ಶಿವಮೊಗ್ಗ: ನವುಲೆಯ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ v/s ಗೋವಾ ರಣಜಿ ಕ್ರಿಕೆಟ್ ಪಂದ್ಯಾವಳಿಯ ಮೊದಲ ದಿನದ ಆಟ ಮುಕ್ತಾಯವಾಗಿದೆ.

ಕರ್ನಾಟಕ ತಂಡ 5 ವಿಕೆಟ್ ಕಳೆದುಕೊಂಡು 222 ರನ್ ಗಳಿಸಿದೆ. ಗೋವಾ ತಂಡದ ಪರ ಅರ್ಜುನ್ ತೆಂಡುಲ್ಕರ್ 3 ವಿಕೆಟ್ ಪಡೆದು ಬೌಲಿಂಗ್ ವಿಭಾಗದಲ್ಲಿ ಗಮನ ಸೆಳೆದರು.
ಕರ್ನಾಟಕ ತಂಡದ ನಿಕಿನ್ ಜೋಸ್ 3, ಮಯಾಂಕ್ ಅಗರ್ವಾಲ್ 28, ಕೆ.ಎಲ್.ಶ್ರೀಜಿತ್ 0, ಸ್ಮರಣ್.ಆರ್ 3, ಅಭಿನವ್ ಮನೋಹರ್ 37 ರನ್ ಗಳಿಸಿ ಔಟ್ ಆಗಿದ್ದಾರೆ. ಕರುಣ್ ನಾಯರ್ 86 ರನ್, ಶ್ರೇಯಸ್ ಗೋಪಾಲ್ 48 ರನ್ ಗಳಿಸಿ ಸದ್ಯ ಕರ್ನಾಟಕ ತಂಡಕ್ಕೆ ಆಸರೆಯಾಗಿದ್ದಾರೆ. ನಾಳೆ ಈ ಜೋಡಿ ಮತ್ತಷ್ಟು ರನ್ ಗಳಿಸಿ ಗೋವಾ ತಂಡಕ್ಕೆ ದೊಡ್ಡ ಚಾಲೆಂಜ್ ಒಡ್ಡುವ ಸಾಧ್ಯತೆ ಇದೆ.