ಶಿವಮೊಗ್ಗ, ಆ.15:
ಭಾರತ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಜೆ ಸಿ ಐ ಶಿವಮೊಗ್ಗ ಮಲ್ನಾಡ್ ಘಟಕವು ವಿಶೇಷವಾಗಿ ಆಚರಿಸಲು ಉದ್ದೇಶಿಸಿದೆ.
ಅಸಂಖ್ಯಾತ ಹೋರಾಟ, ತ್ಯಾಗ, ಬಲಿದಾನಗಳ ಕಾರಣದಿಂದ ಸಂಕೋಲೆಯಿಂದ ಬಿಡುಗಡೆಯಾದ ಭಾರತಾಂಬೆಗೆ ಪ್ರಾಪ್ತಿಯಾದ ಸ್ವಾತಂತ್ರ್ಯಕ್ಕೆ ಈಗ ಅಮೃತ ಮಹೋತ್ಸವದ ಸಂಭ್ರಮದ ಹಿನ್ನಲೆಯಲ್ಲಿ
ಭಾರತ ಸ್ವಾತಂತ್ರ್ಯದ 75ನೇ 1000 ಅಡಿ ಉದ್ದದ ತ್ರಿವರ್ಣಧ್ವಜದ ಮೆರವಣಿಗೆ ನಡೆಯಲಿದೆ.
ಈ ಸಂಭ್ರಮವನ್ನು ವೈವಿಧ್ಯಮಯವಾಗಿ ಆಚರಿಸುವ ಸಲುವಾಗಿ ಯುವ ಪೀಳಿಗೆಯ ಮನದಲ್ಲಿ ರಾಷ್ಟ್ರ ಪ್ರೇಮ, ದೇಶ ಭಕ್ತಿ ಬಿಂಬಿಸುವ ಸಲುವಾಗಿ ಜೆ ಸಿ ಐ ಶಿವಮೊಗ್ಗ ಮಲ್ನಾಡ್ ಘಟಕವು ವಿಶೇಷವಾದ 1000 ಅಡಿ ಉದ್ದದ ತ್ರಿವರ್ಣಧ್ವಜದ ಮೆರವಣಿಗೆಯನ್ನು ಶಾಲಾ ಮಕ್ಕಳಿಂದ ಜಾಥಾ ನಡೆಸಲು ಉದ್ದೇಶಿಸಿದೆ.
ಈ ಕಾರ್ಯಕ್ರಮಕ್ಕೆ ಶಿವಮೊಗ್ಗದ ಪ್ರಮುಖ ಶಾಲೆಗಳ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಈ ಕಾರ್ಯಕ್ರಮದ ಮೆರುಗು ಹೆಚ್ಚಿಸಿರುತ್ತಾರೆ.
ಈ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ ಸಿ ನಾರಾಯಣ ಗೌಡ ಅವರು ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮಾಜಿ ಸಚಿವರು, ಶಾಸಕ ಕೆ ಎಸ್ ಈಶ್ವರಪ್ಪ, ಸಂಸದ ಬಿ ವೈ ರಾಘವೇಂದ್ರ,ವಿಧಾನ ಪರಿಷತ್ ಸದಸ್ಯರುಗಳು, ಎಲ್ಲಾ ಚುನಾಯಿತ ಪ್ರತಿನಿಧಿಗಳು, ಹಾಗೂ ಜೆ ಸಿ ಐ ಶಿವಮೊಗ್ಗ ಮಲ್ನಾಡ್ ಘಟಕದ ಪೂರ್ವ ಅಧ್ಯಕ್ಷರು, ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿರುತ್ತಾರೆ.
ಈ ಮೆರವಣಿಗೆಯು ಶಿವಮೊಗ್ಗ ವೈದ್ಯಕೀಯ ಕಾಲೇಜು ಆವರಣದಿಂದ ಹೊರಟು ಮದ್ಯಾಹ್ನ 12 ಗಂಟೆಗೆ ಕುವೆಂಪು ರಂಗಮಂದಿರದ ಹಿಂಭಾಗ ಎನ್. ಈ.ಎಸ್ ಗ್ರೌಂಡ್ ನಲ್ಲಿ ಅಂತ್ಯವಾಗಲಿದೆ.
ಆದ್ದರಿಂದ ಈ ಅದ್ಭುತ ಕಾರ್ಯಕ್ರಮಕ್ಕೆ ತಾವುಗಳು ಖುದ್ದಾಗಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಹಾಗೂ ತಮ್ಮ ಮಾಧ್ಯಮಗಳಲ್ಲಿ ವರದಿ ಮಾಡಬೇಕಾಗಿ ತಮ್ಮಲ್ಲಿ ಕೋರಿದ್ದಾರೆ.
ಜೆ ಸಿ ಪ್ರದೀಪ್ ಕುಮಾರ್ ಎಸ್,
ಅಧ್ಯಕ್ಷರು, ಜೆ ಸಿ ನಾಗರಾಜ್ ಸಂಚಾಲಕರು ಹಾಗೂ ಜೆ ಸಿ ಗಿರೀಶ್ ಕೆ ಒಡೆಯರ್
ಕಾರ್ಯಕ್ರಮ ಸಹ ಸಂಚಾಲಕರು ಸರ್ವರನ್ನು ಸ್ವಾಗತಿಸಿದ್ದಾರೆ.