ಜಂಗಮರ 21ನೇ ಶತಮಾನದ ‘ಕಲ್ಯಾಣ ಕ್ರಾಂತಿ’: ಉಪನ್ಯಾಸಕಿ “ಬಿಂದು ಆರ್.ಡಿ ರಾಂಪುರ” ಅವರ ಬರಹ

ಪ್ರಪಂಚದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ವ ಜನಾಂಗದವರನ್ನು ಮನುಷ್ಯರೆಂದು, ಸಮಾನ ಗೌರವದಿಂದ ಕಂಡು, ವಿಶ್ವಕ್ಕೆ ವಿಶ್ವ ಮಾನವ ಸಂದೇಶ ಸಾರಿದ ಏಕೈಕ ವ್ಯಕ್ತಿಯೆಂದರೆ ಮಹಾನ್ ಮಾನವತಾವಾದಿ, ಸಾಮಾಜಿಕ, ಧಾರ್ಮಿಕ ಕ್ರಾಂತಿಯ ಹರಿಕಾರ ವಿಶ್ವ ಗುರು ಅಣ್ಣಾ ಬಸವಣ್ಣರವರು.
ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಕಾರ್ಯವನ್ನು ಮೆಚ್ಚಿ; ಅಂದಿನ ದಿನಗಳಲ್ಲಿ ಯಾವುದೇ ಮಾದ್ಯಮ ಇಲ್ಲದ ಕಾಲದಲ್ಲಿ ಆಪ್ಘಾನಿಸ್ತಾನದ ಮರುಳಶಂಕರರು, ಹಾಗೂ ಕಾಶ್ಮೀರದ ಅರಸು ಮೊಳಿಗೆ ಮಾರಯ್ಯ ಮತ್ತು ಮೊಳಿಗೆ ಮಾಹಾದೇವಿ ದಂಪತಿಗಳು, ಮತ್ತು ತಮಿಳುನಾಡು, ಮಹಾರಾಷ್ಟ್ರ ಗುಜರಾತ್ ಸೇರಿದಂತೆ ವಿವಿಧ ಭಾಗಗಳಿಂದ ಕಲ್ಯಾಣ ನಗರಕ್ಕೆ ದಾವಿಸಿ ಬಂದು ಕಾಯಕ ದಾಸೋಹ ತತ್ವಗಳನ್ನು ಅಳವಡಿಸಿಕೊಂಡು, ಲಿಂಗದೀಕ್ಷೆ ಪಡೆದು ಶರಣರೆಂಬೆ ಹೊಸ ಧರ್ಮವನ್ನು ಅನುಸರಣೆ ಮಾಡಿದರು.
ಈ ರೀತಿಯ ಜಂಗಮರು ಹಲವಾರು ಜನರು ಅಥವಾ ಶರಣರು ಇದ್ದಾರೆ. ಜಂಗಮ ಎಂದರೆ ಒಳ್ಳೆಯ ವಿಚಾರಗಳನ್ನು ನಿರಂತರವಾಗಿ ಹರಡಿ, ಅರಿವು ಆಚಾರ ಒಳಗೊಕಡಿರುವ ಹಾಗೂ ಸದಾ ಚಲನಶೀಲತೆ ಒಳಗಾಗುವ ಚೈತನ್ಯ ಶೀಲಗುಣವುಳ್ಳವರು.


ಇಂತಹ ಆಧುನಿಕ ದಿನಗಳಲ್ಲಿ ಈ ರೀತಿಯ ನಿಜ ಜಂಗಮರು ಯಾರು ಸಿಗಬಹುದೆಂದು ಹುಡುಕುವವರಿಗೆ ನಮ್ಮ ತರಳಬಾಳು ಶಾಖಾಮಠದ ಪೀಠಾಧ್ಯಕ್ಷಾರದ ಹಾಗೂ ರಂಗ ಜಂಗಮರು, ಸಾಹಿತಿಗಳೆಂದೇ ಖ್ಯಾತಿ ಪಡೆದ, ತಾಯಿ ಹೃದಯದ ಸಾಣೆಹಳ್ಳಿಯ ಪಂಡಿತಾರಾಧ್ಯ ಶ್ರೀಗಳನ್ನು ನೋಡಬಹುದು. ಅವರ ಎಲ್ಲಾ ಲೇಖನಗಳು, ಕೃತಿಗಳು, ಬರಹಗಳು ಮೌಢ್ಯ ವಿರೋಧ, ವೈಚಾರಿಕ ತಳಹದಿಯ ಚಿಂತನೆಗಳ ಬರಹಗಳಾಗಿವೆ. ಇವುಗಳ ಹಿಂದಿನ ಮೂಲವೆಂದರೆ ಬಸವಾದಿ ಶರಣರ ವಚನಗಳು, ಹಾಗೂ ಬಸವಾದಿ ಶರಣರ ತತ್ವ ಆದರ್ಶಗಳೆಂಬುದನ್ನು ಇವರ ಬರಹಗಳಿಂದ, ಮತ್ತು ನಡೆ ನುಡಿಯಿಂದ ಅರಿಯಬಹುದು.


ಈ ನಮ್ಮ ಗುರು, ತಂದೆಯ ರೂಪದ ಪೂಜ್ಯರು ಯಾವುದೇ ಕ್ಷೇತ್ರ ಆರಿಸಿಕೊಂಡರೂ ಆ ಕ್ಷೇತ್ರದ ತುಂಬಾ ಶರಣರ ಬದುಕು, ತತ್ವ ಆದರ್ಶಗಳನ್ನೇ ಮುಖ್ಯ ಅಂಶವಾಗಿ ಬಳಸಿಕೊಂಡು ಈ ಮೂಲಕ ಜನಮಾನಸದಲ್ಲಿ ಶರಣರ ಆದರ್ಶಗಳನ್ನು, ಸರ್ವರೂ ಸಮಾನರು ಎಂಬ ಬಸವಣ್ಣರವರ ತತ್ವವನ್ನು ಬಿತ್ತುವ ಕಾರ್ಯ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ.


ಇವರ ಸೇವೆ ಕೇವಲ ರಂಗಭೂಮಿ ಮಾತ್ರವಲ್ಲದೇ ಸಾಮಾಜಿಕ ಕ್ಷೇತ್ರದಲ್ಲೂ ಆಗಾಧ ಪ್ರಮಾಣದಲ್ಲಿ ಇದೆ. ಭಕ್ತರು ರಾತ್ರೋರಾತ್ರಿ ಸಂಪರ್ಕಿಸಬೇಕೆಂದು ಕೇಳಿದರೆ ಇಲ್ಲವೆಂಬ ಮಾತು ಇಲ್ಲ. ಎಂತಹದ್ದು ಸಮಸ್ಯೆ ಇದ್ದರೂ ಸಮಾನ ಚಿತ್ತದಿಂದ ಕೇಳುತ್ತಾರೆ. ಪರಿಹಾರಕ್ಕೆ ಮುಂದಾಗುತ್ತಾರೆ. ನಮ್ಮ ಮಕ್ಕಳೆಂದು ತಮ್ಮ ಪ್ರತಿಷ್ಠೆ ಗೌರವ ಬಿಟ್ಟು ಸಹಾಯಕ್ಕೆ ನಿಲ್ಲುತ್ತಾರೆ. ಇಂತಹ ಪೂಜ್ಯ ಗುರುವರ್ಯರು ಪರಿಸರದ ಉಳಿವಿಗೆ ಅಳಿಲುಸೇವೆ, ಭದ್ರಾ ಅಭಾಯಾರಣ್ಯದ ಉಳಿವಿಗಾಗಿ ಹೋರಾಟ, ಸ್ವಚ್ಛತಾ ಅಭಿಯಾನಗಳು, ಮಧ್ಯಪಾನ ನಿಷೇಧ ಹೋರಾಟ, ಸರ್ವಶರಣರ ಸಮ್ಮೇಳನಗಳು, ದೇಶ ವಿದೇಶಗಳಲ್ಲಿ ಬಸವ ತತ್ವ ಪ್ರಚಾರ ಮುಂತಾದ ಹಲವಾರು ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಇವರ ಬದುಕು ಬರಹ, ಇವರ ನಡೆ ; ನುಡಿ ಸಂಪೂರ್ಣ ಬಸವತತ್ವಗಳಿಂದ ತುಂಬಿ ಹೋಗಿದೆ.
ತರಳಬಾಳು ಮಠದ ಬಹುತೇಕ ಸಾಮಾನ್ಯ ಸದ್ಭಕ್ತರಿಗೆ, ಬಡ ಜನರಿಂದ ಇಡಿದು ನಿರ್ಗತಿಕರವರಿಗೆ ಈ ನಮ್ಮ ರಂಗ ಜಂಗಮರಾದ ನಮ್ಮ ಪಾಲಿಗೆ ಅಜ್ಜರಾದ ಪಂಡಿತಾರಾಧ್ಯ ಶ್ರೀಗಳೆಂದರೆ ಅಚ್ಚು ಮೆಚ್ಚು,


ಸದಾ ಭಕ್ತರಿಗೆ ಸಿಗುವ ಭಕ್ತರಿಗೆ ಯಾವುದೇ ಮುಲಾಜಿಲ್ಲದೆ ಅವರ ದೋಷಗಳಗನ್ನು ನೇರವಾಗಿ ತಿದ್ದುವ, ನೇರ ನಡೆ ನುಡಿಯು ಭಕ್ತರಿಗೆ ತುಂಬಾ ಪ್ರೀತಿ, ಎದುರು ಉತ್ತರ ನೀಡುವ ಧೈರ್ಯ ನಮಗೆ ಯಾರಿಗೂ ಇಲ್ಲ.
ಪೂಜ್ಯರು ಸಾಣೆಹಳ್ಳಿ ಎಂಬ ಕುಗ್ರಾಮ ಗ್ರಾಮವನ್ನು ತಮ್ಮ ಸ್ವಂತ ಬಲದಿಂದ, ರಂಗಭೂಮಿಯ ಮೂಲಕ ಹಗಲು ರಾತ್ರಿ ಎನ್ನದೆ ತಮ್ಮ ಭಕ್ತರು, ಕಾರ್ಯಕರ್ತರೊಂದಿಗೆ ವಿಶ್ವಕ್ಕೆ ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಲಾ ಸೇವೆಗಾಗಿ ರಂಗ ಭೂಮಿಗಾಗಿ ವೈಚಾರಿಕತೆಗಾಗಿ, ಬಸವ ತತ್ವ ಪ್ರಚಾರಕ್ಕಾಗಿ, ನಾಡಿನ, ದೇಶದ, ವಿಶ್ವದ ಜನರನ್ನು ಹಲವಾರು ವಿದ್ವಾಂಸರನ್ನು ಸೆಳೆಯುವಂತೆ ಮಾಡಿದೆ. ಬಸವಣ್ಣ ಅವರ ಕಲ್ಯಾಣ ಕ್ರಾಂತಿಯಂತೆ, ಮತ್ತೆ ಕಲ್ಯಾಣ ಎಂಬ ಅಭಿಯಾನವನ್ನು ನಾಡಿನ ತುಂಬಾ ಶರಣರ ಚಳುವಳಿಯನ್ನು ಮಾಡಿ, ಮತ್ತೆ ನಾವೆಲ್ಲರೂ ಮನುಷ್ಯರೇ, ಶರಣರು, ಸರ್ವರೂ ಸಮಾನರು ಎಂಬುದನ್ನು ನೆನಪಿಸಿದರು, ಇದು ನಿರಂತರವಾಗಿ ನೆನೆಯಬೇಕೆಂದು ನಿಜವಾದ ಶರಣರು, ಬಸವ ಆರಾಧಕರು, ನಾಡಿನ ಭೌದ್ಧಿಕ ವಲಯ ಅಪೇಕ್ಷೆಸಿದೆ.
ಶಿವಸಂಚಾರವೆಂಬ ಕಲಾತಂಡ ಕಟ್ಟಿ ನಾಡಿನಾದ್ಯಂತ, ದೇಶ ವಿದೇಶಗಳಲ್ಲಿ ನಾಟಕಗಳು ಮೂಲಕ ಸಾಮಾಜಿಕ, ಧಾರ್ಮಿಕ ಶರಣ ವಿಚಾರಧಾರೆಗಳು, ಮನೋಭಾವ ಬದಲಾಗುವಂತೆ ಪೂಜ್ಯರು ಸೃಷ್ಟಿಸಿದ್ದಾರೆ. ಪೂಜ್ಯರ ಬಗ್ಗೆ ಹೇಳುತ್ತಾ ಹೋದರೆ ನಾನು ಇನ್ನೂ ಪುಟ್ಟ ಮಗುವಿನಂತೆ ಹೇಳುತ್ತಲೇ ಇರುತ್ತೆನೆ. ಸಾಣೇಹಳ್ಳಿ ಎಂಬ ಗ್ರಾಮದಲ್ಲಿ ರಂಗಭೂಮಿಗಾಗಿ ಈಜಿಪ್ಟ್ ಮಾದರಿ ಬಯಲು ರಂಗಮಂದಿರ ನಿರ್ಮಾಣ ಮಾಡಿದ್ದಾರೆ. ಇಂತಹ ಆಧುನಿಕ ದಿನಗಳಲ್ಲಿ ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಎಕೈಕ ಕಾವಿಧಾರಿ ಗುರುವಾಗಿದ್ದಾರೆ. ಹಾಗೂ 12ನೇ ಶತಮಾನದ ಬಸವಣ್ಣವರಂತೆ ಸರ್ವ ಜನಾಂಗದವರಿಗೆ ಲಿಂಗಧೀಕ್ಷೆ ನೀಡುತ್ತಾ ಬಂದಿದ್ದಾರೆ. ಪ್ರತಿ ತಿಂಗಳು ಮೊದಲನೇ ಭಾನುವಾರ ಎಲ್ಲಾ ಜನಾಂಗದವರಿಗೆ ಲಿಂಗಧೀಕ್ಷೆ ನೀಡಿ, ಬಸವಾದಿ ಶರಣರ ತತ್ವ ಆದರ್ಶಗಳನ್ನು ಬೋಧಿಸಿ, ಸಮಾನತೆ ಹರಿಕಾರಾಗಿದ್ದಾರೆ.
ಈ ನಮ್ಮ ಗುರುವರ್ಯರ ಮಹಾನ್ ಸಾಧನೆಯ ಹಿಂದೆ ಹಲವಾರು ನೋವು ನಲಿವುಗಳಿವೆ. ನಿದ್ದೆಗೆಟ್ಪು ಒದ್ದಾಡಿದ, ಊಟ ಬಿಟ್ಟ ದಿನಗಳಿವೆ. ಇವುಗಳನ್ನು ಎಲ್ಲೂ ವ್ಯಕ್ತ ಪಗಿಸದೇ, ಎಲ್ಲವನ್ನೂ ಭಕ್ತರಿಗಾಗಿ, ಸಹಿಸಿಕೊಂಡು, ಇಂದು ತಮ್ಮದೇ ಛಾಪು ಮೂಡಿಸಿದ್ದಾರೆ. ಉತ್ತಮ ಗುಣ ನಡೆಯಿರುವ, ಇಂತಹ ವ್ಯಕ್ತಿತ್ವ ಯಾರಿಗೆ ಇಷ್ಟ ಆಗಲು ಸಾಧ್ಯವಿಲ್ಲ ಹೇಳಿ? ವಜ್ರದ ಬೆಲೆ ಗುಜರಿ ವ್ಯಾಪಾರಿಗಳಿಗೆ ತಿಳಿಯದು, ಹಾಗೆಯೇ ನಮ್ಮ ಅಜ್ಜರ ವ್ಯಕ್ತಿತ್ವ ಬಸವಾಭಿಮಾನಿಗಳಿಗೆ ವಿಚಾರವಂತರಿಗೆ ಚಿಂತಕರಿಗೆ ಮಾತ್ರ ಗೊತ್ತು. ನಾವು ಪ್ರೀತಿಯಿಂದ ಚಿಕ್ಕ ಅಜ್ಜರೆಂದು ಕರೆಯುತ್ತೆವೆ. ಆದರೆ ವ್ಯಕ್ತಿತ್ವ ನಡೆ ನುಡಿ, ಶಿಕ್ಷಣ ಅನ್ನ ದಾಸೋಹ ಮುಂತಾದ ಕಾರ್ಯಕ್ರಮಗಳಲ್ಲಿ ದೊಡ್ಡ ವ್ಯಕ್ತಿ, ಗುರು ಆಗಿದ್ದಾರೆ.
ಇಂತಹ ನೇರ ನಡೆ ನುಡಿಯು, ನಮ್ಮ ಆರಾಧ್ಯ ದೈವವಾದ ಮಹಾನ್ ಚೇತನ, ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಹಾಗೂ ಬಸವಾದಿ ಶರಣರಿಂದ ಬಂದಿರಬಹುದು. ಇಂತಹ ಪೂಜ್ಯರನ್ನು ಪಡೆದ ನಾವೇ ಧನ್ಯರು. ಈ ಗುರುವಿನ ಮುಂದೆ ನಾನು ಚಿಕ್ಕ ಮಗುವಾಗೇ ಇರಲು ಇಷ್ಟ ಪಡುತ್ತೇನೆ. ನಮ್ಮ ಮಕ್ಕಳೆಂದು ಪ್ರೋತ್ಸಾಹಿಸುವ ಅವರ ಗುಣ, ಸಹಾಯಕ್ಕೆ ನಿಲ್ಲುವ ಮಾತೃ ಹೃದಯ ನಮ್ಮನ್ನು ಇನ್ನಷ್ಟು ಗಟ್ಟಿ ಮಾಡುತ್ತಾದೆ. ಸಾಧನೆಯ ಹಾದಿಯಲ್ಲಿ ಬೆಳೆಯುವಂತೆ ಮಾಡುತ್ತದೆ. ಆದ್ದರಿಂದ ಈ ನಮ್ಮ ಗುರುಗಳಲ್ಲಿಯೇ ಸರ್ವರಿಗೂ ಆಶ್ರಯ ನೀಡಿದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳನ್ನು, ಬಸವಾದಿ ಶರಣರನ್ನು ನೋಡುತ್ತಿದ್ದೇವೆ. ನಾವು ಅನುಸರಿಸುತ್ತಿದ್ದೇವೆ.
ಈ ಜಂಗಮರ, ಸಂತರ ಕಾರ್ಯ ಕೇಳಿದರೆ ನೋಡಿದರೆ ಮೈನವಿರೇಳುತ್ತದೆ. 12ನೇ ಶತಮಾನದ ಬಸವಣ್ಣರವರಿಗೆ ಸಮಾನವಾಗಿ ಮತ್ತೆ ಕಲ್ಯಾಣವೆ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಪರಿಹರಿಸುತ್ತಾ, ಜಾತಿ ಮತ ಪಂಥಗಳನ್ನು ಮೀರಿ, ಮಾನವೀಯ, ಮನುಷ್ಯತ್ವವನ್ನು ಈಗಿನ ಯುವ ಪೀಳಿಗೆಗೆ ತಲೆಗೆ ಹೊಕ್ಕುವಂತೆ, ಸಂವಾದ ಗೋಷ್ಠಿಗಳನ್ನು ನಡೆಸುತ್ತಿದ್ದಾರೆ.ಜನರ ನಡುವಿನ ಜಂಗಮ ರೆಂದು ಖ್ಯಾತಿ ಪಡೆದಿದ್ದಾರೆ. ಈ ಮತ್ತೆ ಕಲ್ಯಾಣಕ್ಕೆ ಹಲವು ನಿಂದನೆಗಳು ಎದುರಾದರು, ಜಗ್ಗದ ಬಗ್ಗದ ಆಧುನಿಕ ಬಸವಣ್ಣರೆಂದೇ ನಾಮಾಂಕಿತರಾಗಿದ್ದಾರೆ.
ಈ ವರ್ಷವು ಆಗಸ್ಟ್ ಒಂದರಿಂದ ಮೂವತ್ತರವರೆಗೆ ‘ಮತ್ತೆ ಕಲ್ಯಾಣ’ವು ತುಮಕೂರು ಆಯ್ದ ತಾಲ್ಲೂಕಿನ ಹಳ್ಳಿಗಳಲ್ಲಿ ನಡೆಯುತ್ತಿದೆ. ಬಸವಾದಿ ಶರಣರು ಎಲ್ಲೆಡೆ ಸಂಭ್ರಮಿಸುತ್ತಿದ್ದಾರೆ. ಈ ಕಾರ್ಯವನ್ನು ಎಲ್ಲ ವರ್ಗದ ಜನರೂ ಸೇರಿ ಅನುಭವ ಮಂಟಪದಂತೆ ನಿರ್ವಹಿಸುತ್ತಿದ್ದಾರೆ.


ಈ ನಮ್ಮ ಗುರುವು ಹೊಸ ದೇಶ ಕಂಡುಕೊಳ್ಳವ ಅಗತ್ಯವಿಲ್ಲ. ಇರುವ ಭರತ ಖಂಡದ ಸರ್ವ ಜನಾಂಗದವರಿಗೆ ಬಸವಾದಿ ಶರಣರ ಸಮಾನತೆಯ ತತ್ವಗಳನ್ನು ಹರಡಿ, ಜನರ ಮನೋಭಾವ ಬದಲಾಗುವಂತೆ ಮಾಡಿ ಶಾಂತಿ, ನೆಮ್ಮದಿ, ವ್ಯಕ್ತಿ ಗೌರವ, ಪ್ರೀತಿ ವಾತ್ಸಲ್ಯದಿಂದ ಜನರು ಬದುಕುವಂತಹ ಮಾನವೀಯ ಎಲ್ಲೇಯ ಮೌಲ್ಯಗಳನ್ನು ಹಂಚುತ್ತಿದ್ದಾರೆ.
ಇಂದಿನ ಪ್ರಸ್ತುತ ಸಮಾಜಕ್ಕೆ ಪೂಜ್ಯ ತರಳಬಾಳು ಜಗದ್ಗುರು ಶಾಖಾಮಠದ ಡಾ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಈ “ಮತ್ತೆ ಕಲ್ಯಾಣ”ವು ಮುಳುಗುವವರಿಗೆ ಹುಲ್ಲು ಕಡ್ಡಿ ಆಸರೆಯೆಂಬಂತೆ ದಾರಿ ದೀಪವಾಗಿದೆ. ಮತ್ತೆ ಕಲ್ಯಾಣವೆಂಬುದು ಮೃಗಳಂತಾಗಿರುವ ಮನುಜರಿಗೆ ಬಸವಾದಿ ಶರಣರ ವಚನಗಳು, ಸಿದ್ಧಾಂತಗಳ ಮೂಲಕ ಬದಲಾವಣೆ ತರಲು ಹೊರಟಿರುವ ಜಗತ್ತಿನ ಏಕೈಕ ಶ್ರೇಷ್ಠ ಕ್ರಾಂತಿಯಾಗಿದೆ.

ಬರಹಗಾರ್ತಿ

-ಬಿಂದು ಆರ್. ಡಿ. ರಾಂಪುರ.
ಅತಿಥಿ ಉಪನ್ಯಾಸಕಿ,ಲೇಖಕಿ,
ಕವಯಿತ್ರಿ,
ದಾವಣಗೆರೆ ಜಿಲ್ಲೆ,

By admin

ನಿಮ್ಮದೊಂದು ಉತ್ತರ

You missed

error: Content is protected !!