ಶಿವಮೊಗ್ಗ,
ಸರ್ಕಾರವು ಸಂಘರ್ಷಕ್ಕೆ ಅವಕಾಶವಿಲ್ಲ ದಂತೆ ನೌಕರರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಹೇಳಿದರು.
ಅವರು ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ನೌಕರರ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಗುರುಸ್ಪಂದನ, ಗುರುತಿನ ಚೀಟಿ ವಿತರಣೆ, ಇ-ಫೈಲಿಂಗ್ ನಮೂನೆಗಳ ವಿತರಣಾ ಕಾರ್ಯಕ್ರ ಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸರ್ಕಾರಿ ನೌಕರರ ವೇತನ-ಭತ್ಯೆ ಮತ್ತಿತರ ದಾಖಲೆಗಳನ್ನು ನಿರ್ವಹಿಸಲು, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನೌಕರರ ಸ್ನೇಹಿಯಾಗಿ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರವೂ ಕೂಡ ಕಾರ್ಯತತ್ಪರವಾಗಿರು ವುದು ಸಂತಸದ ಸಂಗತಿಯಾಗಿದೆ ಎಂದರು.
ಪ್ರಸ್ತುತ ಎಲ್ಲಾ ಕಚೇರಿಗಳಲ್ಲಿ ನಿರ್ವಹಿ ಸಲಾಗುತ್ತಿರುವ ಸೇವಾ ವಹಿಯ ಬದಲಾಗಿ ಮುಂದಿನ ೬-೮ತಿಂಗಳಲ್ಲಿ ಇ.ಎಸ್.ಆರ್. ಸಿಸ್ಟಮ್ ಅನುಷ್ಠಾನಗೊಳ್ಳಲಿದೆ. ಇದರಿಂದಾಗಿ ನೌಕರರ ಬಡ್ತಿ, ರಜೆ ಸೌಲಭ್ಯ, ವೇತನ, ಮುಂತಾದ ಮಾಹಿತಿಗಳು ಹೆಚ್.ಆರ್.ಎಂ. ಎಸ್. ಮೂಲಕ ಉನ್ನತೀಕರಣಗೊಂಡು ತಮ್ಮ ಸೇವಾ ವಹಿ ಇ.ಎಸ್.ಆರ್.ನಲ್ಲಿ ದಾಖ ಲಾಗಲಿವೆ. ಅಲ್ಲದೇ ಪಡೆಯುವ ಸಾಲ-ಸೌಲ ಭ್ಯಗಳಿಗಾಗಿ ಅನಗತ್ಯ ಅಲೆದಾಡದೆ ಆನ್‌ಲೈನ್ ಮೂಲಕ ಎಲ್ಲ ರೀತಿಯ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಮುಂದಿನ ಮೂರು ತಿಂಗಳ ಅವಧಿಯೊಳ ಗಾಗಿ ಎಲ್ಲಾ ನೌಕರರಿಗೆ ವೇತನ ಬಟವಾಡೆಯ ಮಾಹಿತಿ ಮೊಬೈಲ್ ಸಂದೇಶದ ಮೂಲಕ ತಲುಪಲಿದೆ. ಅದಕ್ಕಾಗಿ ನೌಕರರು ತಮ್ಮ ಮೊಬೈಲ್ ನಂಬರನ್ನು ನೋಂದಾಯಿಸಿಕೊಳ್ಳು ವಂತೆ ಸೂಚಿಸಿದ ಅವರು, ಈ ರೀತಿಯ ಅನೇಕ ಸೌಲಭ್ಯಗಳನ್ನು ಪಡೆಯುವ ನಾವು ನಮ್ಮ ಜವಾಬ್ದಾರಿಯರಿತು, ಅತ್ಮಸಾಕ್ಷಿಗೆ ಅನುಗುಣವಾಗಿ ಆತ್ಮವಂಚನೆ ಮಾಡಿಕೊಳ್ಳ ದಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿ ಸುವಂತೆ ಸೂಚಿಸಿದದರು.
ಮುಂದಿನ 3-4 ತಿಂಗಳಲ್ಲಿ ಅನಾರೋಗ್ಯ ದಿಂದ ಬಾದಿತರಾಗಿರುವ ನೌಕರರಿಗೆ ವೇತನರಹಿತ ಚಿಕಿತ್ಸಾ ಸೌಲಭ್ಯ ಅನುಷ್ಠಾನಕ್ಕೆ ಬರಲಿದೆ. ವಿಶೇಷ ಪ್ರಕರಣ ಒಂದರಲ್ಲಿ ಶ್ವಾಸಕೋಶ ಸಂಬಂಧಿ ತೀವ್ರತರಹದ ಕಾಯಿಲೆಗೆ ೩೦ಲಕ್ಷ ರೂ.ವರೆಗೆ ಸರ್ಕಾರದ ಆರ್ಥಿಕ ನೆರವು ದೊರೆಯಲಿದೆ ಎಂದರು.
ಸಿಬ್ಬಂಧಿಗಳ ಕೊರತೆ, ತಾಂತ್ರಿಕ ಕಾರಣಗಳು ಇಂತಹ ಅನೇಕ ಸಮಸ್ಯೆಗಳಿಂದಾಗಿ ನೌಕರರ ಅದರಲ್ಲೂ ಶಿಕ್ಷಕರ ಸೇವಾ ವಹಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವಲ್ಲಿ ನ್ಯೂನತೆಗಳುಂ ಟಾಗಿರುವುದು ನಿಜ. ಆದರೆ, ಕಳೆದ ಕೆಲವು ವರ್ಷಗಳಿಂದೀಚೆಗೆ ಆಡಳಿತದಲ್ಲಿ ಅನೇಕ ಸುಧಾರಣೆಗಳನ್ನು ತಂದಿದ್ದರ ಪರಿಣಾಮವಾಗಿ ಸಮಸ್ಯೆಗಳಲ್ಲಿ ಇಳಿಮುಖವಾಗಿರುವುದನ್ನು ಅರಿತಿದ್ದೇನೆ. ಆದಾಗ್ಯೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಗುರುಸ್ಪಂದನ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ ಎಂದವರು ನುಡಿದರು.
ಕಳೆದ ಎರಡೂವರೆ ವರ್ಷಗಳಲ್ಲಿ ಸಾಮಾನ್ಯದಿಂದ ಗಂಭೀರ ಸ್ವರೂಪದ ೨೦ಕ್ಕೂ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಅಲ್ಲದೇ ಸಂಘಟನೆ ವತಿಯಿಂದ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾರ್ವ ಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಾಗರಾಜ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರ ಗುರುತಿನ ಚೀಟಿ, ಇ-ಫೈಲಿಂಗ್ ನಮೂನೆಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಂ.ರವಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣನವರ, ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷ ಆರ್.ಮೋಹನ್‌ಕುಮಾರ್, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಟಿ.ಕೃಷ್ಣಮೂರ್ತಿ, ಜಿ.ಸುಮತಿ, ಡಿ.ಬಿ.ರುದ್ರಪ್ಪ, ದಿನೇಶ್ ಜಿ.ಎಂ., ಮುಂತಾದವರು ಉಪಸ್ಥಿತರಿದ್ದರು.