ಶಿವಮೊಗ್ಗ,ಆ.29:
ಬರುವ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಬಳಸುವ ನಾಡ ಬಂದೂಕು ಹಿಡಿದುಕೊಂಡು ಹೋಗಿದ್ದ ಯುವಕನ ಕೈಲಿದ್ದ ಬಂದೂಕಿನ ಆಕಸ್ಮಿಕವಾಗಿ ಟ್ರಿಗರ್ ತಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ನಿನ್ನೆ ರಾತ್ರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾವೆಯ ನೇಗಿಲೋಣಿಯ ವಾಸಿ ಅಂಬರೀಷ (30) ಪರವಾನಿಗೆ ಇಲ್ಲದ ನಾಡ ಬಂದೂಕನ್ನು ಮತ್ತು ಬಂದೂಕಿಗೆ ತುಂಬುವ ಮದ್ದುಗುಂಡುಗಳನ್ನು ತೆಗೆದುಕೊಂಡು ತಮ್ಮ ತೋಟಕ್ಕೆ ಬರುವ ಕಾಡು ಪ್ರಾಣಿಗಳನ್ನು ಓಡಿಸಿ ಬರುವುದಾಗಿ ಮನೆಯಲ್ಲಿ ಹೇಳಿ ತನ್ನ ಸ್ನೇಹಿತರಾದ ಕೀರ್ತಿ ಎಂಬುವವನ ಜೊತೆ ತೆರಳಿದ್ದಾನೆ.
ತೋಟದಲ್ಲಿ ತಿರುಗಾಡಿ ಅಲ್ಲಿಗೆ ಬಂದ ಕಾಡುಕೋಣಗಳನ್ನು ಓಡಿಸಿದ್ದಾರೆ ನಂತರ ಕೀರ್ತಿಯು ತನ್ನ ಮನೆಗೆ ತೆರಳಿದ್ದು, ಅಂಬರೀಷನು ಸಹಾ ಮನೆಗೆ ವಾಪಾಸ್ ಹೊರಟಿದ್ದು, ಆ ಸಂದರ್ಭದಲ್ಲಿ ತನ್ನ ಕೈಲಿದ್ದ ಬಂದೂಕನ್ನು ನಿರ್ಲಕ್ಷತನದಿಂದ ಹಿಡಿದುಕೊಂಡಿದ್ದು, ಬಂಡೆಯನ್ನು ಇಳಿಯುವಾಗ ಕಾಲು ಜಾರಿದೆ. ರಾತ್ರಿಯ ವೇಳೆ ಬಂಡೆಯ ಮೇಲೆ ಬಿದ್ದ ಅಂಬರೀಶ್ ಬಂದೂಕಿನ ಟ್ರಿಗರ್ ನ್ನ ಕಾಲಿನ ರಬ್ಬರ್ ಬೂಟ್ ತಾಗಿ ಶೂಟ್ ಆಗಿದೆ.
ನಾಡ ಬಂದೂಕಿನಲ್ಲಿದ್ದ ಗುಂಡು ಸೀದಾ ಅಂಬರೀಷನ ಎದೆಯ ಕೆಳಭಾಗಕ್ಕೆ ಕೆಳಗಿನಿಂದ ಮೇಲ್ಭಾಗಕ್ಕೆ ಹಾರಿದೆ. ಗುಂಡು ಹಾರಿದ ಪರಿಣಾಮ ರಕ್ತ ಸ್ರಾವವಾಗಿ ಮೃತಪಟ್ಟಿದ್ದಾನೆ. ಈ ಬಗ್ಗೆ ಮೃತನ ಸಹೋದರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


