ಶಿವಮೊಗ್ಗ, ಜು.26
ಮದ್ವೆಯಾಗಿ ಇನ್ನೂ ಮೂರೇ ದಿನವಾಗಿದೆ ಅಷ್ಟೇ., ಮನೆಯಲ್ಲಿ ಬಂಧುಬಳಗ ಇರುವಾಗಲೇ ಮನೆಯ ಗೋಡೆ ಕುಸಿದುಬಿದ್ದು ಮಧುಮಗ ಹಾಗೂ ಪುಟ್ಟ ಮಗುಸೇರಿದಂತೆ ಹಲವರು ಗಾಯಗೊಂಡ ಘಟನೆ ನಿನ್ನೆ ರಾತ್ರಿ ಭದ್ರಾವತಿ ತಾ. ಅರಹತೊಳಲಿನಲ್ಲಿ ನಡೆದಿದೆ.
ಕಳೆದ ಮೂರು ದಿನದ ಹಿಂದೆ ಅರಹತೊಳಲಿನ ಲೇಟ್ ಹಾಲಪ್ಪ ಅವರ ಪುತ್ರ ಗಣೇಶ್ ಅವರು ಹರಿಹರ ತಾ. ಹನಗವಾಡಿಯ ಸವಿತಾ ಅವರೊಂದಿಗೆ ಹರಿಹರ ತಾ. ಶಾಸಕ ರಾಮಪ್ಪ ಅವರ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಿವಾಹವಾಗಿದ್ದರು.
ನಿನ್ನೆ ಮದ್ಯರಾತ್ರಿ ಏಕಾಏಕೀ ಗೋಡೆ ಕುಸಿದು ಬಿದ್ದಿದೆ. ಮನೆಯ ಮುಂದಣದ ಚಪ್ಪರವೂ ಬಿದ್ದಿದೆ. ಈ ಸಂದರ್ಭದಲ್ಲಿ ಮಧುಮಗ ಗಣೇಶ್ ಮೇಲೆ ಗೋಡೆ ಬಿದ್ದಿದೆ. ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಗಣೇಶ್ ಅಕ್ಕನ ಮಗನಿಗೂ ಬಲವಾದ ಹೊಡೆತ ಬಿದ್ದಿದೆ. ಘಟನೆ ಕಂಡು ಮಧುಮಗಳು ಸಹ ಆತಂಕದಿಂದ ಕುಸಿದು ಬಿದ್ದಿದ್ದರು.
ಈ ಸಂದರ್ಭದಲ್ಲಿ ಮನೆಯಲ್ಲಿ 13 ಜನ ಮಲಗಿದ್ದರು. ಹಲವರು ಗಾಯಗೊಂಡಿದ್ದರು.
ಗಾಯಾಳುಗಳನ್ನು ಹೊಳೆಹೊನ್ನೂರು ಆಸ್ಪತ್ರೆಗೆ ಸೇರಿಸಲಾಗಿದೆ.
ಮದುವೆ ಸಂಭ್ರಮದಲ್ಲಿ ಹರುಷದಿಂದ ಇರಬೇಕಾದ ಮನೆಯಲ್ಲಿ ಇಂತಹ ಘಟನೆ ನಡೆದಿರುವುದು ದುರಂತ.



