ಶಿವಮೊಗ್ಗ, ನ್ಯಾಯಾಲಯ ಮತ್ತು ಜನತಾ ನ್ಯಾಯಾ ಲಯದಿಂದ ಕ್ಲೀನ್‌ಚಿಟ್ ಸಿಗದ ಕೆ.ಎಸ್. ಈಶ್ವರಪ್ಪನವರಿಗೆ ಸಚಿವರಾಗುವ ಯಾವ ಅರ್ಹತೆಯೂ ಇಲ್ಲ. ಪಕ್ಷ ಅವರನ್ನು ಸಚಿವ ರನ್ನಾಗಿ ಮಾಡಿದರೆ ಅದು ಜನತಾ ನ್ಯಾಯಾ ಲಯದ ನಿಂದನೆಯಾಗುತ್ತದೆ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ತಿಳಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ಕೆ.ಎಸ್. ಈಶ್ವರಪ್ಪ ಅವರು ಜನರ ಸೇವೆ ಯನ್ನು ಬಿಟ್ಟು ಮಂತ್ರಿಗಿರಿಯ ಹಿಂದೆ ಓಡಿದರು. ಪ್ರತಿಭಟನೆಯ ಮೂಲಕ ಮೊದಲ ದಿನದ ಅಧಿವೇಶನದಲ್ಲಿ ಬಾಗವಹಿಸಲೇ ಇಲ್ಲ. ಮಂತ್ರಿ ಗಿರಿ ಸಿಗುವ ಸೂಚನೆ ಕಂಡ ತಕ್ಷಣವೇ ಮತ್ತೆ ಅಧಿವೇಶನಕ್ಕೆ ಓಡಿದರು. ಆರ್‌ಎಸ್‌ಎಸ್ ಹಿನ್ನೆಲೆಯಲ್ಲಿ ಬಂದ ಈಶ್ವರಪ್ಪ ಶಿಸ್ತಿನ ಬದಲು ಅಶಿಸ್ತಿನ ರೀತಿಯಲ್ಲಿ ವರ್ತಿಸಿದ್ದಾರೆ. ಇವರಿಗೆ ಅಧಿಕಾರ ಬೇಕೆ ಹೊರತು ಜನರ ಸೇವೆಯಲ್ಲ ಎಂದು ಲೇವಡಿ ಮಾಡಿದರು.
ಬೆಳಗಾವಿಯಲ್ಲಿ ಇದ್ದರೂ ಕೂಡ ಸಚಿವ ಸ್ಥಾನ ಕಳೆದುಕೊಳ್ಳಲು ಕಾರಣರಾದ ಸಂತೋಷ್ ಪಾಟೀಲ್ ಅವರ ಮನೆಗೆ ಕನಿಷ್ಠ ಸೌಜನ್ಯಕ್ಕಾದರೂ ಹೋಗಲಿಲ್ಲ. ಸಾಂತ್ವನ ಹೇಳಲಿಲ್ಲ. ನಿಜವಾಗಿಯೂ ಅವರಿಗೆ ಮಾನವೀಯತೆ ಇದ್ದಿದ್ದರೆ ಸರ್ಕಾರದಿಂದ ಬರ ಬೇಕಾಗಿದ್ದ ಗುತ್ತಿಗೆ ಹಣವನ್ನು ಕೊಡಿಸುತ್ತಿದ್ದರು. ಅದನ್ನೂಮಾಡಲಿಲ್ಲ ಎಂದು ದೂರಿದರು.
ಶಿವಮೊಗ್ಗದ ಸಮಸ್ಯೆಗಳು ಹಾಗೆಯೆ ಉಳಿದುಕೊಂಡಿವೆ. ಅಭಿವೃದ್ಧಿ ಮರೆತ ಈಶ್ವರಪ್ಪ ಅಧಿಕಾರದ ಬೆನ್ನುಹಿಡಿದು ಹೊರಟರು. ಧರ್ಮಗಳ ನಡುವೆ ಸಂಘರ್ಷ ತಂದಿಟ್ಟರು. ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಮರೆತರು. ಈಗ ಅಧಿಕಾರಕ್ಕೆ ಮತ್ತು ಟಿಕೆಟ್‌ಗೆ ಹಪಹಪಿಸುತ್ತಿದ್ದಾರೆ. ಈಶ್ವರಪ್ಪನವರಿಗೋಸ್ಕರವೇ ವಿಶೇಷ ನಿಯಮ ರೂಪಿಸಬೇಕು. ಏನೆಂದರೆ ಅವರು ಆಯ್ಕೆ ಯಾದರೆ ಸಾಕು ನೇರವಾಗಿ ಮಂತ್ರಿ ಅಥವಾ ಮುಖ್ಯಮಂತ್ರಿಯಾಗುವಂತೆ ಆಯ್ಕೆ ಮಾಡಬೇಕು ಎಂದು ವ್ಯಂಗ್ಯವಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸರ್ಕಾರ ೬ಸಾವಿರ, ಉಪಾಧ್ಯಕ್ಷರಿಗೆ ೪ಸಾವಿರ, ಸದಸ್ಯರಿಗೆ ೨ಸಾವಿರ ರೂ. ನೀಡುತ್ತಿದೆ. ಆದರೆ ಕೇರಳ ಸರ್ಕಾರ ಅಧ್ಯಕ್ಷರಿಗೆ ೨೦ಸಾವಿರ, ಉಪಾಧ್ಯಕ್ಷರಿಗೆ ೧೮, ಸದಸ್ಯರಿಗೆ ೧೦ಸಾವಿರ ರೂ. ನೀಡುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯಸರ್ಕಾರ ಕೂಡ ನೀಡಬೇಕು. ಮತ್ತು ಗ್ರಾಮ ಪಂಚಾಯಿತಿಗಳನ್ನು ಗಟ್ಟಗೊಳಿಸಬೇಕು. ಹಾಗೂ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನೇ ಜಾರಿಗೊಳಿ ಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂ ಡರುಗಳಾದ ಕಿರಣ್ ಫರ್ನಾಂಡಿಸ್, ಹೆಚ್.ಪಿ. ರುದ್ರೇಶ್, ಹಮೀದ್ ಇದ್ದರು.