ಮಳೆಗಾಲದಲ್ಲಿ ಮಳೆಯಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಕೊಡೆಯು ಹೇಗೊ ಹಾಗೆ ಓಝೋನ್ ಪದರವು ಭೂಮಿಯಿಂದ ಮೇಲೆ ಸೂರ್ಯನಿಂದ ಬರುವ ನೇರಳಾ ತೀತ ಕಿರಣಗಳನ್ನು ಹೀರಿ ಜೀವ ಸಂಕುಲಗಳಿಗೆ ರಕ್ಷ ಕವಚವಾಗಿ ರಕ್ಷಿಸುತ್ತದೆ.


ವಿಶ್ವ ಓಝೋನ್ ದಿನದ ಮುಖ್ಯ ಉದ್ದೇಶ ಓಝೋನ್ ಪದರಿನ ಸವಕಳಿ ಹಾಗೂ ಜಾಗತಿಕ ತಾಪಮಾನ ಏರಿಕೆ ನಿಯಂತ್ರಣ ಪರಿಸರ ಮತ್ತು ಮಾನವ ಜೀವನದ ಮೇಲೆ ಇದರ ಪಾತ್ರವನ್ನು ತಿಳಿಸುವುದಾಗಿದೆ.


ಓಝೋನ್ ಅಂದರೆ ಅಮ್ಲಜನಕದ ಮೂರು ಪರಮಾಣುಗಳು ಸೇರಿ ಉಂಟಾಗುವ ಒಂದು ಅಣು ಭೂಮಿಯ ಮೇಲಿರುವ ವಾತಾವರಣದ ಸುಮಾರು ೨೦ ರಿಂದ ೩೦ ಕಿ.ಮೀ. ಮೇಲೆ ಅವರಿಸಿರುವ ಓಝೋನ್ ಪದರವು ಅತಿ ನೇರಳಾತೀತ ಕಿರಣವನ್ನು ಹೀರುತ್ತದೆ.
ಓಜೋನ್ ಪದರ ೧೯೧೩ ರಲ್ಲಿ ಪ್ರೆಂಚ್ ಭೌತಶಾಸ್ತದ ವಿಜ್ಞಾನಿ ಚಾರಲ್ಸ್ ಫರ್ಬಿ ಕಂಡುಹಿಡಿದರು. ಇದು ಸೂರ್ಯನಿಂದ ಬಂದ ೯೭.೯೮% ಅತಿನೇರಳೆ ಕಿರಣ ಹೀರಿ ಬೆಳಕಿನ ಕಿರಣವನ್ನು ಮಾತ್ರ ಭೂಮಿ ಮೇಲೆ ಬೀಳುವಂತೆ ಮಾಡುತ್ತದೆ.


ಸೂರ್ಯನ ನೇರಳಾತೀತ ಕಿರಣಗಳು ವಾತಾವರಣದಲ್ಲಿ ಇರುವ ಅಮ್ಲಜನಕ (ಓ೨) ಮೇಲೆ ಬಿದ್ದಾಗ ಅಮ್ಲಜನಕ ಓ೨ ಅಣು ೨ ಅಮ್ಲಜನಕದ ಪರಮಾಣುಗಳಾಗಿ ಬೇರ್ಪಡುತ್ತದೆ. ಬೇರ್ಪಡದೇ ಇದ್ದ ಅಮ್ಲಜನಕ (ಓ೨) ಅಣುವಿನೊಡನೆ ಈ ಒಂದು ಅಮ್ಲಜನಕ ಪರಮಾಣು ಸೇರಿ ಸಂಯೋಗಗೊಂಡು ಓಝೋನ್ ಉಂಟಾಗುತ್ತದೆ.


ಓಝೋನ್ ಪದರವು ನಾಶವಾಗಲೂ ಮುಖ್ಯವಾದ ಕಾರಣಗಳು: ಪ್ರಿಜ್ ಮತ್ತು ಕೋಲ್ಡ ಹೌಸ್‌ಗಳು ಉಪಯೋಗಿಸುವ (ಎಫ್‌ಸಿಎಸ್(ಅhಟoಡಿo ಖಿತಿoಡಿo ಛಿಚಿಡಿboಟಿs) ಮತ್ತು ವಾಯುಮಾಲಿನ್ಯ ಸಿಎಫ್‌ಸಿಎಸ್ ನ ೧ ಅಣು ಓಝೋನ್ ನ ೧.೦೦.೦೦೦ ಅಣುಗಳನ್ನು ನಾಶಮಾಡುತ್ತದೆ. ಇದು ಸರಪಳಿ ರಾಸಾಯನಿಕ ಕ್ರಿಯೆಯಾಗಿದೆ. ಓಝೋನ್ ಪದರದ ನಾಶದಿಂದ ಅತಿಯಾದ ಮಳೆ ಅತಿಯಾದ ಬರ ಸಮುದ್ರಮಟ್ಟದಲ್ಲಿ ನೀರಿನ ಏರಿಕೆ ಪ್ರವಾಹ ಕಾಡು ನಾಶ ಭೂತಾಪ ಏರಿಕೆ ಒಣಗುವಿಕೆ ಉಂಟಾಗುವುದು ಇಂಗಾಲದ
ಪ್ರಮಾಣ ಹೆಚ್ಚಾಗಿ ವಾಯು ಮಾಲಿನ್ಯ ಹೆಚ್ಚಾಗುವುದು ಇತ್ಯಾದಿಗಳು


ಇದರಿಂದಾಗಿ ಉಸಿರಾಡಲು ಶುದ್ದವಾದ ಗಾಳಿ ಸಿಗದಿರುವುದು. ಅಲ್ಲದೆ ಮನುಷ್ಯ ಚರ್ಮದ ಕ್ಯಾನ್ಸರ್‌ಗೆ ತುತ್ತಾಗುವರು.
ಓಝೋನ್ ರಂಧ್ರ ಕಂಡು ಹಿಡಿದವರು ಬ್ರಿಟಿಷ್ ಅಂಟಾರ್ಕಟಿಕ ಸರ್ವೆ ವಿಜ್ಞಾನಿಗಳಾದ ಫಾರ್‌ಮ್ಯಾನ್ ಗಾರ್ಡಿನರ್ ಮತ್ತು ಕಾಂಕ್ಲನ್ ೧೯೫೬ ರಲ್ಲಿ
ಓಝೋನ್ ಪದರದ ರಕ್ಷಣೆ : ಭೂಗ್ರಹದ ರಕ್ಷಣೆಗೆ ಅರಣ್ಯನಾಶ ಮಾಡದೆ ಹಸಿರುಗಿಡ ಹೆಚ್ಚು ಬೆಳೆಸುವುದು ರಾಸಾಯನಿಕ ಬಳಕೆ ಪ್ಲಾಸ್ಟಿಕ್ ಬಳಕೆ ಕಡಿಮೆಮಾಡುವುದು ಪೇಟ್ರೋಲ್ ಡೀಸೆಲ್ ವಾಹನಗಳ ಬಳಕೆ ಕಡಿಮೆ ಮಾಡುವುದು ಪ್ರಿಜ್ ಮತ್ತು ಕೋಲ್ಡ್ ಹೌಸ್ ಗಳಲ್ಲಿ ಸಿಎಫ್‌ಸಿಎಸ್ ಅಣುವಿನ ಬದಲು ಹೆಚ್‌ಸಿಎಫ್‌ಸಿ ( ಊಥಿಜಡಿo ಛಿhoಡಿo huoಡಿo) ರಾಸಾಯನಿಕ ಉಪಯೋಗಿಸಬೇಕು .

By admin

ನಿಮ್ಮದೊಂದು ಉತ್ತರ

error: Content is protected !!