ಶಿವಮೊಗ್ಗ, ಜ.7:
ತೀರ್ಥಹಳ್ಳಿ ತಾಲ್ಲೂಕಿನ ಹೆದ್ದೂರಿನಲ್ಲಿ ಮೆಸ್ಕಾಂನ ಪವರ್ ಮ್ಯಾನ್ ಒಬ್ಬರು ಕಂಬದಿಂದ ಬಿದ್ದು ಸಾವನ್ನಪ್ಪಿದ್ದ ಘಟನೆ ಬೆನ್ನಲ್ಲೇ ಮತ್ತೊಂದು ಅಂತಹ ಇನ್ನೊಂದು ದುರಂತ ಘಟನೆ ಶಿಕಾರಿಪುರ ತಾಲ್ಲೂಕಿನಲ್ಲಿ ನಡೆದಿದೆ.

ಶಿಕಾರಿಪುರದ ಗ್ರಾಮಾಂತರ ಘಟಕ ವ್ಯಾಪ್ತಿಯಲ್ಲಿ ಬರುವ ಕಪ್ಪನಹಳ್ಳಿ ಯಲ್ಲಿ ಟ್ರಾನ್ಸಪಾರಮರ್ ರಿಪೇರಿ ಮಾಡುತ್ತಿದ್ದ ಸಂದರ್ಭದಲ್ಲಿ ಫವರ್ ಮ್ಯಾನ್ ಒಬ್ಬರು ಸಾವನ್ನಪ್ಪಿದ್ದಾರೆ. ಟ್ರಾನ್ಸ್ಫಾರಮ್ ರಿಪೇರಿ ಮಾಡುತ್ತಿದ್ದ ವೇಳೆ, ಹೈಟೆನ್ಸನ್ ವಿದ್ಯುತ್ ಪ್ರವಹಿಸಿ ಶ್ರೀಶೈಲ ಎಂಬವರು ಸಾವನ್ನಪ್ಪಿದ್ಧಾರೆ.
ಟ್ರಾನ್ಸ್ ಫಾರ್ಮ್ ನ ಸಮಸ್ಯೆಯನ್ನು ಸರಿಪಡಿಸುವ ಸಂಬಂದ ಲೈನ್ ಮ್ಯಾನ್ ಶ್ರೀಶೈಲ ಎಂಬವರು ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಸ್ಠೇಷನ್ನಿಂದ ಎಲ್ಸಿ ಸಹ ತೆಗೆದುಕೊಂಡಿದ್ದಾರೆ.
Power ಮ್ಯಾನ್ ತನ್ನ ಸ್ಟೇಷನ್ ಗೆ ಬೇಟಿ ನೀಡಿ ತಾನು ಕೆಲಸ ಮಾಡಬೇಕಿರುವ ವಿದ್ಯುತ್ ಲೈನ್ಗೆ ಸಂಬಂಧಿಸಿದ ಲೈನ್ನ ವಿದ್ಯುತ್ ಸಪ್ಲೆಯನ್ನು ಸಂಪೂರ್ಣ ಸ್ಥಗಿತಗೊಳಿಸಿಕೊಳ್ಳುತ್ತಾನೆ. ಅದರ ಬಗ್ಗೆ ಖಾತರಿ ಪಡಿಸಿಕೊಂಡೇ ಆತ ಕಂಬವನ್ನಾಗಲಿ, ಟ್ರಾನ್ಸಫಾರಮ್ನ್ನಾಗಲಿ ಹತ್ತುತ್ತಾನೆ.
ಇಲ್ಲಿಯೂ ಸಹ, power ಮ್ಯಾನ್ ಟ್ರಾನ್ಸಫಾರಮ್ನ ಫೀಡರ್ ಲೈನ್ ಸಪ್ಲೆಗಳನ್ನು ಕಡಿತಗೊಳಿಸಿದ್ಧಾನೆ. ಆದಾಗ್ಯೂ ಈ ದುರ್ಘಟನೆ ಸಂಭವಿಸಿದೆ. ಎಲ್ಸಿ ತೆಗೆದುಕೊಂಡಿದ್ಧಾಗಲೂ ವಿದ್ಯುತ್ ಪ್ರವಹಿಸಿದ್ದು ಹೇಗೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ವಿದ್ಯುತ್ ಸಿಬ್ಬಂದಿಗಳು ಹೇಳುವ ಪ್ರಕಾರ, ಬೇರೊಂದು ಲೈನ್ ತಾಗಿ ವಿದ್ಯುತ್ ಪ್ರವಹಿಸಿರಬಹುದು ಎನ್ನಲಾಗುತ್ತಿದೆ. ಇತ್ತೀಚೆಗೆ ರವಿನಾಯಕ್ ಎಂಬ 37 ವರ್ಷದ ಯುವಕ ಸಾವನ್ನಪ್ಪಿದ್ದ ಘಟನೆ ಬೆನ್ನಲ್ಲೆ ಇದೀಗ ಮತ್ತೊಂದು ವಿದ್ಯುತ್ ದುರಂತ ಸಂಭವಿಸಿದೆ.
