಿಗೆ ತಿಂಗಳಿಗೆ ೨ ಸಾವಿರ ರೂ. ನೀಡಲಾಗುವುದು. ಈ ಎರಡು ಘೋಷಣೆಗಳು ಸೇರಿದಂತೆ ಕಾಂಗ್ರೆಸ್ ಜನರ ಮನೆ ಮನೆಗೆ ತಲುಪಿ ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸಹಿ ಇರುವ ಗ್ಯಾರಂಟಿ ಕಾರ್ಡ್ ನೀಡಲಾಗುವುದು ಎಂದರು.


ಅನ್ನಭಾಗ್ಯ ಯೋಜನೆಯನ್ನು ರಾಜ್ಯ ಸರ್ಕಾರ ಕಸಿದುಕೊಳ್ಳಲು ಹವಣಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈಗ ಇರುವ ೫ ಕೆಜಿ ಅಕ್ಕಿಯ ಜೊತೆಗೆ ಇನ್ನೂ ೫ ಕೆಜಿ ನೀಡಲಾಗುವುದು. ಸ್ತ್ರೀ ಶಕ್ತಿ ಸಂಘಗಳಿಗೆ ಸಬ್ಸಿಡಿ ನೀಡಿ ಸಾಲದ ಮೊತ್ತ ಹೆಚ್ಚಿಸಲಾಗು ವುದು. ರೈತರಿಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು. ಹೀಗೆ ಬಡ ಮತ್ತು ಮಧ್ಯಮ ವರ್ಗದ ಜನರ ಹಿತಕಾಯಲು ಕಾಂಗ್ರೆಸ್ ಬದ್ಧವಾಗಿದೆ ಎಂದರು.
ಬಿಜೆಪಿ ಸರ್ಕಾರ ಬಂದಮೇಲೆ ರಾಜ್ಯದ ಮತ್ತು ದೇಶದ ಸಾಲ ಅತಿ ಹೆಚ್ಚಾಗಿದೆ. ಸುಮಾರು ೧೪೪ ಲಕ್ಷ ಕೋಟಿ ಸಾಲ ಹೆಚ್ಚಳವಾಗಿದೆ. ಬಡವರ ತೆರಿಗೆಯಲ್ಲ ಸಾಲದ ಬಡ್ಡಿಗಾಗಿಯೇ ಹೋಗುತ್ತದೆ. ಆಹಾರ ಪದಾರ್ಥಗಳ ಮೇಲೂ ಜಿ.ಎಸ್. ಟಿ. ಹಾಕಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿ ಕಾರಕ್ಕೆ ಬಂದರೆ ಇದನ್ನು ತೆಗೆದು ಹಾಕಲಿದೆ ಎಂದರು.


ಭಾರತ್ ಜೋಡೋ ಯಾತ್ರೆ ಇಂದು ಮುಕ್ತಾಯವಾಗಿದ್ದು, ಭಾರತ್ ಜೋಡೋ ಎಂದರೆ ಮನಸ್ಸುಗಳನ್ನು ಒಂದಾಗಿಸುವುದು ಎಂದರ್ಥ. ಕೋಮು ದಳ್ಳುರಿಗೆ ಇಡೀ ದೇಶವೇ ನಲುಗಿ ಹೋಗಿದೆ. ಶಾಂತಿ ನಿರ್ಮಿಸಲು ಮನಸ್ಸುಗಳ ಜೊತೆಗೂಡಿಸಲು ರಾಹುಲ್ ಗಾಂಧಿ ಅವರು ೧೨ ರಾಜ್ಯಗಳಲ್ಲಿ ಪಾದಯಾತ್ರೆ ಮಾಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಭೂಪಾಲ್, ಬಲದೇವಕೃಷ್ಣ, ಎಲ್. ಸತ್ಯನಾರಾಯಣ, ಇಕ್ಕೇರಿ ರಮೇಶ್, ನೇತಾಜಿ, ಚಂದ್ರಶೇಖರ್, ಚಂದನ್, ಎನ್.ಡಿ. ಪ್ರವೀಣ್ ಮೊದಲಾದವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!