ಪತ್ರಿಕೆಗಳನ್ನು ನಡೆಸುವುದು ತುಂಬಾ ಕಷ್ಟಕರವಾಗಿದೆ. ಪತ್ರಕರ್ತರು ಅನಿವಾರ್ಯವಾಗಿ ಆನ್‌ಲೈನ್ ಪೋರ್ಟಲ್ ಕಡೆ ಧಾವಿಸುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಇಂದು ದುರ್ಗಿಗುಡಿ ಮುಖ್ಯರಸ್ತೆಯಲ್ಲಿರುವ ಸುದ್ದಿಸಾರ ಕಚೇರಿಯಲ್ಲಿ ಸುದ್ದಿಸಾರ ಕನ್ನಡ ದಿನಪತ್ರಿಕೆಯ ನೂತನ ಆನ್‌ಲೈನ್ ಪೋರ್ಟಲ್ ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.’
ಇಂದು ಆನ್‌ಲೈನ್ ಪತ್ರಿಕೆಗಳ ಸಂಖ್ಯೆ ಹೆಚ್ಚಾಗುತ್ತಿದೆ ಇದಕ್ಕೆ ವೆಚ್ಚೂ ಕಡಿಮೆಯಾಗುತ್ತಿದೆ. ಮತ್ತು ಸುದ್ದಿಗಳು ಕೂಡ ಬಹುಬೇಗ ಜನರ ತಲುಪುತ್ತವೆ. ಆದರೆ ಆನ್‌ಲೈನ್‌ನಲ್ಲಿ ಪತ್ರಿಕೆ ಮಾಡುವವರು ತುಂಬಾ ಎಚ್ದರಿಕೆಯಿಂದ ಮಾಡಬೇಕಾಗುತ್ತದೆ. ಅವಸರದ ಓಟದಲ್ಲಿ ಅಪಘಾತಗಳು ಹೆಚ್ಚಾಗುತ್ತವೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದರು.
ಹಾಗೆಯೇ ಪತ್ರಿಕೋದ್ಯಮದ ದಾರಿಯಲ್ಲಿ ಸಾಗುತ್ತಿದ್ದಾರೆ. ಈಗ ಪತ್ರಿಕೆಯ ಜೊತೆಗೆ ಆನ್‌ಲೈನ್ ಪೋರ್ಟಲ್ ಮಾಡುತ್ತಿರುವುದು ಸಂತೋಷದ ವಿಷಯ. ಇವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಕೆ.ಈ. ಕಾಂತೇಶ್, ಮೇಯರ್ ಶಿವಕುಮಾರ್, ಸೂಡಾ ಅಧ್ಯಕ್ಷ ಎನ್.ಜೆ. ನಾಗರಾಜ್ ಪಾಲಿಕೆ ಸದಸ್ಯ ವಿಶ್ವಾಸ್, ಗೋ. ರಮೇಶ್ ಗೌಡ, ಮೋಹನ್‌ಕುಮಾರ್, ಸತೀಶ್ ಮುಂಚೆಮನೆ ಪ್ರಭಾಕರ್, ಸುದ್ದಿಸಾರ ಪತ್ರಿಕೆ ಸಂಪಾದಕ ಜಿ.ಆರ್ ಷಡಾಕ್ಷರಪ್ಪ, ಉಪಸಂಪಾದಕ ಕೆ.ವಿ. ಕಿರಣ್‌ಕುಮಾರ್, ಗಣೇಶ್ ಬಿಳಗಿ ಸೇರಿದಂತೆ ಹಲವರಿದ್ದರು.