ಶಿವಮೊಗ್ಗ:ನ.25 ನಗರದ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ರಂದು ಭಾನುವಾರ ಸತತ ಎಂಟನೆ ಬಾರಿಗೆ ಯಶಸ್ವಿಯಾಗಿ ವಿಧುರ-ವಿಧವೆ ಸಮಾಲೋಚನೆ ಸಭೆ ನಡೆಯಿತು.

 ಕಾರ್ಯಕ್ರಮದಲ್ಲಿ ವಿಧುರ-ವಿಧವೆ-ಪರಿತ್ಯಕ್ತರು ಭಾಗವಹಿಸಿ ವಯಕ್ತಿಕ ಪರಿಚಯ ಮಾಡಿಕೊಂಡು ಹಾಲಿ ಸ್ಥಿತಿ-ಗತಿ ವಿವರಗಳೊಂದಿಗೆ ತಮ್ಮಗಳ ಇಚ್ಛಾಸಕ್ತಿಗಳನ್ನು ಹಂಚಿಕೊAಡರು ಇವರ ಜೊತೆಗೆ ಮೊದಲನೆ ವಿವಾಹ ಆಸಕ್ತರೂ ಪಾಲ್ಗೊಂಡಿದ್ದರು.

 ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಪ್ರೊ. ಹೆಚ್. ರಾಚಪ್ಪ ಒಂದು ಹೆಣ್ಣಿಗೆ ಒಂದು ಗಂಡು ಪರಸ್ಪರ ಆಶ್ರಯ ಅನಿವಾರ್ಯ, ಆದುದರಿಂದ ಪುರುಷ ಅಥವ ಮಹಿಳೆ ಯಾವುದೇ ಸಂಕೋಚ-ಹಿAಜರಿಕೆ ತೋರದೆ ಅಹ9ರು ತಮ್ಮ ಜೀವನ ರೂಪಿಸಿಕೊಳ್ಳಲು ಇಂತಹ ಕಾಯ9ಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.

 ಆರಂಭದಲ್ಲಿ ಸಂಚಾಲಕ ಆರ್.ಟಿ. ನಟರಾಜ್ ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶ ತಿಳಿಸಿದರು ಸಮಾವೇಶದಲ್ಲಿ ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ ಇತರೆಡೆಗಳಿಂದ ಸುಮಾರು ಮೂವತ್ತಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

 ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಶ್ರೀನಿವಾಸ್ ಮದುವೆ, ಮರು ಮದುವೆ ಹಾಗು ಕಾನೂನು-ಕಟ್ಟಳೆಗಳ ಕುರಿತು ಸಭೆಯಲ್ಲಿ ಪಾಲ್ಗೊಂಡಿದ್ದವರಿಗೆ ಮಾರ್ಗದರ್ಶನ ಮಾಡಿದರು, ಸಂಘಟಕ ಚನ್ನವೀರಪ್ಪ ಗಾಮನಗಟ್ಟಿ ಮಾಹಿತಿ ನೀಡಿದರು.

By admin

ನಿಮ್ಮದೊಂದು ಉತ್ತರ

error: Content is protected !!