ಸಾಂದರ್ಭಿಕ ಚಿತ್ರ

ನವದೆಹಲಿ,ಸೆ.29:

ಎರಡು ಸಾವಿರದ ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸುವ ನಿರ್ಧಾರ ಸರ್ಕಾರಕ್ಕೆ ಇಲ್ಲ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ತಿಳಿಸಿದ್ದಾರೆ.
ಈ ಕುರಿತು ಶನಿವಾರ ಲೋಕಸಭೆಗೆ ಲಿಖಿತ ರೂಪದ ಉತ್ತರ ನೀಡಿದ ಅವರು, ಲಾಕ್‌ಡೌನ್‌ ಕಾರಣಕ್ಕಾಗಿ ಮುದ್ರಣವನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಆರ್‌ಬಿಐಗೆ ಸೂಚನೆ ನೀಡಲಾಗಿತ್ತು ಎಂದರು.
‘2019–20 ಮತ್ತು 2020–21ರ ಅವಧಿಯಲ್ಲಿ ₹ 2 ಸಾವಿರದ ಒಂದೇ ಒಂದು ನೋಟು ಸಹ ಮುದ್ರಣ ಆಗಿಲ್ಲ.
‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾರ್ಗಸೂಚಿಯ ಅನ್ವಯ ನೋಟುಗಳ ಮುದ್ರಣ ಕಾರ್ಯವು ಹಂತ ಹಂತವಾಗಿ ಆರಂಭವಾಗಿದೆ. ‘2020ರ ಮಾರ್ಚ್‌ 31ರ ಅಂತ್ಯದ ವೇಳೆಗೆ ₹ 2 ಸಾವಿರದ ಮುಖಬೆಲೆಯ 27,398 ನೋಟುಗಳು ಚಲಾವಣೆಯಲ್ಲಿ ಇವೆ. 2019ರ ಮಾರ್ಚ್‌ 31ರ ಅಂತ್ಯದ ವೇಳೆಗೆ 32,910 ನೋಟುಗಳು ಚಲಾವಣೆಯಲ್ಲಿ ಇದ್ದವು ಎಂದು ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!