ಶಿವಮೊಗ್ಗ: ಸಾಗರ ತಾಲ್ಲೂಕಿನ ಶಾಂತಿನಗರದಲ್ಲಿ ಯುವಕನೋರ್ವ ಮನೆಯಲ್ಲಿ ಬಲ್ಬ್ ಬದಲಿಸುವಾಗ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ವರದಿಯಾಗಿದೆ.
ಶಾಂತಿನಗರ ರೂಪ್ಸಿಂಗ್ (೩೩) ಮೃತ ಯುವಕ. ಗುರುವಾರ ಮನೆಯಲ್ಲಿ ಹಾಳಾಗಿದ್ದ ಬಲ್ಬ್ ತೆಗೆದು ಬೇರೆ ಬಲ್ಬ್ ಹಾಕಲು ಹೋದಾಗ ವಿದ್ಯುತ್ ತಗುಲಿ ಗಂಭೀರವಾಗಿದ್ದ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಮೃತಪಟ್ಟಿದ್ದಾನೆ.
ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.