ಶಬರೀಶ್ ರೋಜಾ ಷಣ್ಮುಗಂ ಜನುಮದಿನದ ನಿಮಿತ್ತ ಸುನೀತಾ ಕೃಷ್ಣಮೂರ್ತಿ ಅವರ ಲೇಖನ

ಪೂರ್ವಜನ್ಮದ ಪುಣ್ಯದ ಫಲ…
ಯಾವುದೇ ಸಾಧನೆ ಮಾಡಬೇಕಾದರೂ ಪುರುಷ ಪ್ರಯತ್ನ ಅವಶ್ಯಕ. ಪುರುಷ ಪ್ರಯತ್ನದ ದೈವಾನುಗ್ರಹವೂ ಬೇಕು.
ವಿಶೇಷವೆಂದರೆ, ಜನ್ಮಾಂತರದ ಸುಕೃತ ಫಲ ದೊರಕಿದರೆ ಯಾವುದೇ ಕೆಲಸವು ನಡೆಯುತ್ತದೆ. ತಮಿಳುನಾಡಿನ ದಿಂಡುಕ್ಕಲ್ ನಲ್ಲಿ ಇರುವ ಶ್ರೀ ಶ್ರೀ ಸಚ್ಚಿದಾನಂದ ಸ್ವಾಮಿಗಳ ಮರಿ ಮಗನು, ನಡೆದಾಡುವ ಅಯ್ಯಪ್ಪ ಶ್ರೀ ಶ್ರೀ ಶಿವಮೊಗ್ಗ ಸ್ವಾಮೀಜಿ ಎಂದು ಭಕ್ತರಲ್ಲಿ ನೆಲೆಸಿರುವ ಶ್ರೀ ಶ್ರೀ ರೋಜಾ ಷಣ್ಮುಗಂ ಗುರೂಜಿ ಅವರ ಸುಪುತ್ರರಾದ ಶ್ರೀ ಶಬರೀಶ್ ರೋಜಾ ಷಣ್ಮುಗಂ ಸ್ವಾಮಿ ಅವರ ಹುಟ್ಟು ಪೂರ್ವ ಜನ್ಮದ ಸುಕೃತದ ಫಲವೇ ಸರಿ. ದಿಂಡುಕ್ಕಲ್ ನಲ್ಲಿ ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿ ಅವರ ಆಶ್ರಮದಲ್ಲಿ ಅವರ ಶಿಷ್ಯರು ಇಂದು ಅವರನ್ನು ಸ್ಮರಿಸುತ್ತಾರೆ.


ಶ್ರೀ ಶ್ರೀ ಸಚ್ಚಿದಾನಂದ ಆಶ್ರಮದಲ್ಲಿ ಭಜನೆ ಪೂಜೆ ಆರಾಧನೆ ನಿರಂತರವಾಗಿ ನಡೆಯುತ್ತಿದೆ.
ಅಧ್ಯಾತ್ಮ ಸಿದ್ಧಿ ಕೇವಲ ಒಂದು ಜನ್ಮದಲ್ಲಿ ಸಾಧ್ಯವಿಲ್ಲ. ಜನ್ಮಾಂತರದ ಸಾಧನೆ ಈ ಜನ್ಮದಲ್ಲಿ ಮುಂದುವರೆಯುತ್ತದೆ.
ಎಂಟು ತಿಂಗಳ ಮಗುವಿನಿಂದ ಶಬರಿಮಲೆ ಯಾತ್ರೆ ಮಾಡುತ್ತಾ ಪ್ರತಿ ವರ್ಷ ಸನ್ನಿಧಾನದ ದರ್ಶನ ಮಾಡುತ್ತಾ, ವ್ರತ ನಿಯಮಗಳನ್ನು ಆಚರಿಸುತ್ತ 45ನೇ ವರ್ಷದ ಯಾತ್ರೆ ಮಾಡುವ ಮೂಲಕ ಸಾವಿರಾರು ಶಿಷ್ಯರಿಗೆ ಗುರುಸ್ವಾಮಿಯಾಗಿದ್ದಾರೆ.
ಇವರಿಗೆ ಪಿತ್ರಾರ್ಜಿತವಾಗಿ ಅಧ್ಯಾತ್ಮ ಸಾಧನೆ ಒಲಿದು ಬಂದಿದೆ.


“ಋಣಾನುಬಂಧ ರೂಪೇಣ ಪಶು ಪತ್ನಿ ಸುತ ಆಲಯ..” ಎಂಬಂತೆ ಇವರ ಜನ್ಮವು ಗುರು ಪರಂಪರೆಯಲ್ಲಿ ಮುಂದುವರೆಯುತ್ತಿದೆ. ಶ್ರೀ ಶ್ರೀ ರೋಜಾ ಷಣ್ಮುಗಂ ಗುರೂಜಿಯವರ ಮಾನಸ ಗುರುಗಳು ಶ್ರೀ ಸಚ್ಚಿದಾನಂದ ಸ್ವಾಮೀಜಿ.
ಆಶ್ಚರ್ಯವೆಂದರೆ ಶ್ರೀ ಶಬರೀಶ್ ರೋಜಾ ಷಣ್ಮುಗಂ ಸ್ವಾಮೀಜಿ ತಮಗೆ ಬುದ್ಧಿ ಬಂದಾಗಿನಿಂದ ತಮ್ಮ ತಂದೆಯವರನ್ನು ಅಪ್ಪ ಎಂದು ಕರೆಯಲೇ ಇಲ್ಲ .”ಸ್ವಾಮೀಜಿ ” ಎಂದೇ ಸಂಭೋಧನೆ ಮಾಡುತ್ತಾ ಬಂದಿದ್ದಾರೆ. ಈ ಭಕ್ತಿ, ಗೌರವ ಒಂದೇ ರೀತಿ. ದೇವರೇ ನಮ್ಮ ಜೊತೆ ಇದ್ದಾಗ ಇನ್ನಾವ ಚಿಂತೆ.
ತಮ್ಮ ಆತ್ಮೀಯರಿಗೆ ಶ್ರೀ ಶ್ರೀ ರೋಜಾ ಗುರೂಜಿಯವರು ತಮ್ಮ ದೇಹ ತ್ಯಾಗ ಮಾಡುವ ಸಮಯವನ್ನು ತಿಳಿಸಿದ್ದರು. ಶ್ರೀ ಶ್ರೀ ರೋಜಾ ಗುರೂಜಿಯವರು ಅಯ್ಯಪ್ಪ ಭಕ್ತರಿಗೆ ಮಾತ್ರ ಗುರುಗಳಲ್ಲ ವಿಶ್ವದ ಎಲ್ಲಾ ಭಾಗದಲ್ಲಿ ಅವರ ಶಿಷ್ಯರು ಅವರನ್ನು ಆರಾಧ್ಯ ದೈವವಾಗಿ ಪೂಜಿಸುತ್ತಾ ಇದ್ದಾರೆ.


ಶ್ರೀ ಶ್ರೀ ರೋಜಾ ಗುರೂಜಿ ಅವರ ಪವಾಡಗಳು ಅವರ ಯೋಗ ಸಿದ್ಧಿಯ ಫಲವೇ.. ಎಂಬುದರ ಬಗ್ಗೆ ವಿಶೇಷ ಅಧ್ಯಯನ ನಡೆಯಬೇಕಾಗಿದೆ.
ಅವರನ್ನು ಹತ್ತಿರದಿಂದ ಬಲ್ಲ ಶಿಷ್ಯರು ಗುರೂಜಿಯವರ ಪವಾಡಗಳ ನೇರ ದರ್ಶಕರಾಗಿದ್ದಾರೆ.
ಗುರೂಜಿಯವರು ಭೌತಿಕವಾಗಿ ನಮ್ಮೊಡನೆ ಇಲ್ಲದಿದ್ದರೂ ಅವರ ಚೈತನ್ಯ ಇಂದಿಗೂ ಅವರ ಶಿಷ್ಯರಿಗೆ ಮಾರ್ಗದರ್ಶನ ಮಾಡುತ್ತಿದೆ. ಗುರೂಜಿಯವರ ಶಿಷ್ಯ ಕೋಟಿ ಯ ಅಪೇಕ್ಷೆಯಂತೆ ಗುರುಗಳ ಸೇವಾ ಕಾರ್ಯವನ್ನು ಮುಂದುವರಿಸುವ ಸಂಕಲ್ಪ ಶ್ರೀ ಶಬರೀಶ್ ಷಣ್ಮುಗಂ ಸ್ವಾಮಿಯವರದ್ದು ಆಗಿದೆ.
IT ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದು, 3 ಮಾಸ್ಟರ್ ಡಿಗ್ರಿ ಜೊತೆ.. ಹಲವು ವೃತ್ತಿಪರ course ಗಳಲ್ಲಿ ಪರಿಣಿತರು. 32 ದೇಶಗಳಲ್ಲಿ ಸೇವೆ ಸಲ್ಲಿಸಿ ಶ್ರೀ ಶಬರೀಶ್ ರೋಜಾ ಷಣ್ಮುಗಂ ಸ್ವಾಮಿ ಲಂಡನ್ ನಲ್ಲಿ AC ರೂಮಿನಲ್ಲಿ ಆರಾಮಾಗಿ ಕೆಲಸ ಮಾಡುವ ಅವಕಾಶವಿದ್ದರೂ ಬರಿಗಾಲಿನಲ್ಲಿ ನಡೆದಾಡುತ್ತ ಅಯ್ಯಪ್ಪ ಭಕ್ತರ ಸೇವೆ ಮಾಡುತ್ತಾ ಹಳ್ಳಿ ಹಳ್ಳಿಗಳಲ್ಲಿ ಭಕ್ತರಿಗೆ ಮಾರ್ಗದರ್ಶನ ನೀಡುತ್ತಿರುವುದು ಅಯ್ಯಪ್ಪ ಭಕ್ತರಿಗೆ ಸ್ವಾಮಿ ಅಯ್ಯಪ್ಪನೇ ಕಳುಹಿಸಿರುವ ವರದಾನ.
ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಮಾಡುತ್ತಿದ್ದಾರೆ. ಆರೋಗ್ಯ ಶಿಬಿರಗಳನ್ನು ನಡೆಸಿದ್ದಾರೆ. ಸೇವಾ ಕಾರ್ಯವನ್ನು ಮಾಡುವ ಸಂಕಲ್ಪ ತೊಟ್ಟು ಅದೇ ಹಾದಿಯಲ್ಲಿ ಮುಂದುವರೆಯುತ್ತಿದ್ದಾರೆ.


ಗುರುಗಳು ಮತ್ತು ಪೂಜ್ಯ ತಂದೆಯವರ ಮಾತಿನಂತೆ ಸೇವೆ ಮಾಡಿಯೇ ಸಾರ್ಥಕ ಬದುಕು ನಡೆಸುವ ಸಂಕಲ್ಪ ಕೇವಲ ಒಂದು ದಿನದ ನಿರ್ಧಾರ ಅಲ್ಲ.
ಅಧ್ಯಾತ್ಮದ ಹಾದಿಯಲ್ಲಿ ಸಾಗಲು ಪೂರ್ವ ಜನ್ಮದ ಸಾಧನೆಯು ಈ ಜನ್ಮದಲ್ಲಿ ಸಹಕರಿಸುತ್ತದೆ.
ಶ್ರೀ ಶ್ರೀ ರೋಜಾ ಷಣ್ಮುಗಂ ಗುರೂಜಿಯವರ ಸಾಧನೆ ಸಿದ್ಧಿ ಪವಾಡಗಳು ಇವುಗಳ ಬಗ್ಗೆ ವಿಶೇಷ ಅಧ್ಯಯನ ನಡೆಯಬೇಕಾಗಿದೆ. ಇದಕ್ಕಾಗಿ ವಿಶ್ವದ ಎಲ್ಲಾ ಭಾಗಗಳಲ್ಲಿ ಹರಡಿರುವ ಅವರ ಶಿಷ್ಯ ಸಮುದಾಯದ ಅನುಭವಗಳು ದಾಖಲಾಗ ಬೇಕಾಗಿದೆ.
ಸಮಾಜದ ಬೆಳವಣಿಗೆಗೆ ಶ್ರೀ ಶ್ರೀ ರೋಜಾ ಗುರೂಜಿ ಅವರ ಕೊಡುಗೆ ಅಪಾರ. ಅವರ ಹಾದಿಯಲ್ಲಿಯೇ ಅವರ ಪುತ್ರರಾದ ಶ್ರೀ ಶಬರೀಶ್ ರೋಜಾ ಷಣ್ಮುಗಂ ಸ್ವಾಮಿ ನಡೆಯುತ್ತಿರುವುದು ಭಕ್ತರ ಭಾಗ್ಯ.
ಮೃದು ಹೃದಯಿ. ಉತ್ತಮ ವಾಗ್ಮಿ. ಅಸಾಧಾರಣ ಸಂಘಟನಾ ಚಾತುರ್ಯ. ಸದಾ ಕಾರ್ಯ ತತ್ಪರತೆ ಹೊಂದಿರುವ’ ಅತ್ಯುತ್ತಮ ನಾಯಕತ್ವದ ಗುಣ ಹೊಂದಿರುವ ಶ್ರೀ ಶಬರೀಶ್ ಷಣ್ಮುಗಂ ಸ್ವಾಮಿ ತಮ್ಮ ಯಾವುದೇ ಕೆಲಸದಲ್ಲಿ ತೋರಿಸುವ ಶ್ರದ್ಧೆ ಶ್ಲಾಘನೀಯ.
ಕನ್ನಡ. ತಮಿಳು. ತೆಲುಗು .ಇಂಗ್ಲಿಷ್. ಹಿಂದಿ ಹಲವು ಭಾಷೆಗಳಲ್ಲಿ ಮಾತನಾಡುವ.ಸದಾ ಹೊಸದನ್ನು ಆಲೋಚಿಸುವ ಶಕ್ತಿ ಹೊಂದಿರುವ ಶ್ರೀ ಶ್ರೀ ರೋಜಾ ಗುರೂಜಿಯವರ ಸೇವೆ ಮಾಡುವ ದೃಢಸಂಕಲ್ಪ ಹೊಂದಿರುವ ಶ್ರೀ ಶಬರೀಶ್ ರೋಜಾ ಷಣ್ಮುಗಂಸ್ವಾಮಿ ಇವರ ಹುಟ್ಟು ಹಬ್ಬದ ಪ್ರಯುಕ್ತ ಹಲವು ಸೇವಾ ಕಾರ್ಯಗಳು ನಡೆಯುತ್ತಿವೆ.
ಸೇವೆಯು ಕೇವಲ ಹುಟ್ಟಿದ ಹಬ್ಬಕ್ಕೆ ಮಾತ್ರ ಸೀಮಿತವಾಗಿಲ್ಲ ಶ್ರೀ ರೋಜಾ ಗುರೂಜಿಯವರ ಸೇವೆಯು ನಿರಂತರವಾಗಿ ಮುಂದುವರಿಸುವ ಧ್ಯೇಯ ಹೊಂದಿರುವ ಶ್ರೀ ಶಬರೀಶ್ ರೋಜಾ ಷಣ್ಮುಗಂ ಸ್ವಾಮಿ ಅವರು ಯುವ ಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ.
ಶ್ರೀ ಶಬರೀಶ್ ಸ್ವಾಮಿಯವರ ಸೇವೆ ನಿರಂತರವಾಗಿ ಸಮಾಜಕ್ಕೆ ದೊರಕಲಿ ಎಂಬುದು ಶ್ರೀ ಶ್ರೀ ರೋಜಾ ಗುರೂಜಿಯವರ ಶಿಷ್ಯ ವೃಂದದ ಆಶಯ.

By admin

ನಿಮ್ಮದೊಂದು ಉತ್ತರ

You missed

error: Content is protected !!