
ಶಿವಮೊಗ್ಗ,ಜ.7:
ನಗರದ ಜಿಲ್ಲಾ ಪಂಚಾಯಿತಿ ಎದುರಿಗಿರುವ ಭೂಪಾಳಂರವರ ಮನೆಯಲ್ಲಿ ರಾತ್ರಿ ಶಾರ್ಟ್ ಸರ್ಕಿಟ್ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಓರ್ವರ ಬಲಿಯಲ್ಲಿ ಅಂತ್ಯಗೊಂಡಿದೆ. ಭೂಪಾಳರಂರವರ ಪುತ್ರ ಶರತ್ ಸಾವನ್ನಪ್ಪಿದ್ದಾರೆ.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ಘಟನೆಯಲ್ಲಿ ತನ್ನ ಮಗನನ್ನು ಉಳಿಸಲು ಹೋಗಿ ಶರತ್ ಪ್ರಾಣ ಕಳೆದುಕೊಂಡಿದ್ದಾರೆ.
ಇನ್ನೂ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಮನೆಯಲ್ಲಿ ಐವರಿದ್ದರೆನ್ನಲಾಗಿದೆ.
