ಶಿವಮೊಗ್ಗ, ಜು.21:
ಸಿಮ್ಸ್ ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಎನ್ ಒಸಿ ಪಡೆಯಲು ಹೋದಾಗ ಸಹ ಪ್ರಾಧ್ಯಾಪಕರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮದ್ಯಪ್ರವೇಶ ಮುಚ್ಚಿ ಹಾಕಲೆತ್ನಿಸುವ ಪ್ರಯತ್ನಕ್ಕೆ ಬೆಂಕಿಹಾಕಿದೆ.
ತುಂಗಾತರಂಗ ದಿನಪತ್ರಿಕೆ ಘಟನೆ ನಡೆದ 12 ಗಂಟೆಯೊಳಗೆ ಸುದ್ದಿ ಮಾಡಿ ಮುಚ್ಚಿಹಾಕಲೆತ್ನಿಸಿರುವ ಪ್ರಕರಣದ ಕುರಿತು ಮಾಹಿತಿ ನೀಡಿತ್ತು.
ಅಂದು ನನಗಿನ್ನು ಈ ಮಾಹಿತಿ ಬಂದಿಲ್ಲ ಎಂದು ಸುಳ್ಳು ಹೇಳಿದ್ದ ನಿರ್ದೇಶಕರು ಸಮಿತಿ ರಚಿಸಿದ್ದೇನೆ, ಅದರ ತನಿಖೆಯಲ್ಲಿ ಏನೂ ನಡೆದಿಲ್ಲ ಎಂದು ಕೆಲ ಮಾದ್ಯಮಗಳಿಗೆ ಸ್ಪಷ್ಡನೆ ನೀಡಿ ಕೈ ತೊಳೆದುಕೊಳ್ಲಲು ಯತ್ನಿಸಿದ್ದರು. ಆದರೆ ತುಂಗಾತರಂಗ ಸೇರಿದಂತೆ ಹಲವು ಪತ್ರಿಕೆಗಳು ಇದರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ವಿದ್ಯಾರ್ಥಿನಿ ಮೇಲಾದ ಅನ್ಯಾಯಕ್ಕೆ ತಕ್ಕ ನ್ಯಾಯ ಬೇಕೆಂದು ಒತ್ತಾಯಿಸಿದ್ದವು. ಕಟುಭಾಷೆಯಿಂದ ಆಡಳಿತ ಮಂಡಳಿಯ ಕಾರ್ಯವನ್ನು ಖಂಡಿಸಿದ್ದವು.
ಶಿವಮೊಗ್ಗ ನಗರ ಹಾಗೂ ಜಿಲ್ಲೆಯಲ್ಲಿ ಎಲ್ಲಾ ಮಹಿಳಾ ಸಂಘಟನೆಗಳು ಈ ವಿಚಾರದಲ್ಲಿ ಮಲಗಿದ್ದು ದುರಂತವೇ ಹೌದು. ಈ ನಡುವೆ ಪೀಪಲ್ಸ್ ಲಾಯರ್ಸ್ ಗಿಲ್ಡ್ ಜಿಲ್ಲಾಧಿಕಾರಿಗಳನ್ನು ಬೇಟಿ ಮಾಡಿ ಸೂಕ್ತ ತನಿಖೆ ನಡೆಸಲು ಒತ್ತಾಯಿಸಿತ್ತು. ಅವರು ಈ ವಿಚಾರದ ಬಗ್ಗೆ ಪರಿಶೀಲಿಸುವ ಮುನ್ನವೇ ನಿರ್ದೇಶಕರು ಪ್ರಕರಣವನ್ನು ಮುಚ್ಚಿಹಾಕಲು ಸ್ಪಷ್ಟನೆ ನೀಡಿದರು.
ಈ ಸ್ಪಷ್ಟನೆಯೆ ನಾನಾ ಅನುಮಾನಗಳನ್ನು ಹುಟ್ಟಿಸಿದ್ದನ್ನು ಹಲವು ಮಾದ್ಯಮಗಳು ಪ್ರಶ್ನಿಸಿದ್ದವು.
ಈಗ ಡಿಸಿ ಎಂಟ್ರಿಯಿಂದಾಗಿ ಪ್ರಕರಣ ಮತ್ತೆ ಗಂಭೀರತೆ ಪಡೆದುಕೊಂಡಿದೆ.
ಸಿಮ್ಸ್ ನಲ್ಲಿ ಸಹ ಪ್ರಾಧ್ಯಾಪಕರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುತೇಕ ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು. ಆದರೆ ಸಂತ್ರಸ್ತ ಮಹಿಳೆ ಜಿಲ್ಲಾಧಿಕಾರಿಗಳ ಮುಂದೆ ಹಾಜರಾಗಿ ಸಿಮ್ಸ್ ನಿರ್ದೇಶಕರ ಪತ್ರಿಕಾ ಹೇಳಿಕೆ ಸಮಂಜಸವಾಗಿಲ್ಲವೆಂದು ಹೇಳಿಕೊಂಡ ಮೇರೆಗೆ ಮತ್ತು ಪೀಪಲ್ಸ್ ಲಾಯರ್ ಗಿಲ್ಡ್ ನ ವಕೀಲ ಶ್ರೀಪಾಲ್ ನೇತೃತ್ವದ ಮನವಿಯ ಮೇರೆಗೆ ಜಿಲ್ಲಾಧಿಕಾರಿಗಳು ಪ್ರಕರಣದಲ್ಲಿ ಎಂಟ್ರಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸುದ್ದಿಗಳನ್ನೂ ಓದಿ
ಶಿವಮೊಗ್ಗ ಸಿಮ್ಸ್/ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸರ್ಜರಿ ವಿಭಾಗದ ಸಹಪ್ರಾದ್ಯಾಪಕನ ಲೈಂಗಿಕ ಕಿರುಕುಳ…? ಟಾಂ ಟಾಂ ಸುದ್ದಿಗೆ ಆಡಳಿತ ಮಂಡಳಿಯೇಕೆ ಮೌನ….! https://tungataranga.com/?p=13256
ಸಮಗ್ರ ಸುದ್ದಿ ಓದಲು ಮೇಲಿನ ಲಿಂಕ್ ಕ್ಲಿಕ್ ಮಾಡಿ
ತುಂಗಾತರಂಗ ಮೊದಲೇ ಹೇಳಿದ್ದಂತೆ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ತಿಲಾಂಜಲಿ! ಸ್ಪಷ್ಟೀಕರಣ ಕೊಡೋದಷ್ಟೇ ಸಿಮ್ಸ್ ನಿರ್ದೇಶಕ ಸಿದ್ದಪ್ಪರವರ ಕೆಲಸನಾ? https://tungataranga.com/?p=13298
ನಿರ್ದೇಶಕ ಸಿದ್ದಪ್ಪರವರೇ, ನಿಮಗೊಂದಿಷ್ಟು ಪ್ರಶ್ನೆಗಳಿವೆ ಇವಕ್ಕೆ ಉತ್ತರಿಸಿ ಸಾಕು.
ಸಿಮ್ಸ್ ವಿದ್ಯಾರ್ಥಿನಿಯರ ಪ್ರಕಾರ ಮತ್ತು ನಮಗೆ ಇರುವ ಮಾಹಿತಿಯ ಪ್ರಕಾರ ಈ ಪ್ರಕರಣದಲ್ಲಿ ನೇಮಿಸಿರುವ ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟುವ ವಿಭಾಗದ ಮುಂದೆ ವಿದ್ಯಾರ್ಥಿನಿಯು ತಪ್ಪುಗ್ರಹಿಕೆ ಎಂದು ಹೇಳಿಕೆ ನೀಡಿಲ್ಲ ಮತ್ತು ಈ ವಿಭಾಗ ಸಿಮ್ಸ್ ನಿರ್ದೇಶಕರ ಮುಂದೆ ವರದಿಯೇ ನೀಡಿಲ್ಲವೆಂಬ ಹೇಳಿಕೆ ಕೇಳಿಬರುತ್ತಿದೆ.
ನಿರ್ದೇಶಕರೇ ಈ ಹೇಳಿಕೆಯನ್ನ ಪತ್ರಿಕೆಗೆ ನೀಡಿ ಸಿಕ್ಕಿಹಾಕಿಕೊಂಡಿದ್ದಾರೆ ಎಂಬ ಗುಮಾನಿಯೂ ಕೇಳಿಬರುತ್ತಿದೆ. ಒಟ್ಟಿನಲ್ಲಿ ಗುರು ಶಿಷ್ಯರ ನಡುವಿನ ಬಾಂಧವ್ಯ ಮತ್ತು ಈ ಹಿಂದೆ ಮೆಗ್ಗಾನ್ ಮತ್ತು ಸಿಮ್ಸ್ ನಲ್ಲಿ ನಡೆದ ಬಹುತೇಕ ಎಲ್ಲಾ ಪ್ರಕರಣವನ್ನೂ ಹೀಗೆ ಮುಚ್ಚುಹಾಕಿರಬಹುದು ಎಂಬ ಶಂಕೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ನಿನ್ನೆ ಜಿಲ್ಲಾಧಿಕಾರಿಗಳು ಸಿಮ್ಸ್ ನಲ್ಲಿ ಸಭೆ ನಡೆಸಿದ್ದಾರೆ. ಮತ್ತೆ ಸಂತ್ರಸ್ತೆ ಮತ್ತು ಅರೊಪಿ ಸ್ಥಾನದಲ್ಲಿರುವ ಸಹಪ್ರಾಧ್ಯಾಪಕರಿಂದ ಹೇಳಿಕೆ ಪಡೆದು ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ವರದಿ ಸಲ್ಲಿಯಾಗಿರುವುದಾಗಿ ತಿಳಿದು ಬಂದಿದೆ.
ಈ ಹಿನ್ನಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಹೋಗದಂತೆ ಸಹಪ್ರಾಧ್ಯಾಪಕರಿಗೆ ಇಂದಿನಿಂದ ಸೂಚಿಸಲಾಗಿದೆ. ವಿದ್ಯಾರ್ಥಿಯ ಮೇಲಿನ ಈ ಪ್ರಕರಣ ಒಪಿಡಿಯಲ್ಲಿ ನಡೆದಿದೆ ಎನ್ನಲಾಗುತ್ತಿದೆ
ಒಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಎಂಟ್ರಿಯಿಂದ ಸಂತ್ರಸ್ತೆಗೆ ನ್ಯಾಯ ಸಿಗುವ ಸಾಧ್ಯತೆ ಹೆಚ್ಚಿದೆ. ಕಲಿಕೆಗೆ ಬಂದ ವಿದ್ಯಾರ್ಥಿನಿಗೆ ನ್ಯಾಯ ಸಿಗಲಿ.