ನಿರೀಕ್ಷೆಯಂತೆ ಸರ್ಜಿ ಫೌಂಡೇ ಷನಿನ ವ್ಯವಸ್ಥಾಪಕ ನಿರ್ದೇಶಕ ಧನಂಜಯ ಸರ್ಜಿ ಬಿಜೆಪಿಯತ್ತ ಮುಖಮಾಡುತ್ತಿದ್ದಾರೆ. ನಾಳೆಯೆ ಬಿಜೆಪಿ ರಾಷ್ಟ್ರೀಯ ಪ್ರಮುಖರು ಹಾಗೂ ನಿಕಟಪೂರ್ವ ಮುಖ್ಯ ಮಂತ್ರಿ ಯಡಿಯೂರಪ್ಪ ಸಮ್ಮುಖದಲ್ಲಿ ಅವರು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರುವ ಮೂಲಕ ರಾಜಕೀಯ ರಂಗದಾಟದಲ್ಲಿ ಬರುವ ವಿಧಾನಸಭಾ ಚುನಾವಣೆ ಕಣ್ಣಮುಂದೆ ನಿಂತಂತಾಗಿದೆ.


ಧನಂಜಯ ಸರ್ಜಿಯವರು ಕಳೆದ ಹಲವು ತಿಂಗಳಿನಿಂದ ಸುದ್ದಿ ಯಲ್ಲಿದ್ದರು. ಸಾಮಾಜಿಕ ಚಟುವಟಿ ಕೆಗಳ ಮೂಲಕ ಗಮನಸೆಳೆದಿದ್ದ ಅವರು, ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ವಿಶೇಷವಾ ಗಿದೆ. ಚುನಾವಣೆಗೆ ಸ್ಪರ್ಧಿಸುವುದಾಗಿ ಆಗಾಗ ಹೇಳಿಕೊಳ್ಳುತ್ತಿದ್ದ ಅವರು ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬುದು ಮಾತ್ರ ಗೊತ್ತಿರಲಿಲ್ಲ. ಬಹುಶಃ ಸ್ವಂತಂತ್ರವಾಗಿ ಸ್ಪರ್ಧಿಸಬ ಹುದು ಎಂದು ಹಲವರು ಮಾತನಾ ಡಿಕೊಳ್ಳುತ್ತಿದ್ದರು. ಈಗ ಅದೆಲ್ಲ ಮರೆಯಾಗಿ ಸರ್ಜಿ ಅಧಿಕೃತವಾಗಿ ಬಿಜೆಪಿಯನ್ನು ಸೇರಿಕೊಳ್ಳಲಿದ್ದಾರೆ.

ಹಾಗೆ ನೋಡಿದರೆ ಧನಂಜಯ ಸರ್ಜಿಯವರು ತಮ್ಮ ಫೌಂಡೇಷನ್ ಮೂಲಕ ಸಾಮಾಜಿಕ ಕಾರ್ಯಕ್ರಮ ಗಳನ್ನು ಮಾಡುವ ಮೂಲಕ ಇಡೀ ಶಿವಮೊಗ್ಗ ಜನತೆಯ ಗಮನ ಸೆಳೆದಿದ್ದರು. ಯಾವುದೇ ಆರೋಗ್ಯ ಕಾರ್ಯಕ್ರಮಗಳಿರಲಿ, ಪರಿಸರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿರಲಿ, ರಾಜ್ಯೋತ್ಸವ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಸರ್ಜಿ ಅವರದೇ ಮಾತಾಗಿತ್ತು.

ಸರ್ಜಿ ಕುಟುಂಬದವರಾದ ಡಾ., ಧನಂಜಯ ಮೂಲತಃ ಚನ್ನಗಿರಿ ತಾಲ್ಲೂಕಿನ ಗೊಪ್ಪೇನಹಳ್ಳಿಯವರು. ತಂದೆ ಸರ್ಜಿ ರುದ್ರಪ್ಪ, ತಾಯಿ ರೇಣುಕಾ. ದಾವಣಗೆರೆಯಲ್ಲಿ ವೈದ್ಯಕೀಯ ಶಿಕ್ಷಣ, ಮಣಿಪಾಲಿನಲ್ಲಿ ಎಂ.ಡಿ. ಪದವಿ. ನಂತರ ಬೆಂಗಳೂರು, ಶಿವಮೊಗ್ಗದ ವಾತ್ಸಲ್ಯ ಆಸ್ಪತ್ರೆಯಲ್ಲಿ ಕೆಲಸ. ತದನಂತರ ೨೦೦೭ರಲ್ಲಿ ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಸರ್ಜಿ ಚೈಲ್ಡ್ ಕೇರ್ ಸೆಂಟರ್, ೨೦೧೪ರಲ್ಲಿ ಸರ್ಜಿ ಆಸ್ಪತ್ರೆ ಆರಂಭ. ಇಂದು ಶಿವಮೊಗ್ಗದಾದ್ಯಂತ ಸರ್ಜಿ ವೈದ್ಯಕೀಯ ಸಮೂಹ ಜನಜನಿತವಾದ ಹೆಸರು ಮಾಡಿದೆ. ಸಮಾಜ ಸೇವೆ ಮಾಡುವ ಉದ್ದೇಶದಿಂದ ಜನಪರ ಕಳಕಳಿಯ ಸದುದ್ದೇಶದಿಂದ ಹೆಜ್ಜೆ ಹಾಕುತ್ತಿರುವ ಸರ್ಜಿ ಅವರ ಈ ಸೇರ್ಪಡೆ ವಿಶೇಷ.


ಅವರ ಹೆಸರಿನಲ್ಲಿ ಅಭಿಮಾನಿ ಗಳ ಬಳಗವು ಸಿದ್ಧವಾಗಿತ್ತು. ನಗರದ ತುಂಬಾ ಫ್ಲೆಕ್ಸ್‌ಗಳ ಮೂಲಕ ಗಮನ ಸೆಳೆದಿದ್ದರು. ಸಾಮಾಜಿಕ ಜಾಲತಾಣ ಗಳ ಮೂಲಕ ಜನಪ್ರಿಯ ವ್ಯಕ್ತಿಯಾಗಿ ದ್ದರು. ಹಾಗೆ ನೋಡಿದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಧೀನದ ವಿಕಾಸ ಟ್ರಸ್ಟ್‌ನ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದ ಅವರು, ಒಂದು ರೀತಿಯಲ್ಲಿ ಬಿಜೆಪಿ ಯವರೇ ಆಗಿದ್ದರು.

ಕಾಂಗ್ರೆಸ್‌ನವರು ಇವರಿಗೆ ಆಹ್ವಾನ ಕೊಟ್ಟಿದ್ದರೂ ಕೂಡ ಅಲ್ಲಿಗೆ ಹೋಗಿರಲಿಲ್ಲ. ಈಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ, ಮಾಜಿ ಉಪಮುಖ್ಯ ಂತ್ರಿ ಕೆ.ಎಸ್.ಈಶ್ವ ರಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರ ಸಮ್ಮುಖ ದಲ್ಲಿ ನಾಳೆಯೇ ಬಿಜೆಪಿ ಸೇರಲಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!