ಶಿವಮೊಗ್ಗ.
ನಾಳೆ ಶಿವಮೊಗ್ಗದಲ್ಲಿ ಹಿಂದು ಜಾಗರಣಾ ವೇದಿಕೆ, ಕರ್ನಾಟಕ ದಕ್ಷಿಣ ವತಿಯಿಂದ ೩ನೇ ತ್ರೈವಾರ್ಷಿಕ ಪ್ರಾಂತ ಸಮ್ಮೇಳನದ ಅಂಗವಾಗಿ ಎನ್ಇಎಸ್ ಮೈದಾನದಲ್ಲಿ ಸಂಜೆ ೪.೩೦ಕ್ಕೆ ಪ್ರಾಂತೀಯ ಕಾರ್ಯಕರ್ತರ ಸಮಾಗಮ
ಸಾರ್ವಜನಿಕ ಸಭೆ ನಡೆಯಲಿದ್ದು, ಮಧ್ಯಾಹ್ನ ಶಿವಮೊಗ್ಗ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ.
ಈ ಸಂಬಂಧ ಇಡೀ ಶಿವಮೊಗ್ಗ ನಗರ ಕೇಸರಿಮಯವಾಗಿದ್ದು, ಪ್ರಮುಖ ವೃತ್ತಗಳನ್ನು ಕೇಸರಿ ಧ್ವಜದಿಂದ ಸಿಂಗಾರಗೊಂಡಿದೆ. ಬಿ.ಹೆಚ್.ರಸ್ತೆ, ದುರ್ಗಿಗುಡಿ, ವಿನೋಬನಗರ, ನೆಹರೂ ರಸ್ತೆ ಹಾಗೂ ಸರ್.ಎಂ.ವಿ.ರಸ್ತೆಯ ಉದ್ದಕ್ಕೂ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಹಿಂದು ಮುಖಂಡರ ಭಾವಚಿತ್ರಗಳೊಂದಿಗೆ ಸಿಂಗರಿಸಲಾಗಿದೆ.
ಮದ್ಯ ಮಾರಾಟ ನಿಷೇಧ:
ನಾಳಿನ ಕಾರ್ಯಕ್ರಮದ ನಿಮಿತ್ತ ಇಂದು ಸಂಜೆ ಆರರಿಂದ ನಾಳೆ ಇಡೀ ದಿನ ಮದ್ಯ ಮಾರಾಟ ನಿಷೇದಿಸಲಾಗಿದೆ.