ಶಿವಮೊಗ್ಗ, ಆ.14:
ನಿನ್ನೆ ಸಂಜೆ ಶಿವಮೊಗ್ಗ ಸಿಟಿ ಸೆಂಟರ್ ನಲ್ಲಿ ನಡೆದ ಸಾವರ್ಕರ್ ಪೋಟೊ ಕುರಿತಾದ ಗಲಾಟೆಯಲ್ಲಿ ಆರೋಪಿಯಾಗಿದ್ದರೆಂದು ಹೇಳಿ ದೂರು ದಾಖಲಾಗಿರುವ ಟಿಪ್ಪುನಗರದ ಕಾಟು ಆಸಿಫ್ ಯಾನೆ ಎಂಡಿ ಶರೀಫ್ ಅವರಿಗೆ ಜಿಲ್ಲಾ ನ್ಯಾಯಾಲಯದಲ್ಲಿಂದು 26/08/2022 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಗಾಂಧೀಜಿ ಅವರ ಪೋಟೋ ಚಿಕ್ಕ ಮಾಡಿ, ಬೇರೆಯವರ ಪೋಟೋ ದೊಡ್ಡ ಹಾಕಿರುವ ಬಗ್ಗೆ ಜನರ ಜೊತೆ ಸೇರಿ ಮಾಲ್ ನಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದ ಶರೀಫ್ ಹಾಲಿ ನಗರಪಾಲಿಕೆ ಕೌನ್ಸಿಲರ್ ಅವರ ಪತಿ ಹಾಗೂ ಕನ್ನಡ ಪರ ಪರ ಸಂಘಟನೆಯೊಂದರ ಪ್ರಮುಖರಾಗಿದ್ದಾರೆ.
ಈ ಘಟನೆ ನಂತರ ಸಿಟಿ ಸೆಂಟರ್ ನಡೆಸುವ ಬೆರಿಬೆರಿ ಅವರ ತಂಡ ದೂರು ನೀಡಿತ್ತು. ಇದಕ್ಕೆ ಪಾಲಿಕೆ ಮೇಯರ್ ಹಾಗೂ ಹಿಂದೂಪರ ಸಂಘಟನೆಗಳು ಆಗ್ರಹಿಸಿದ್ದವು.

