ಶಿವಮೊಗ್ಗ,ಆ.28:

ಶಿವಮೊಗ್ಗ ಸೇರಿದಂತೆ ರಾಜ್ಯದೆಲ್ಲೆಡೆ ಅದ್ದೂರಿ ಗಣೇಶೋತ್ಸವ ನಡೆಸಲು ಸರ್ಕಾತ ಆದೇಶ ನೀಡಿದ್ದರೂ ಸಹ ಕಾನೂನು ಸುವ್ಯವಸ್ಥೆ ಕಾಪಾಡಲು ರಕ್ಷಣಾ ಇಲಾಖೆ ಬಿಗಿ ಕ್ರಮ ಕೈಗೊಂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮೆರವಣಿಗೆ ಹೊತ್ತು ಡಿಜೆ ಇಲ್ಲ. ಗಣಪತಿಯನ್ನು ಪ್ರತಿಷ್ಟಾಪನೆ ಮಾಡುವ ಮುನ್ನ ಅನುಮತಿ ಪಡೆಯಬೇಕು. ಅದಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯಾದ್ಯಂತ ಇದುವರೆಗೂ 2300 ಗಣಪತಿ ಪ್ರತಿಷ್ಠಾಪನೆಗೊಳ್ಳುವ ನಿರೀಕ್ಷೆ ಇದೆ. ನಗರದಲ್ಲಿ 753 ಗಣಪತಿ ಪ್ರತಿಷ್ಠಾಪನೆ ಆಗಲಿರುವ ನಿರೀಕ್ಷೆ ಇದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ.ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದರು.
ಅವರು ಮಾಧ್ಯಮಗಳೊಂದಿಗೆ ಈ ಬಗ್ಗೆ ಮಾತನಾಡಿ ಈ ಸಂಖ್ಯೆ ಗಣಪತಿ ಹಬ್ಬಕ್ಕೆ ಸರಿಯಾದ ಸಂಖ್ಯೆ ದೊರೆಯಲಿದೆ ಎಂದು ತಿಳಿಸಿದರು.


ಗಣಪತಿ ಮೆರವಣಿಗೆ ವೇಳೆ ಡಿಜೆ ನಿಷೇಧಿಸಲಾಗಿದೆ. ಕಳೆದ ವರ್ಷ ಸಹ ಬ್ಯಾನ್ ಮಾಡಲಾಗಿತ್ತು. ಡಿಸಿಗೆ ಡಿಜೆ ಬ್ಯಾನ್ ಗೆ ಪತ್ರಬರೆಯಲಾಗಿತ್ತು. ಡಿಸಿಯೂ ಸಹ ಮೆರವಣಿಗೆ ಸಮಯದಲ್ಲಿ ಡಿಜೆ ಬಳಸದಂತೆ ನಿರ್ದೇಶಿಸಿದ್ದಾರೆ ಎಂದರು.

By admin

ನಿಮ್ಮದೊಂದು ಉತ್ತರ

You missed

error: Content is protected !!