ಭದ್ರಾವತಿ,
ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಶಿಕ್ಷಕರು ಡಾ: ಸರ್ವಪಲ್ಲಿ ರಾಧಾಕೃಷ್ಣನ್ ಹಾದಿಯಲ್ಲಿ ನಡೆದು ಮಕ್ಕಳಿಗೆ ದಾರಿ ದೀಪವಾಗಬೇಕೆಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
ಅವರು ಹಳೇನಗರದ ವೀರಶೈವ ಸಭಾ ಭವನದಲ್ಲಿ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ಹಮ್ಮಿಕೊಂಡಿದ್ದ ಡಾ: ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನಾಚರಣೆ ಮತ್ತು ಶಿಕ್ಷಕರ ದಿನಾಚರಣೆ-೨೦೨೨ ಸಮಾರಂಭದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಎಲ್ಲಿ ಶಿಕ್ಷಣವಿರುತ್ತೋ ಅಲ್ಲಿ ಸಂಸ್ಕೃತಿ ಇರುತ್ತದೆ. ಸಮಾಜವು ಸುಭಕ್ಷೆಯಾಗಿರುತ್ತದೆ. ಈ ಹಾದಿಯಲ್ಲಿಯೇ ಡಾ: ರಾಧಾಕೃಷ್ಣನ್ ಸಾಗಿ ಎತ್ತರಕ್ಕೆ ಬೆಳೆದರು. ಶಿಕ್ಷಕರು ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಿ ಸಮಾಜದ ಬೆಳಕಾಗುವಂತೆ ಮಾಡಬೇಕಾಗಿದೆ. ಶಿಕ್ಷಕರ ಸಂಘವು ನೀಡಿದ
ಮನವಿಯನ್ನು ಮುಖ್ಯ ಮಂತ್ರಿಗಳ ಬಳಿ ಚರ್ಚಿಸುತ್ತೇನೆ, ನೆನೆಗುದಿಗೆ ಬಿದ್ದಿರುವ ಗುರುಭವನ ನೂತನ ಕಟ್ಟಡಕ್ಕೆ ಮುಂದಿನ ತಿಂಗಳು ಶಂಕುಸ್ಥಾಪನಾ ಕಾರ್ಯಾ ಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸಮಾರಂಭವನ್ನು ನಗರಸಭಾ ಪ್ರಭಾರ ಅಧ್ಯಕ್ಷ ಚೆನ್ನಪ್ಪ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಯಾವುದೇ ಹುದ್ದೆಗಳಿಗೆ ಹೋಗಲು ಶಿಕ್ಷಣವೇ ಕಾರಣ. ಪವಿತ್ರ ಶಿಕ್ಷಣ ವೃತ್ತಿಯನ್ನು ಕಾಪಾಡಿಕೊಂಡು ಮಕ್ಕಳನ್ನು ಸಮಾಜದ ಆಸ್ತಿಗಳಾಗಿಸಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಹೊನ್ನಾ ಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ: ಚನ್ನೇಶ್ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಎಸ್ಎಸ್ ಎಲ್ಸಿ ಪರೀಕ್ಷೆಯಲ್ಲಿ ಶೇ ೧೦೦ ಅಂಕ ಪಡೆದ ೨೦ ಶಾಲೆಗಳ ಮುಖ್ಯಶಿಕ್ಷಕರಿಗೆ, ೨೦ ಮಂದಿ ತಾಲೂಕು ಉತ್ತಮ ಶಿಕ್ಷಕರಿಗೆ, ನಿವೃತ್ತ ೩೭ ಮಂದಿ ಪ್ರಾಥಮಿಕ ಹಾಗು ೨೦ ಪ್ರೌಢಶಾಲಾ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಎಸ್.ರಮೇಶ್, ತಹಸೀಲ್ದಾರ್ ಆರ್.ಪ್ರದೀಪ್, ನಗರಸಭೆ ಪೌರಾಯುಕ್ತ ಮನುಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೃಥ್ವಿರಾಜ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಸವರಾಜ್, ಶಿಕ್ಷಕರ ವಿವಿಧ ಸಂಘಟನೆಗಳ ಆರ್.ಬಸವರಾಜ್, ಸಿ.ಹರಿಬಾಬು, ಶ್ರೀಧರ ಗೌಡ, ಎಂ.ಎಸ್.ಮಲ್ಲಿಕಾರ್ಜುನ, ಬಷೀರ್ ಆಹ್ಮದ್ ಸವಣೂರು, ಎಂ.ಸಿ.ಆನಂದ್, ಅಬ್ದುಲ್ ಸಲೀಂ, ಉಮಾ, ಸಿ.ಎಸ್.ನಾಗ ರಾಜ್, ಎಂ.ಹನುಮಂತಪ್ಪ, ಅನೇಕ ನಗರ ಸಭಾ ಸದಸ್ಯರು ಮತ್ತಿತರರು ಉಪಸ್ಥಿರಿದ್ದರು.
ಸುಮತಿ ಕಾರಂತ್ ತಂಡವು ಪ್ರಾರ್ಥಿಸಿ ನಾಡಗೀತೆ ಹಾಡಿದರೆ, ಬಿ.ಇ.ಓ ಎ.ಕೆ.ನಾಗೇಂದ್ರಪ್ಪ ಸ್ವಾಗತಿಸಿದರು. ಬಿಆರ್ಸಿ ಪಂಚಾಕ್ಷರಿ ವಂದಿಸಿದ ಕಾರ್ಯಕ್ರಮದಲ್ಲಿ ಜ್ಯೋತಿ ಮತ್ತು ವಿ.ವಾಣಿ ನಿರೂಪಿಸಿದರು.