ರಾಜ್ಯದಲ್ಲಿ ರೌಡಿಸಂನ ಬೇರು ಸಹಿತ ಕಿತ್ತು ಎಸೆಯುತ್ತೇವೆ. ಒಂದು ವರ್ಷದ ಅವಧಿಯಲ್ಲಿ ಗೃಹ ಸಚಿವನಾಗಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಅವರು ಇಂದು ನಗರದ ಕೋಟೆ ಪೊಲೀಸ್ ಸ್ಟೇಷನ್ ಆವರಣದಲ್ಲಿ ಕರ್ನಾ ಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ನಿರ್ಮಿಸಲಾದ ಪೂರ್ವ ಸಂಚಾರ ಪೊಲೀಸ್ ಠಾಣೆಯ ಹೊಸ ಕಟ್ಟಡವನ್ನು ಉದ್ಘಾಟನೆ ಮಾಡಿ ಶಿವಮೊಗ್ಗ ಜಿಲ್ಲಾ ಪೊಲೀಸ್ಗೆ ಹಸ್ತಾಂ ತರಿಸಿ ಮಾತನಾಡಿದರು.

೧ಕೋಟಿ ೮೧ ಲಕ್ಷ ವೆಚ್ಚದಲ್ಲಿ ಈ ಠಾಣಾ ಕಟ್ಟಡ ಲೋಕಾರ್ಪಣೆಗೊಂಡಿದೆ. ೧೫ ವರ್ಷದ ಹಿಂದೆ ಇಡೀ ರಾಜ್ಯದ ಜನರ ಹಿತವನ್ನು ಕಾಯುವ ಪೊಲೀಸ್ ಇಲಾಖೆ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ವರ್ಷಕ್ಕೆ ೫ ಠಾಣೆಗಳು ನಿರ್ಮಾಣವಾಗುತ್ತಿದ್ದವು. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ ೨೦೦ ಕೋಟಿ ವೆಚ್ಚದಲ್ಲಿ ೧೧೭ ಹೊಸ ಠಾಣೆಗ ಳನ್ನು ನಿರ್ಮಿಸಲಾಗಿದೆ. ಡಬಲ್ ಬೆಡ್ ರೂಂನ ೪೮ ಕ್ವಾರ್ಟಸ್ಗಳನ್ನು ಶಿವಮೊಗ್ಗ ದಲ್ಲಿ ನಿರ್ಮಿಸಲಾಗಿದ್ದು, ಆನಂದಪುರ ೧೨, ಕೋಣಂದೂರು ೧೨, ತೀರ್ಥಹಳ್ಳಿ ೧೨,

ಶಿವಮೊಗ್ಗ ೧೨ ನಿರ್ಮಿಸಿದ್ದೇವೆ. ತೀರ್ಥ ಹಳ್ಳಿಯಲ್ಲಿ ಹಳೆಯ ಪೊಲೀಸ್ ಸ್ಟೇಷನ್ ಒಡೆದು ೪ ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಿದ್ದೇವೆ. ೩.೫ ಕೋಟಿ ವೆಚ್ಚದಲ್ಲಿ ತೀರ್ಥಹಳ್ಳಿಯಲ್ಲಿ ನೂತನ ಅಗ್ನಿ ಶಾಮಕ ಠಾಣೆ ಆಗುತ್ತಿದೆ. ಅಲ್ಲದೆ ಕೇಂದ್ರದ ಅನುದಾನದಲ್ಲಿ ರಾಜ್ಯದಲ್ಲೇ ಒಂದೇ ಒಂದು ನೂತನ ಅತ್ಯಾಧುನಿಕ ವಿಐಪಿ ಕೇಂದ್ರ ಕಾರಾಗೃಹ ಸುಮಾರು ೧೦೮ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದರು.

ನಗರ ಬೆಳೆಯುತ್ತಿದ್ದು, ಶಿವಮೊಗ್ಗಕ್ಕೆ ೨ ಉಪವಿಭಾಗ ಕೊಟ್ಟಿದ್ದೇವೆ. ೨ ಡಿವೈಎಸ್ ಪಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅಪರಾಧ ಪ್ರಮಾಣ ಹೆಚ್ಚಿದ್ದರೂ ಶಿಕ್ಷೆಯ ಪ್ರಮಾಣ ಕಡಿಮೆಯಿತ್ತು. ಕಾರಣ ಸಾಕ್ಷಿಗಳು ಸಿಗುತ್ತಿರಲಿಲ್ಲ. ಅದಕ್ಕಾಗಿ ತರಬೇತಿ ಪಡೆದ ೨೦೬ ಜನ ಸೀನ್ ಆಫ್ ಕ್ರೈಂ ಆಫೀಸರ್ಗ ಳನ್ನು ಪ್ರತಿ ತಾಲ್ಲೂಕಿಗೆ ನಿಯೋಜಿಸಿದ್ದು, ಶಿವಮೊಗ್ಗಕ್ಕೆ ೧೦ ಕೋಟಿ ವೆಚ್ಚದಲ್ಲಿ ಎಫ್ ಎಸ್ಎಲ್ ಲ್ಯಾಬ್ ಕೂಡ ಬರುತ್ತಿದೆ. ಪೊಲೀಸರಿಗೆ ಎಲ್ಲಾ ಠಾಣೆಗಳಲ್ಲಿ ಮೂಲ ಭೂತ ಸೌಲಭ್ಯ ಶುದ್ಧ ಕುಡಿಯುವ ನೀರು ಮತ್ತು ಪ್ರತಿ ಠಾಣೆಗೆ ಕನಿಷ್ಟ ೩ ಜನ ಮಹಿಳಾ ಪೇದೆಗಳನ್ನು ನೀಡಲಾಗುತ್ತಿದೆ. ಇತ್ತೀಚೆಗೆ ಬೇರೆ ಅಪರಾಧಗಳು ಕಮ್ಮಿಯಾಗಿದ್ದು, ಸೈಬರ್ ಕ್ರೈಂ ಜಾಸ್ತಿಯಾಗಿದೆ. ಅದಕ್ಕಾಗಿ ಎಲ್ಲಾ ಕಡೆ ಸೈಬರ್ ಪೊಲೀಸ್ ಸ್ಟೇಷನ್ ಸ್ಥಾಪಿಸಿ ನುರಿತ ಸಿಬ್ಬಂದಿಗಳನ್ನು ನೇಮಿಸುತ್ತಿ ದ್ದೇವೆ ಎಂದರು.

ಜಿಲ್ಲೆಯಲ್ಲಿ ೫೩ ರೌಡಿಶೀಟರ್ಗಳನ್ನು ಗಡಿಪಾರು ಮಾಡಿದ್ದೇವೆ. ಮರ್ಯಾದಸ್ಥ ಜನ ತಲೆಎತ್ತಿ ನಿರ್ಭೀತಿಯಿಂದ ಓಡಾಡುವ ವಾತಾವರಣವಿದೆ. ರೌಡಿಗಳು ಮತ್ತು ಪೊಲೀಸರು ಒಟ್ಟಿಗಿರಲು ಸಾಧ್ಯವೇ ಇಲ್ಲ. ಎಲ್ಲಾ ರೌಡಿಸಂನ್ನು ಬೇರು ಸಹಿತ ಕಿತ್ತು ಹಾಕಿದ್ಧೇವೆ ಎಂದರು.
ಹಿಂದೆ ರಾಜ್ಯದ ದೊಡ್ಡ ದೊಡ್ಡ ರೌಡಿಗಳು ಶಿವಮೊಗ್ಗದಲ್ಲೇ ಇದ್ದರು. ಶಿವ ಮೊಗ್ಗ ರೌಡಿ ಬಿಲ್ಡಿಂಗ್ ಸೆಂಟರ್ ಆಗಿತ್ತು. ಈಗ ಅ ವಾತಾವರಣ ಇಲ್ಲ ಎಂದರು.

ಶಾಸಕ ಕೆ.ಎಸ್.ಈಶ್ವರಪ್ಪ, ಶಾಸಕ ಆಯನೂರು ಮಂಜುನಾಥ್ ಮಾತನಾಡಿದರು. ಈ ಸಂದರ್ಭದಲ್ಲಿ ಪೂರ್ವ ವಲಯ ಡಿಐಜಿಪಿ, ದಾವಣಗೆರೆ ತ್ಯಾಗರಾಜನ್. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ರೋಹನ್ ಜಗದೀಶ್, ಎಎಸ್.ಪಿ ಸಾಗರ, ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ ಶಂಕರ್ನಾಯ್ಕ್, ಕಾರ್ಪೋರೇಟರ್ ಪ್ರಭುರಾಜ್, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.