ನೀರಿನ ಕಂದಾಯ ಪರಿಷ್ಕರಣೆ : ವ್ಯತ್ಯಾಸದ ಮೊತ್ತ ಪಾವತಿಸಲು ಸೂಚನೆ
ಶಿವಮೊಗ್ಗ ಡಿ. 20:
ಶಿವಮೊಗ್ಗ ನಗರವನ್ನು ನಗರಸಭೆಯಿಂದ ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲಾದ ಪ್ರಯುಕ್ತ ನೀರಿನ ದರವನ್ನು ಕರ್ನಾಟಕ ಸರ್ಕಾರದ ಆದೇಶ ಹಾಗೂ ಮಹಾನಗರಪಾಲಿಕೆಯ ನಿರ್ದೇಶನದಂತೆ ಪರಿಷ್ಕರಿಸಲಾಗಿದೆ.
ಪಾಲಿಕೆಗಳಿಗೆ ಅನ್ವಯಿಸುವ ದರದಂತೆ ಮೀಟರ್ ರಹಿತ ಸಂಪರ್ಕಗಳಿಗೆ ಕನಿಷ್ಟ ದರ ಪ್ರತಿ ತಿಂಗಳು ಗೃಹಬಳಕೆ ಸಂಪರ್ಕಕ್ಕೆ ರೂ.175, ಗೃಹೇತರ ಸಂಪರ್ಕಕ್ಕೆ ರೂ.350 ಕ್ಕೆ ನಿಗದಿಪಡಿಸಲಾಗಿರುತ್ತದೆ. 2022-23 ನೇ ಸಾಲಿನಿಂದ ನೀರಿನ ಕಂದಾಯವನ್ನು ಪರಿಷ್ಕøತ ದರದಂತೆ ಪಾವತಿಸಲು ಹಾಗೂ ಈಗಾಗಲೇ 2022-23 ನೇ ಸಾಲಿನ ನೀರಿನ ಕಂದಾಯವನ್ನು ಪಾವತಿಸಿರುವ ಖಾತೆದಾರರಿಗೆ ಪರಿಷ್ಕøತ ದರದ ವ್ಯತ್ಯಾಸದ ಮೊತ್ತವನ್ನು ಪಾವತಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗದ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.