ಶಿವಮೊಗ್ಗ, ಆ.17:
ಭದ್ರಾವತಿಯಲ್ಲಿ ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಗಲಾಟೆಯನ್ನ ಕೋಮು ಗಲಭೆ ಎಂದು ಬಿಂಬಿಸುತ್ತಿರುವ ಬಿಜೆಪಿಯವರು ಸಾಬೀತು ಪಡಿಸಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಸವಾಲು ಹಾಕಿದ್ದಾರೆ.
ಬಿಜೆಪಿ ನಾಯಕರು ಮಕ್ಕಳ ಮೇಲೆ ಆಣೆ ಮಾಡಿ ಹೇಳಲಿ ನೋಡೋಣ!
ವೈಯುಕ್ತಿಕ ದ್ವೇಷದಿಂದ ಬಡಿದಾಡಿಕೊಂಡಿದ್ದಾರೆ. ಆದರೆ ಬಿಜೆಪಿಯವರು ಇದನ್ನ ಕೋಮುಬಣ್ಣ ತುಂಬಿದ್ದಾರೆ. ಇದಕ್ಕೆ ಚುನಾವಣೆ ವರ್ಷದ ಹಿನ್ನಲೆಯೇ ಕಾರಣವೆಂದರು.
ನಾನು ನನ್ನ ಮಕ್ಕಳ ಮೇಲೆ ಆಣೆ ಮಾಡಿ ಹೇಳುವೆ ಇದು ಕೋಮುಗಲಭೆ ಅಲ್ಲ, ಯಾವ ದೇವಸ್ಥಾನಕ್ಕಾದರೂ ಬಂದು ಮಕ್ಕಳ ಮೇಲೆ ಆಣೆ ಮಾಡಿ ಹೇಳುವೆ. ಬಿಜೆಪಿಯ ನಾಯಕರು ಅವರ ಮಕ್ಕಳನ್ನ ದೇವಸ್ಥಾನಕ್ಕೆ ಕರೆದುಕೊಂಡು ಬಂದು ಆಣೆ ಮಾಡಲಿ
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂಗಮೇಶ್ವರ್ ಅವರು ಹಲ್ಲೆ ನಡೆಸಿದ ಮುಬಾರಕ್ ಮತ್ತು ಸುನೀಲ್ ಇಬ್ಬರೂ ಒಟ್ಟಿಗೆ ಜೂಜು ಆಡಿದ ವ್ಯಕ್ತಿಗಳು, ವೈಯುಕ್ತಿಕ ದ್ವೇಷದಿಂದ ಬಡಿದಾಡಿಕೊಂಡಿದ್ದಾರೆ. ಆದರೆ ಬಿಜೆಪಿಯವರು ಇದನ್ನ ಕೋಮುಬಣ್ಣ ತುಂಬಿದ್ದಾರೆ. ಇದಕ್ಕೆ ಚುನಾವಣೆ ವರ್ಷದ ಹಿನ್ನಲೆಯೇ ಕಾರಣವೆಂದರು.
ನಾನು ನನ್ನ ಮಕ್ಕಳ ಮೇಲೆ ಆಣೆ ಮಾಡಿ ಹೇಳುವೆ ಇದು ಕೋಮುಗಲಭೆ ಅಲ್ಲ, ಯಾವ ದೇವಸ್ಥಾನಕ್ಕಾದರೂ ಬಂದು ಮಕ್ಕಳ ಮೇಲೆ ಆಣೆ ಮಾಡಿ ಹೇಳುವೆ. ಬಿಜೆಪಿಯ ನಾಯಕರು ಅವರ ಮಕ್ಕಳನ್ನ ದೇವಸ್ಥಾನಕ್ಕೆ ಕರೆದುಕೊಂಡು ಬಂದು ಆಣೆ ಮಾಡಲಿ ಎಂದು ಗುಡುಗಿದರು.
ಭದ್ರಾವತಿಯಲ್ಲಿ ಅಭಿವೃದ್ಧಿ ಮಾಡಲು ಸಾಕಷ್ಟು ವಿಷಯಗಳಿವೆ. ಅದನ್ನ ಬಿಜೆಪಿಯವರು ಮಾಡಲಿ. 500 ದೇವಸ್ಥಾನಕ್ಕೆ ಅನುದಾನ ನೀಡಬೇಕೆಂದು ಸರ್ಕಾರಕ್ಕೆ ಕೇಳಿದ್ದೇನೆ. ಕಾಂಗ್ರೆಸ್ ನವ ಎಂಬ ಕಾರಣಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ. ಹಿಂದುತ್ವ ಎನ್ನುವ ಬಿಜೆಪಿ ದೇವಸ್ಥಾನಕ್ಕೆ ಅನುದಾನ ನೀಡಬಹುದಿತ್ತು. ಆದರೆ ರಾಜಕೀಯ ದ್ವೇಷವಿದೆ ಎಂದರು.
ನಗರದಲ್ಲಿರುವ ಎರಡು ಕಾರ್ಖಾರ್ನೆಗಳನ್ನ ಅಭಿವೃದ್ಧಿ ಪಡಿಸಬೇಕಿದೆ. ಇದನ್ನೆಲ್ಲ ಬಿಟ್ಟು ಬಿಜೆಪಿ ಕೋಮುಗಲಭೆಯನ್ನ ಸೃಷ್ಠಿಸುತ್ತಿರುವುದು ದುರದೃಷ್ಠಕರ ಎಂದರು.
ವಿಐಎಸ್ ಎಲ್ ಮತ್ತು ಎಂಪಿಯವರು ತಿಂಗಳಾನುಗಟ್ಟಲೆ ಪ್ರತಿಭಟನೆ ನಡೆಸಿದರು.
ಒಂದು ದಿನವೂ ಬಾರದ ಈಶ್ವರಪ್ಪ ನಿನ್ನೆ ವೈಯುಕ್ತಿಕ ದ್ವೇಷದಿಂದ ಬಡಿದಾಡಿಕೊಂಡ ಸುನೀಲ್ ವಿಚಾರದಲ್ಲಿ ಆಸ್ಪತ್ರೆಗೆ ಭೇಟಿ ನೀಡಿರುವುದು ರಾಜಕೀಯ ಹಿನ್ನಲೆ ಇದೆ. ಕೋಮುಬಣ್ಣವನ್ನ ಹಚ್ಚಲಾಗಿದೆ. ಭದ್ರಾವತಿ ಜನ ಇಂತಹವರನ್ನ ನಂಬಬಾರದು ಎಂದು ಮನವಿ ಮಾಡಿಕೊಂಡರು.