ತಮಿಳುನಾಡು,ಆ.28:
ನೂರು, ಸಾವಿರ, ಲಕ್ಷ ಹಾಗೂ ಒಂದೆರಡು ಕೋಟಿ ದಂಡ ವಿಧಿಸಿದ್ದ ನ್ಯಾಯಾಲಯದ ತೀರ್ಪನ್ನ ನೀವು ಕೇಳಿದ್ದೀರಿ, ಓದಿದ್ದೀರಿ, ನೋಡಿದ್ದೀರಿ.
ಆದರೆ ಇಲ್ಲೊಂದು ವಂಚನೆ ಪ್ರಕರಣದ ಆರೋಪಿಗಳಿಗೆ ಬರೋಬ್ಬರಿ ನೂರಾ ಎಪ್ಪತ್ತೊಂದು ಕೋಟಿ ದಂಡ ವಿಧಿಸಿರುವ ಅಪರೂಪದ ಪ್ರಕರಣವೊಂದು ಸಾಮಾಜಿಕ ಜಾಲತಾಣದಲ್ಲಿ ಇಂದಿನ ಪ್ರಮುಖ ಸುದ್ದಿಯಾಗಿ ಹೊರಬಿದ್ದಿದೆ.
ತಮಿಳುನಾಡು ಮೂಲದ ಕೊಯಂಬತ್ತೂರ್ ನ ಸ್ಥಳೀಯ ನ್ಯಾಯಾಲಯ ಇಲ್ಲಿನ ಇಬ್ಬರಿಗೆ ಬರೊಬ್ಬರಿ 171.74 ಕೋಟಿ ರೂ.ದಂಡ ವಿಧಿಸಿ ತೀರ್ಪನ್ನು ನೀಡಿದ್ದು ಈಗ ಭಾರೀ ಸುದ್ದಿಯಾಗಿದೆ.
ಮಾರ್ಕೆಂಟಿಗ್ ಕಂಪನಿಯೊಂದರ ಇಬ್ಬರು ಡೈರೆಕ್ಟರ್‌ಗಳಿಗೆ 27 ವರ್ಷ ಜೈಲು ಶಿಕ್ಷೆ ಜೊತೆಗೆ 171.74 ಕೋಟಿ ರೂಪಾಯಿಯ ದಂಡ ಹಾಕಿದೆ.
ಇವರು ಸಾರ್ವಜನಿಕ ಠೇವಣಿದಾರರಿಗೆ 870.1 ಕೋಟಿ ರೂಪಾಯಿ ವಂಚನೆ ಮಾಡಿದ್ದರು.ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಸುದೀರ್ಘ ವಿಚಾರಣೆ ಬಳಿಕ ಇದೀಗ ತೀರ್ಪು ಹೊರ ಬಿದ್ದಿದೆ.
– ಸಂಗ್ರಹ ಸುದ್ದಿ.