ಶಿವಮೊಗ್ಗ,
ವಿಮಾನ ನಿಲ್ದಾಣಕ್ಕೆ ಜಮೀನು ಬಿಟ್ಟುಕೊಟ್ಟ ರೈತರಿಗೆ ನಿವೇಶನ ನೀಡಲು ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಅಶೋಕ್ ನಾಯ್ಕ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿವೆಶನ ಹಂಚಿಕೆ ಕುರಿತಾಗಿ ವಿಸ್ತೃತ ಚರ್ಚೆ ನಡೆಸಿ ಈ ಬಗ್ಗೆ ತೀರ್ಮಾನಿಸಲಾಯಿತು.

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಮೀನು ಬಿಟ್ಟುಕೊಟ್ಟ ರೈತರಿಗೆ ನಿವೇಶನ ಹಂಚಿಕೆಯಲ್ಲಿ ಗೊಂದಲವಾಗಿತ್ತು. ರೈತರು ಈ ನಿವೇಶನ ಹಂಚಿಕೆ ವಿರುದ್ಧ ಕೋರ್ಟ್ ಗೆ ಹೋಗಿದ್ದರು. ಆದರೆ ಬೆಂಗಳೂ ರಿನಲ್ಲಿ ಸಂಸದರು ಮತ್ತು ಹೌಸಿಂಗ್ ಬೋರ್ಡ್ ವ್ಯವಸ್ಥಾಪರೊಂದಿಗೆ ರೈತರ ಸಭೆಯಲ್ಲಿ ತೀರ್ಮಾನವಾ ದಂತೆ ನಿವೇಶನ ನೀಡಲು ತೀರ್ಮಾನವಾಗಿತ್ತು.

ಅದರಂತೆ, ಸೋಗಾನೆಯ ಬಳಿಯ ಶಿವಪ್ಪನ ಕ್ಯಾಂಪ್ ನಲ್ಲಿ ಕೆ.ಹೆಚ್.ಬಿ.ಯ ೩೫೦ ನಿವೇಶನ ನೀಡಲು ತೀರ್ಮಾನಿಸಿದಂತೆ ಶಾಸಕ ಅಶೋಕ್ ನಾಯ್ಕ್ ಮತ್ತು ಎಸಿ ದೊಡ್ಡನಗೌಡರ ನೇತೃತ್ವದಲ್ಲಿ ೩೫೦ ಜನರಿಗೆ ಲಾಟರಿ ಮೂಲಕ ನಿವೇಶನ ಹಂಚಲು ತೀರ್ಮಾನಿಸಲಾಯಿತು.

ಖಾತೆದಾರರ ಹೆಸರು ಕೈಬಿಟ್ಟಿದ್ದು, ಅವರ ಹೆಸರನ್ನ ಸೇರಿಸಲು ಪಟ್ಟಿ ಮಾಡಲಾಯಿತು. ಶಿವಣ್ಣ ಕ್ಯಾಂಪ್ ನಲ್ಲಿ ನಿವೇಶನ ಮತ್ತು ಮನೆ ಕಟ್ಟಿಸಿಕೊಡಲು ಕೋರಲಾಯಿತು. ಮೂರು ನಾಲ್ಕು ದಿನಗಳಲ್ಲಿ ಕೋರ್ಟ್ ನಲ್ಲಿರುವ ವ್ಯಾಜ್ಯ ಹಿಂಪಡೆಯುವಂತೆ ಅಶೋಕ್ ನಾಯ್ಕ್ ಸೂಚಿಸಿದ್ದು, ಸೆ. ೧೦ ರೊಳಗೆ ಲಾಟರಿ ಮೂಲಕ ಹಂಚಲು ಸೂಚಿಸಿದರು.
ಸಭೆಯಲ್ಲಿ ಸಂತ್ರಸ್ಥರು ಇದ್ದರು.