ಶಿವಮೊಗ್ಗ:ನ25 ನಗರದಲ್ಲಿ ನಡೆಯುತ್ತಿರುವ ಮೀಟರ್ ಬಡ್ಡಿ ದಂಧೆಗೆ ಮತ್ತೊಂದು ಬಲಿಯಾಗಿದೆ. ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ಬಡ್ಡಿ ವ್ಯವಹಾರ ಮಿತಿ ಮೀರುತ್ತಿದ್ದು, ಇದು ಹಲವರ ಪ್ರಾಣಕ್ಕೂ ಕೂಡ ಕುತ್ತಾಗಿದೆ.
ಈ ಸಾಲಿಗೆ ಈ ಬಾರಿ ಮಾಜಿ ನಗರಸಭಾ ಸದಸ್ಯ ಹೊಸಮನೆ ವಾರ್ಡ್ನ ಆರ್. ಲಕ್ಷö್ಮಣ್ ಬಲಿಯಾಗಿದ್ದಾರೆ. ಇವರು ಶಿವಮೊಗ್ಗದ ಬಡ್ಡಿ ವ್ಯವಹಾರದಾರ ಮೋಹನ್ ಜಿ. ಎಂಬಾತನ ಬಳಿ ಸಾಲ ಮಾಡಿದ್ದರು. ಸಾಕಷ್ಟು ಬಡ್ಡಿ ನೀಡಿದ್ದರೂ ಕೂಡ ಮೋಹನ್ ಹಣಕ್ಕಾಗಿ ಬೇಡಿಕೆ ಇಟ್ಟು
ನಂತರ ಕಿರುಕುಳ ಕೊಡತೊಡಗಿದ. ಇದನ್ನು ತಾಳಲಾರದೇ ಲಕ್ಷö್ಮಣ್ ಗೋಪಾಳದ ಒಂದು ಪಾರ್ಕ್ನಲ್ಲಿ ನ. 22 ರಂದು ಸಂಜೆ 4 ಗಂಟೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಲಕ್ಷö್ಮಣ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ. 23ರಂದು ಸಂಜೆ 5 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ಲಕ್ಷö್ಮಣ್ ಅವರ ಪುತ್ರ ಸಿ. ಪ್ರದೀಪ್ ಅವರು ತುಂಗಾನಗರ ಠಾಣೆ ಪೊಲೀಸರಿಗೆ ದೂರು ನೀಡಿ ನಮ್ಮ ತಂದೆಯ ಸಾವಿಗೆ ಜಿ. ಮೋಹನ್, ಅವರ ಪುತ್ರ ಪೃಥ್ವಿ ಹಾಗೂ ವೆಂಕಟೇಶ್ ಎನ್ನುವವರು ಕಾರಣರಾಗಿದ್ದು, ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.