ಚನೈ,ಅ.15:
ಚೆನ್ನೈವಿಮಾನ ನಿಲ್ದಾಣದಲ್ಲಿ ನಡೆದ ಕ್ಯಾನ್ಸರ್ ಜಾಗೃತಿ ಅಂಗವಾಗಿ ಪಿಂಕ್ ಮ್ಯಾರಥಾನ್ ಸಂಸ್ಥೆ ನಡೆಸಿದ ವಿಶೇಷ ಸಮಾರಂಭದಲ್ಲಿ ಶ್ರೀ ಶಬರೀಶ್ ಸ್ವಾಮಿಯವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಈ ಸಮಾರಂಭವನ್ನು ತಮಿಳುನಾಡಿನ ರಾಜ್ಯಪಾಲರಾದ ಆರ್. ಏನ್ . ರವಿರವರು ಉದ್ಘಾಟಿಸಿದರು.
ಇದೇ ಸಂಧರ್ಭದಲ್ಲಿ ಇತರ ಹಿರಿಯ ಗಣ್ಯ ವ್ಯಕ್ತಿಗಳು ವಿಮಾನ ನಿಲ್ದಾಣದ ಆವರಣದಲ್ಲಿ ಬಹಳ ಸಂಯಮದಿಂದ ಈ ಕಾರ್ಯಕ್ರಮವನ್ನು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ನಮ್ಮ ಶಿವಮೊಗ್ಗದ ಶ್ರೀ ಶಬರೀಶ್ ಸ್ವಾಮಿ ಯವರು ಮಾತನಾಡಿ ಈ ಪಿಂಕ್ ಮ್ಯಾರಥಾನ್ ನ ಇತಿಹಾಸವನ್ನು ವಿವರಿಸಿದರು.
ಚಾರ್ಲೆಟ್ ಎಂಬ ಮಹಿಳೆ 1992ರಲ್ಲಿ ಕ್ಯಾನ್ಸರ್ ಅಂಗವಾಗಿ ನಿಧಿ ಸಂಗ್ರಹಣೆಗಾಗಿ ತನ್ನ ಪಿಂಕ್ ರಿಬ್ಬನ್ ಅನ್ನು ಮಡಿಚಿ ಆರಂಭಿಸಿದ ಗಳಿಗೆಯನ್ನು ಸ್ಮರಿಸಿ ಇವತ್ತು ಪ್ರಪಂಚದಾದ್ಯಂತ ಪಿಂಕ್ ಮ್ಯಾರಥಾನ್ ನಡೆಸಲಾಗಿದೆ. ವಿಶೇಷವಾಗಿ ಈ ಮ್ಯಾರಥಾನ್ ನ ಸಂಸ್ಥಾಪಕರಾದ ಆನಂದ್ ಕುಮಾರ್ ರವರ ಕಾರ್ಯವನ್ನು ಸ್ಮರಿಸಿದರು.
1985 ರಲ್ಲಿ ಕ್ಯಾನ್ಸರ್ ಸೊಸೈಟಿ ಯವರು ಅಮೇರಿಕಾದಲ್ಲಿ ಆರಂಭಿಸಿದ್ದು ಇವತ್ತು ಹಲವಾರು ರಾಷ್ಟ್ರಗಳಲ್ಲಿ ತಾವು ಖುದ್ದಾಗಿ ಭೇಟಿಯಾಗಿ ಕ್ಯಾನ್ಸರ್ ಜಾಗೃತಿ ಬಗ್ಗೆ ವಿವರಿಸುವುದಾಗಿ ತಿಳಿಸಿದರು.
ಈ ಪಿಂಕ್ ಮ್ಯಾರಥಾನ್ ದೇಶದಾದ್ಯಂತ ಎಲ್ಲಾ ಕಡೆ ನಡೆಯುತಿದ್ದು ನಮ್ಮ ಶಬರೀಶ್ ಸ್ವಾಮಿ ಶಿಷ್ಯ ವೃಂದ ಹಾಗು ರೋಜಾ ಗುರೂಜಿ ಶಿಷ್ಯ ವೃಂದ ದಿಂದ ಸದ್ಯದಲ್ಲೇ ಕರ್ನಾಟಕದಲ್ಲಿ ಮತ್ತು ಇತರ ರಾಜ್ಯಗಳಲ್ಲಿ ಈ ಸಂಸ್ಥೆಯೊಂದಿಗೆ ಕೈ ಜೋಡಿಸಿ ಜನರಿಗೆ ಕ್ಯಾನ್ಸರ್ ಜಾಗೃತಿ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದರು.
ಈ ಸಮಾರಂಭದಲ್ಲಿ ಭಾಸ್ಕರ್, ಜಮ್ ಟಿವಿಯ ಪೊಂಕಿ, ಎಳವಳಗನ್, ಸೆಲ್ವರಾಜ್, ಜಯಶ್ರೀ ಮತ್ತು ಇತರರು ಪಾಲ್ಗೊಂಡರು.
ಈ ಕ್ಯಾನ್ಸರ್ ನಿಂದ ಪೀಡಿತರನ್ನ ಬಹಳ ಸಂಯಮದಿಂದ ಮಾತನಾಡಿಸಿ ಇದರ ಜಾಗೃತಿ ಬಗ್ಗೆ ವಿವರಿಸಿ ಅವರಿಗೆ ಆತ್ಮ ಸ್ಥೈರ್ಯ ಹಾಗು ಧೈರ್ಯಕೊಡಬೇಕು. ಅವರಿಗಾಗಿ ಮುಂದಿನ ದಿನಗಳಲ್ಲಿ ತನ್ನ ಶಿಷ್ಯ ವೃಂದ ಹಾಗು ಐಟಿ ಸಹೋದ್ಯೋಗಿಗಳು ಮುಂಚೋಳಿನಲ್ಲಿ ನಿಲ್ಲುತ್ತಾರೆ ಎಂದು ತಿಳಿಸಿದರು.