ಅಬುಧಾಬಿ: 13ನೇ ಅವೃತ್ತಿಯ ಐಪಿಎಲ್ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.
ಅಬುಧಾಬಿಯ ಶೇಕ್ ಜಾಯೇದ್ ಸ್ಟೇಡಿಯಂ ನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಎದುರಾಗಲಿದ್ದು, ಚೆನ್ನೈ ನಾಯಕ ಎಂ.ಎಸ್ ಧೋನಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಇನ್ನು ಎರಡು ತಂಡಗಳು 28 ಬಾರಿ ಮುಖಾಮುಖಿಯಾಗಿದ್ದು ಚೆನ್ನೈ 11 ಬಾರಿ ಗೆಲುವು ಕಂಡರೆ, ಮುಂಬೈ 17 ಬಾರಿ ಜಯಗಳಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ : ಶೇನ್ ವಾಟ್ಸನ್, ಮುರುಳಿ ವಿಜಯ್, ಅಂಬಟಿ ರಾಯಡು, ಫಾಫ್ ಡುಪ್ಲೆಸಿಸ್, ಎಂ.ಎಸ್ ಧೋನಿ(ನಾಯಕ) ಕೇಧಾರ್ ಜಾಧವ್, ರವೀಂದ್ರ ಜಡೇಜಾ, ಸ್ಯಾಮ್ ಕರನ್, ಪಿಯೂಷ್ ಚಾವ್ಲ, ದೀಪಕ್ ಚಹರ್, ಲುಂಗಿ ಎನ್ ಗಿಡಿ
ಮುಂಬೈ ಇಂಡಿಯನ್ಸ್ : ರೋಹಿತ್ ಶರ್ಮಾ(ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಕಿರೆನ್ ಪೊಲ್ಲಾರ್ಡ್, ರಾಹುಲ್ ಚಹಾರ್, ಟ್ರೆಂಟ್ ಬೌಲ್ಟ್, ಜಸ್ ಪ್ರೀತ್ ಬುಮ್ರಾ, ಜೇಮ್ಸ್ ಪ್ಯಾಟಿನ್ಸನ್

By admin

ನಿಮ್ಮದೊಂದು ಉತ್ತರ

error: Content is protected !!