ವಮೊಗ್ಗ :ಎನ್ ಪಿಎಸ್ ರದ್ದತಿ ಮಾಡುವಂತೆ ಒತ್ತಾಯಿಸಿ ಮಾರ್ಚ್ ನಂತರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎನ್ ಪಿಎಸ್ ರದ್ದು ಮಾಡಿ ಒಪಿಎಸ್ ನ್ನ ತರಬೇಕೆಂದು ಈಗ ಒಂದು ಗುಂಪು ಬೆಂಗಳೂರಿನಲ್ಲಿ ಹೋರಾಟ ನಡೆಸುತ್ತಿದೆ. ಆದರೆ 7 ನೇ ಹಣಕಾಸು ಆಯೋಗ ಜಾರಿಯಾಗುವ ತನಕ ಸರ್ಕಾರಿ ನೌಕರರ ಸಂಘ ಸುಮ್ಮನಿರಲಿದೆ. ಜಾರಿಯಾದ ನಂತರ ತನ್ನ ನಿಲುವನ್ನ ಪ್ರಕಟಿಸಲಿದೆ ಎಂದರು.

ಎನ್ ಪಿ ಎಸ್ ರದ್ದತಿಗಾಗಿ ಸರ್ಕಾರಿ ನೌಕರರು ದಿಡೀರ್ ಅಂತ ಪ್ರತಿಭಟನೆಗೆ ಕುಳಿತರೆ ಕಚೇರಿಗಳು ಬಾಗಿಲು ಹಾಕಬೇಕಾಗುತ್ತದೆ. ಕಳೆದ ಎರಡು ವರೆ ವರ್ಷದಿಂದ ಸರ್ಕಾರಿ ನೌಕರರ ಸಂಘದಲ್ಲಿ ರಾಜ್ಯಾಧ್ಯಕ್ಷನಾಗಿ ನೌಕರರ ಪರ 22 ಆದೇಶವನ್ನ ಸರ್ಕಾರದಿಂದ ಹೊರಡಿಸಲು ಶ್ರಮಿಸಿದ್ದೇನೆ. ಯಾವ ಅಧ್ಯಕ್ಷರು ಮಾಡದ ಕೆಲಸವನ್ನ ಮಾಡಿ ತೋರಿಸಿದ್ದೇನೆ ಎಂದರು.

ಎರಡುವರೆ ವರ್ಷದ ನಂತರ ಈಗ ಷಡಾಕ್ಷರಿಗೆ ಎನ್ಪಿಎಸ್ ನೆನಪಾಗಿದೆಯಾ ಎಂದು ಬೇರೆಯವರಿಗೆ ಅನಿಸಬಹುದು. ಎರಡುವರೆ ವರ್ಷದಿಂದ ನಾವು ಎನ್ಪಿಎಸ್ ಗೆ ಮೊದಲು ಕೈಹಾಕಿದರೆ ಉಳಿದ ಕೆಲಸಗಳು ಆಗ ಇರಲಿಲ್ಲವೆಂದು ಸ್ಪಷ್ಟಪಡಿಸಿದರು.

ಎನ್ ಪಿಎಸ್ ನೌಕರರ ಸಂಘದಿಂದ ಪ್ರತಿಭಟನೆ. ಸಮಯ ಸಂದರ್ಭ ನೋಡಿಕೊಂಡು ಸಂಘ ಹೋರಾಟಕ್ಕೆ ಇಳಿಯಲಿದೆ ಎಂದರು.

ಸರ್ಕಾರಿ ಹುದ್ದೆಗಳ ಬಗ್ಗೆ ಭರ್ತಿ ಬಗ್ಗೆ ಮಾತನಾಡಿ, ಸರ್ಕಾರ ಭರ್ತಿ ಮಾಡಿಕೊಳ್ಳಲು ಹೋದರೆ ನ್ಯಾಯಾಲಯಕ್ಕೆ ಹೋಗ್ತಾರೆ. ಇನ್ನು ಹೊರಗುತ್ತಿಗೆ ನೌಕರರನ್ನ ತೆಗೆದುಕೊಂಡರೆ ಏಜೆನ್ಸಿಯವರಿಂದ ಸಮಸ್ಯೆಯಾಗುತ್ತಿದೆ. ಹೊರಗುತ್ತಿಗೆ, ಏಜೆನ್ಸಿ ಮೂಲಕ ನೇಮಕಾತಿಗಳನ್ನ ರದ್ದು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವೆ ಎಂದರು.

ಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಮಾರುತಿ, ಮೋಹನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು

By admin

ನಿಮ್ಮದೊಂದು ಉತ್ತರ

error: Content is protected !!