ಶಿವಮೊಗ್ಗ, ಜೂ.26:
ಶಿವಮೊಗ್ಗ ನಗರದಲ್ಲಿನ ಇತ್ತೀಚಿಗೆ ಹೆಚ್ಚುತ್ತಿರುವ ಗಾಂಜಾ ಹಾಗೂ ಮದ್ಯಸೇವನೆಯಿಂದ ಯುವಕರು ಅದರಲ್ಲೂ ಅಪ್ರಾಪ್ತ ಯುವಕರು ನಾನಾ ಅಕ್ರಮ ಚಟುವಟಿಗಳಿಗೆ ಕಾರಣರಾಗುತ್ತಿದ್ದಾರೆ.
ನಿನ್ನೆ ಮೊನ್ನೆಯಷ್ಟೇ ಎಂಬಂತಿರುವ ರೌಡಿಯೊಬ್ಬನ ಕೊಲೆ ನಂತರ ಸರಗಳ್ಳತನ, ವಾಹನ ಕಳವು, ಹತ್ಯೆಗೆ ಸಂಚು, ಗಾಂಜಾ ಮಾರಾಟದ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿ ಹೆಡೆಮುರಿ ಕಟ್ಟಿದ್ದರೂ ಕೆಲವು ಪ್ರಕರಣಗಳು ಈಗಲೂ ಸದ್ದಿಲ್ಲದೇ ನಡೆಯುತ್ತಿವೆ.
ಅಂತೆಯೇ ಶಿವಮೊಗ್ಗ ಪೊಲೀಸ್ ಇಲಾಖೆಯ ಸ್ಕ್ವಾಡ್ ನಲ್ಲಿದ್ದ ಎಎಸ್ ಐ ಒಬ್ಬರು ನಿನ್ನೆ ದುರ್ಗಿಗುಡಿಯಲ್ಲಿ ಗಸ್ತಿನಲ್ಲಿದ್ದಾಗ ಕೆಲ ಹುಡುಗರು ಹಲ್ಲೇ ಮಾಡಿದ್ದರಂತೆ. ಗಾಂಜಾ ಸೇವನೆ ಇದಕ್ಕೆ ಕಾರಣ ಎಂದು ಬೀದಿ ತುಂಬಾ ಪುಕಾರು ಹಬ್ಬಿದೆ. ಈ ಬಗ್ಹೆ ಯಾವುದೇ ಮಾಹಿತಿ ಇಲ್ಲ. ಅಂತಹ ಘಟನೆ ನಡೆದಿಲ್ಲ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಶಿವಮೊಗ್ಗದ ದುರ್ಗಿಗುಡಿಯಲ್ಲಿ ಜಯನಗರ ASI ಒಬ್ಬರ ಮೇಲೆ ರಾತ್ರಿ ಪಾಳಿ ಕೆಲಸದ ಸಮಯದಲ್ಲಿ ಕೆಲವು ಹುಡುಗರು ಹಲ್ಲೆ ಮಾಡಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ, ಆದರೆ ಯಾವುದೇ ದೂರು ದಾಖಲಾಗಿಲ್ಲ, ಮಾದ್ಯಮಗಳಲ್ಲು ಸುದ್ದಿ ಆಗಿಲ್ಲಾ ಅಂದರೆ ಇದು ಸತ್ಯವೇ? ಅಥವಾ ಹಲ್ಲೆ ಮಾಡಿದವರು ಪ್ರಭಾವಿಗಳೆಂದು ಪ್ರಕರಣ ಮುಚ್ಚಿಹೋಯಿತೆ? ಈ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ನಡೆಸಬೇಕು , ಪೋಲಿಸರ ಮೇಲೆ ಹಲ್ಲೆ ನಡೆಯುತ್ತೆ ಎಂದರೆ ಇನ್ನು ನಮ್ಮಂತಹ ಸಾಮಾನ್ಯ ಜನರ ಪಾಡೇನು, ಪೋಲಿಸರು ಮನುಷ್ಯರಲ್ಲವೇ, ತಮ್ಮ ಸಿಬ್ಬಂದಿಗೆ ನ್ಯಾಯಾ ನೀಡಲಾಗದದವರು ಸಾಮಾನ್ಯ ಜನರಿಗೆ ನ್ಯಾಯಾ ನೀಡುವರೇ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
– ಕೆ.ಪಿ.ಎಸ್.

