ಶಿವಮೊಗ್ಗ, ಅ.10:
ಶಿವಮೊಗ್ಗ ಜಿಲ್ಲೆಯ ಸುಮಾರು 18 ತಿಂಗಳ ಕಾಲದ ಸೇವೆ ಸಾರ್ಥಕತೆ ಹಾಗೂ ತೃಪ್ತಿ ನೀಡಿದೆ. ಇಲಾಖೆಯ ಸಹೋದ್ಯೋಗಿಗಳು ಸಿಬ್ಬಂದಿಗಳು, ಸಾರ್ವಜನಿಕರು ವಿಶೇಷವಾಗಿ ಮಾಧ್ಯಮದ ಎಲ್ಲಾ ಸ್ನೇಹಿತರು ನೀಡಿದ ಸಹಕಾರದಿಂದ ಕ್ಲಿಷ್ಟ ಹಾಗೂ ಕಠಿಣ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲಾಯಿತು ಎಂದು ಜಿಲ್ಲಾ ರಕ್ಷಣಾಧಿಕಾರಿಯಾಗಿ ಶಿವಮೊಗ್ಗ ಜಿಲ್ಲೆಯಿಂದ ವರ್ಗಾವಣೆಗೊಂಡಿರುವ ಲಕ್ಷ್ಮಿಪ್ರಸಾದ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ನೂತನ ಜಿಲ್ಲಾ ರಕ್ಷಣಾಧಿಕಾರಿ ಮಿಥುನ ಕುಮಾರ್ ಹಾಗೂ ಇಲ್ಲಿಂದ ವರ್ಗಾವಣೆಯಾಗಿ ಹೋಗುತ್ತಿರುವ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿ ಪ್ರಸಾದ್ ಅವರಿಗೆ ಸ್ವಾಗತ ಕೋರುವ ಮತ್ತು ಬೀಳ್ಕೊಡುಗೆ ನೀಡುವ ಸಮಾರಂಭವನ್ನು ಇಂದು ಸಂಜೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಲಕ್ಷ್ಮಿ ಪ್ರಸಾದ್ ಅವರು ಶಿವಮೊಗ್ಗ ನಗರದಲ್ಲಿ ಘಟನೆಗಳು ನಡೆದಾಗ ಮಾಧ್ಯಮದ ಮಿತ್ರರು ಸಕಾಲದಲ್ಲಿ ಮಾಹಿತಿ ಒದಗಿಸಿದ್ದಾರೆ ನಮ್ಮ ಇಲಾಖೆಯ ಪ್ರಬುದ್ಧ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಹಿತಕರ ಘಟನೆಗಳನ್ನು ತಡೆಗಟ್ಟಿದ್ದಾರೆ ಶಿವಮೊಗ್ಗ ಒಂದಿಷ್ಟು ವಿಶೇಷಗಳನ್ನು ಕಲಿಸಿಕೊಡುವ ಪ್ರದೇಶ ಇಲ್ಲಿನ ಕರ್ತವ್ಯ ಅತ್ಯಂತ ಖುಷಿ ಹಾಗೂ ಸಂತೃಪ್ತಿಯನ್ನು ನೀಡಿದೆ ಎಂದರು.
ನೂತನ ಜಿಲ್ಲಾ ರಕ್ಷಣಾಧಿಕಾರಿಯಾಗಿ ಆಗಮಿಸಿರುವ ಮಿಥುನಕುಮಾರ್ ಅವರು ಮಾತನಾಡುತ್ತಾ, ಸಮಾಜಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಿದ ಎಸ್ಪಿ ಲಕ್ಷ್ಮಿ ಪ್ರಸಾದ್ ಅವರ ಕರ್ತವ್ಯದ ಅವಧಿಯಲ್ಲಿ ಅಳವಡಿಸಿಕೊಂಡಿದ್ದ ಅಪರಾಧ ಚಟುವಟಿಕೆ ನಿಯಂತ್ರಿಸುವ ಕಾರ್ಯಕ್ರಮಗಳನ್ನು ಮುಂದುವರಿಸಲಾಗುತ್ತದೆ. ಗಾಂಜಾ,ಮಟ್ಕಾ ಹಾವಳಿಯನ್ನು ಹತ್ತಿಕ್ಕುವ ಜೊತೆ ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿ ಸೌಹಾರ್ಧತೆ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕೆಂದು ವಿನಂತಿಸಿದರು.
ಟ್ರಸ್ಟ್ ನ ಅಧ್ಯಕ್ಷ ಎನ್ ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಹಿರಿಯ ಪತ್ರಿಕಾ ಸಂಪಾದಕ ಎಸ್. ಚಂದ್ರಕಾಂತ್ ಉಪಸ್ಥಿತರಿದ್ದರ