ಬಿನ್ನಾಭಿಪ್ರಾಯಗಳು ರಾಜಕಾರಣದಲ್ಲಿ ಸ್ವಾಭಾವಿಕ. ಎಲ್ಲಾ ಪಕ್ಷಗಳು ಅದಕ್ಕೆ ಹೊರತಾಗಿಲ್ಲ. ಆದರೆ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಎಲ್ಲಾ ಪಕ್ಷಗಳು ಬದ್ಧರಾಗಿರಬೇಕಾಗುತ್ತದೆ. ೨ ಬಸ್ಸಿನಲ್ಲಿ ಕಾಂಗ್ರೆಸ್‌ನ ಸಿದ್ಧರಾಮಯ್ಯ ಮತ್ತೆ ಡಿ.ಕೆ.ಶಿವಕುಮಾರ್ ಬೇರೆ ಬೇರೆಯಾಗಿ ಪ್ರಚಾರಕ್ಕೆ ತೀರ್ಮಾನಿಸಿದ್ದರು. ಆದರೆ ಈಗ ಹೈಕಮಾಂಡ್ ಸೂಚನೆಯಂತೆ ಒಟ್ಟಾಗಿ ಪ್ರಚಾರ ಕಾರ್ಯ ಕೈಗೊಳ್ಳುವುದಾಗಿ ಹೇಳುತ್ತಿದ್ದಾರೆ. ಆದರೆ ಅದು ಅವರ ಪಕ್ಷಕ್ಕೆ ಬಿಟ್ಟ ವಿಷಯ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಶ್ನೆಯೊಂದಕ್ಕೆ ಉತ್ತರಿಸಿ ಮೇಲಿನವರ ತೀರ್ಮಾನವನ್ನು ಡಿಕೆಶಿ ಮತ್ತು ಸಿದ್ಧರಾಮಯ್ಯ ಒಪ್ಪಿಕೊಂಡು ಬಂದಿದ್ದಾರೆ. ಅದನ್ನು ಪಾಲಿಸಿದಾಗ ಮಾತ್ರ ಪಕ್ಷದಲ್ಲಿ ಶಿಸ್ತು ಬರುತ್ತದೆ. ಕಾರ್ಯಕರ್ತರಲ್ಲಿ ಹುಮಸ್ಸು ಬರುತ್ತದೆ. ರಾಜ್ಯಕ್ಕೆ ಬಂದ ಮೇಲೆ ಸಿದ್ಧರಾಮಯ್ಯನವರು ತಮ್ಮ ಬೆಂಬಲಿಗರ ಪ್ರತ್ಯೇಕ ಸಭೆ ನಡೆಸಿದ್ದಾರೆ. ಅದು ಅವರಿಗೆ ರಕ್ತಗತವಾಗಿ ಬಂದಿದ್ದು, ಹಿಂದೆ ದೇವೇಗೌಡರ ಒಟ್ಟಿಗೆ ಇದ್ದಾಗಲೂ ದೇವೇಗೌಡರು ಸಿದ್ಧರಾಮಯ್ಯನವರಿಗೆ ಅಹಿಂದ ಸಮಾವೇಶ ಮಾಡಬೇಡಿ ಎಂದಿದ್ದರು. ಅವರು ದೇವೇಗೌಡರ ಮಾತನ್ನು ಧಿಕ್ಕರಿಸಿ ಸಮಾವೇಶ ಮಾಡಿದ್ದಕ್ಕೆ ಅವರನ್ನು ಪಕ್ಷದಿಂದ ಕಿತ್ತುಹಾಕಲಾಗಿತ್ತು.


ಕಾಂಗ್ರೆಸ್ ಕಾರ್ಯಕರ್ತರು ಸಿದ್ಧರಾಮಯ್ಯ ಉತ್ತಮ ಮುಖ್ಯಮಂತ್ರಿ ಎಂದು ಹೇಳುತ್ತಿರುವಾಗ ಅವರು ಕಾರ್ಯಕರ್ತರ ಮತ್ತು ಕೇಂದ್ರದ ನಾಯಕರ ಮಾತಿಗೆ ಮಣ್ಣನೆ ನೀಡಬೇಕು. ರಾಜ್ಯಕ್ಕೆ ಬಂದ ಮೇಲೆ ೨ ಗುಂಪು ಮಾಡಿದರೆ ಪಕ್ಷದಲ್ಲಿ ಶಿಸ್ತು ಬರುವುದಿಲ್ಲ ಎಂದರು.
ಮುಸ್ಲಿಂ ಮತ ವಿಭಜನೆಯ ಕುರಿತು ಕಾಂಗ್ರೆಸ್ ನಾಯಕರ ಸಭೆಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಸ್ಲಿಂರ ಒಟಿನ ಬಗ್ಗೆ ಈಗ ಕಾಂಗ್ರೆಸ್‌ಗೆ ಭಯ ಶುರುವಾಗಿದೆ. ಒಂದು ಕಡೆ ಹೆಚ್.ಡಿ.ಕುಮಾರಸ್ವಾಮಿ ಪಂಚರತ್ನ ಯಾಥ್ರೆಯ ಮೂಲಕ ಹೊರಟಿದ್ದು, ಅವರ ಕಾರ್ಯಕ್ರಮದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂರು ಭಾಗವಹಿಸಿದ್ದಾರೆ. ಇನ್ನೊಂದೆಡೆ ಆಮ್‌ಆದ್ಮಿ ಪಾರ್ಟಿ ಕೂಡ ಮುಸ್ಲಿಂ ಬೆಂಬಲ ತನಗೆ ಎಂದು ಹೇಳುತ್ತಿದೆ. ಇದರಿಂದ ಕಾಂಗ್ರೆಸ್ ಮುಸ್ಲಿಂ ಒಟಿನ ಬುಟ್ಟಿಗೆ ಬೇರೆ ಪಕ್ಷಗಳು ಕೈ ಹಾಕಿದ್ದಾರೆ ಎಂಬ ಭಯ ಅವರನ್ನು ಕಾಡುತ್ತಿದೆ. ಬಿಜೆಪಿಗೆ ಆ ಭಯವಿಲ್ಲ. ಹಿಂದುತ್ವದ ಮೇಲೆಯೇ ಬಿಜೆಪಿ ಹೋರಾಟ ಮಾಡಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಮುಂದಿನ ಚುನಾವಣೆಯಲ್ಲೂ ಕೂಡ ಹಿಂದುತ್ವದ ಆಧಾರದ ಮೇಲೆಯೇ ಮತ ಯಾಚಿಸಿ ರಾಜ್ಯದಲ್ಲಿ ಚುನಾವಣೆ ನಡೆಸಿ ೧೫೦ಕ್ಕೂ ಹೆಚ್ಚು ಸ್ಥಾನ ಗಳಿಸುತ್ತೇವೆ ಎಂದರು.


ಸಚಿವ ಸಂಪುಟ ಸೇರ್ಪಡೆ ಬಗ್ಗೆ ಕೇಂದ್ರದ ನಾಯಕರು ತೀರ್ಮಾನಿಸುತ್ತಾರೆ. ಅವರು ಮಂತ್ರಿಯಾಗು ಎಂದರೆ ಆಗುತ್ತೇನೆ. ಇಲ್ಲದಿದ್ದರೆ ಸಾಮಾನ್ಯ ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದರು. ಸಿ.ಎಂ.ದೆಹಲಿ ಭೇಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರ ಗಡಿವಿವಾದ ತಾರಕಕ್ಕೇರಿದೆ. ಅಲ್ಲಿನ ನಾಯಕರು ರಾಜಕೀಯ ತೆವಲಿಗಾಗಿ ಜನಸಾಮಾನ್ಯರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಸಿ.ಎಂ.ಬೊಮ್ಮಾಯಿ ಕೇಂದ್ರ ಗೃಹಸಚಿವರನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸಿದ್ದು, ೨ ಸರ್ಕಾರಗಳ ಪ್ರತಿನಿಧಿಗಳು ಭಾಗವಹಿಸಿ ಪರಿಹಾರ ಕಂಡುಕೊಳ್ಳುತ್ತಾರೆ. ಮಹಾರಾಷ್ಟ್ರದ ಜನ ಕರ್ನಾಟಕದಲ್ಲಿ ಇದ್ದಾರೆ. ಕರ್ನಾಟಕದವರು ಕೂಡ ಅಲ್ಲಿ ಇದ್ದಾರೆ ಅಣ್ಣ ತಮ್ಮಂದಿರಂತೆ ಒಟ್ಟಾಗಿ ಬಾಳುವೆ ನಡೆಸುತ್ತಿದ್ದಾರೆ ಇದನ್ನು ಅರಿತು ಯಾವುದೇ ರಾಜಕೀಯ ಮಾಡದೆ ಸಮಸ್ಯೆ ಬಗೆಹರಿಸಲು ಉಭಯ ಸರ್ಕಾರ ಕೂಡ ಪ್ರಯತ್ನ ನಡೆಸುತ್ತದೆ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!