ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಜತೆಯಲ್ಲಿ ಕೌಟುಂಬಿಕ ಮೌಲ್ಯಗಳಿಗೆ ಮಹತ್ವ ನೀಡುತ್ತ ಬರುತ್ತಿರುವ ರೋವರ್ಸ್ ಕ್ಲಬ್ ಕಾರ್ಯ ಶ್ಲಾಘನೀಯ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ರೋವರ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಮಾತನಾಡಿ, ಕ್ಲಬ್ಗಳಿಗೆ ಪುರು?ರು ಮಾತ್ರ ಬರುವುದು ಸಾಮಾನ್ಯ. ಆದರೆ ರೋವರ್ಸ್ ಕ್ಲಬ್ ಕೌಟುಂಬಿಕ ಕ್ಲಬ್ ಆಗಿದ್ದು, ಮಹಿಳೆಯರು, ಮಕ್ಕಳು ಪಾಲ್ಗೊಳ್ಳುವ ಜತೆಯಲ್ಲಿ ಕ್ರೀಡೆಗಳಿಗೆ ಆದ್ಯತೆ ನೀಡುತ್ತಿರುವುದು ಉತ್ತಮ ಕಾರ್ಯ ಎಂದು ತಿಳಿಸಿದರು.
ರೋವರ್ಸ್ ಕ್ಲಬ್ಗೆ ೪೦ ವ?ಗಳ ಇತಿಹಾಸ ಇದ್ದು, ಅನೇಕ ಕ್ರೀಡಾ ಸಾಧಕರು ರಾಜ್ಯ, ರಾ? ಮಟ್ಟದಲ್ಲಿ ಸಾಧನೆ ಮಾಡಲು ಕ್ಲಬ್ ಸಹಕಾರಿಯಾಗಿದೆ. ಕ್ಲಬ್ ಎಂದರೆ ಮೋಜು ಮಸ್ತಿ ಮಾತ್ರವಲ್ಲ, ಕ್ರೀಡಾ ಪ್ರತಿಭೆಗಳಿಗೂ ಉತ್ತಮ ವೇದಿಕೆ ಎಂದರು.

ರೋವರ್ಸ್ ಕ್ಲಬ್ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ಆರಂಭದಲ್ಲಿ ನಾನು ಕೂಡ ?ಟಲ್ ಬ್ಯಾಡ್ಮಿಂಟನ್ ಕಲಿತ ಜಾಗ ರೋವರ್ಸ್ ಕ್ಲಬ್ ಆಗಿದೆ. ಮುಂದಿನ ದಿನಗಳಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ಅಗತ್ಯ ಪ್ರೋತ್ಸಾಹ ನೀಡಿ ರಾ? ಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದು ಆಶಿಸಿದರು.

ರೋವರ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ಸದಸ್ಯರಿಗೆ ಬಹುಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ರೋವರ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋವರ್ಸ್ ಕ್ಲಬ್ ಅಧ್ಯಕ್ಷ ಕೆ.ಸಿ.ಮಲ್ಲಿಕಾರ್ಜುನಪ್ಪ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ರಾಜ್ಯ, ರಾ? ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಿಕೊಂಡು ಬರಲಾಗಿದೆ. ಕರೊನಾ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿದೆ ಎಂದು ತಿಳಿಸಿದರು.

ಉಪಾಧ್ಯಕ್ಷ ಕೆ.ರವಿ, ಕಾರ್ಯದರ್ಶಿ ಆರ್.ಎಸ್.ದತ್ತಾತ್ರಿ, ಸಹ ಕಾರ್ಯದರ್ಶಿ ಎಚ್.ಕೃ?, ಖಜಾಂಚಿ ಪಿ.ಎಲ್.ನಾಗರಾಜ ಪಾಟ್ಕರ್, ನಿರ್ದೇಶಕರಾದ ಕೆ.ಶಂಕರ ಗನ್ನಿ, ಅ.ಮ.ಪ್ರಕಾಶ್, ಬಸವರಾಜ.ಎಂ.ಆರ್., ವಿನಾಯಕ.ಎಂ.ಬಿ, ಜಿ.ವಿಜಯ್ಕುಮಾರ್, ಚಿನ್ನಪ್ಪ.ಎಸ್., ಎ.ಎಚ್.ಸುನೀಲ್, ಶ್ರೀರಾಮ.ಎ.ಜಿ., ಸದಸ್ಯರು ಉಪಸ್ಥಿತರಿದ್ದರು