ಶಿವಮೊಗ್ಗ: ಸರ್ಜಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕರು ಹಿಂದೆ ಆರ್ಎಸ್ಎಸ್ ಮೂಲ ಸಂಘಟನೆಯ ಪ್ರಮುಖರು ಆಗಿದ್ದ ಡಾ.ಸರ್ಜಿ ಅವರು ಬಿಜೆಪಿಗೆ ಅದ್ಧೂರಿಯಾಗಿ ಸೇರ್ಪಡೆ ಹೊಂದಿದ್ದಾರೆ. ಇದೇನು ಅಂತಹ ದೊಡ್ಡ ಸಂಭ್ರಮವೇ.? ಆರ್ಎಸ್ಎಸ್ ಮೂಲದಲ್ಲಿರುವವರು ಬಿಜೆಪಿ ಸೇರ್ಪಡೆಗೊಳ್ಳುವುದು ದೊಡ್ಡ ಸುದ್ದಿಯೇ ಎಂದು ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಇಂದಿಲ್ಲಿ ತಿಳಿಸಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಡಾ.ಸರ್ಜಿ ಅವರ ಪಕ್ಷಕ್ಕೆ ಅವರು ಸೇರ್ಪಡೆ ಹೊಂದಿದ್ದಾರೆ ಅಷ್ಟೆ ಅದರಲ್ಲೇನು ವಿಶೇಷವಿದೆ. ಈಗ ಸಂತೋಷ್ ಜೀ, ಸಿ.ಟಿ.ರವಿ ಅವರ ಜೊತೆ ಸೇರಿಕೊಂಡು ಬಿಜೆಪಿಯಲ್ಲಿ ಭಿನ್ನಮತ ಸೃಷ್ಠಿಸುತ್ತಿರುವ ಕೆ.ಎಸ್.ಈಶ್ವರಪ್ಪ ಅವರನ್ನು ಮತ್ತೆ ಅದೇ ಪಕ್ಷಕ್ಕೆ ಅದ್ದೂರಿಯಾಗಿ ಸೇರಿಸಿಕೊಳ್ಳಿ ಎಂದು ಕೆಣಕಿದರು.