ಶಿವಮೊಗ್ಗ, ಆ.14:
ಶಿವಮೊಗ್ಗದಲ್ಲಿ ಗಾಂಜಾಗೇ ಪೋಲೀಸರೇ ಬೆದರಿದರಾ? ಭಯವಾಗ್ತಿದೆ. ಇಂದು ಸಂಜೆ ಆರರ ಹೊತ್ತಿಗೆ ಗಾಂಜಾ ಸೇವಿಸಿದ್ದರೆನ್ನಲಾದವರು, ಇಡೀ ಶಿವಮೊಗ್ಗ ಜೆಪಿಎನ್ ರಸ್ತೆಯನ್ನೇ ಬೆದರಿಸಿದ್ದಾರೆ.
ಗಾಂಜಾ ಹಾವಳಿ ಎಷ್ಟಿತ್ತೆಂದರೆ ಇಲ್ಲಿ ಅಮಾಯಕರಾದ, ಬದುಕಿನ ಅಂಗಡಿ ಬಾಗಿಲು ಹಾಕಿಕೊಂಡು ನೆಮ್ಮದಿಯಾದ ಸಂಡೇ ಸವಿಯಲು ಮನೆಯಲ್ಲಿ ಕುಳಿತ ವ್ಯಾಪಾರಸ್ಥರು ಮತ್ತೆ ಬಂದಿದ್ದಾರೆ.
ದುರಂತ ಗೊತ್ತೇ…, ಜನ ದೂರು ನೀಡಿದಾಗ ಬಂದಿದ್ದ ಪೊಲೀಸರು ಬೆದರಿದ್ದಾರೆ. ಎಷ್ಟರ ಮಟ್ಟಿಗೆ ಬೆದರಿದ್ದಾರೆಂದರೆ ಒಬ್ಬ ಪೊಲೀಸ್ ಸಹ ಅವರನ್ನ ಮಾತನಾಡಿಸಲು ಹೋಗಿಲ್ಲ. (ಈ ದಾಖಲೆ ನಿಮ್ಮತುಂಗಾತರಂಗ ಬಳಿ ಈಗ ಇದೆ)
ಅಂತಿಮವಾಗಿ ಅಲ್ಲಿನ ವರ್ತಕರು ಡಿವೈಎಸ್ಪಿ ಬಾಲರಾಜ್ ಸರ್ ಗೆ ಪೋನ್ ಮಾಡಿದ್ದಾರೆ. ಖಡಕ್ ಅಧಿಕಾರಿ ಅದರಲ್ಲೂ ಅಪರಾಧಗಳ ವಿರುದ್ದ ಸಿಡಿದೇಳುವ ಖಡಕ್ ಅಧಿಕಾರಿ ಮೂಲೆಯಲ್ಲೇ ಕುಳಿತಿದ್ದ ಅಧಿಕಾರಿಗಳಿಗೆ ಜಾಡಿಸಿ ಕಳಿಸಿದ್ದಾರೆ.
ಒಂದಿಬ್ಬರ ಲಿಂಕ್ ಸಿಕ್ಕಿದೆ ಎನ್ನಲಾಗಿದ್ದು, ಅಮಾಯಕ ವ್ಯಾಪಾರಿಗಳಿಗೆ ಬಾಲರಾಜ್ ಅವರು ನ್ಯಾಯ ಕೊಡಿಸ್ತಾರೆ ಎಂಬ ನಂಬಿಕೆ ಇದೆ.
ತುತ್ತಿಗೆ ಪರದಾಡುವವರ ಹೊಟ್ಟೆಗೆ ಹೊಡೆಯುವ ಕೆಲ ಯಾರಿಂದ ಆದರೂ ಅದು ಅಕ್ಷಮ್ಯವೇ ಹೌದು. ದೊಡ್ಡಪೇಟೆ ಪೊಲೀಸರೇನು ಮಾಡ್ತಿದ್ದಾರೆ ಎಂಬುದು ಸಾರ್ವಜನಿಕರ ಪರವಾಗಿ ತುಂಗಾತರಂಗ ಎತ್ತಿರುವ ಪ್ರಶ್ನೆ? ನೋಡುವ ನಿರೀಕ್ಷೆಯಷ್ಟೇ!?