ಶಿವಮೊಗ್ಗ,
ನಿರಂತರ ಸೇವಾ ಚಟುವಟಿಕೆಗಳ ಮೂಲಕ ರೋಟರಿ ಸಂಸ್ಥೆಯು ವಿಶ್ವದಲ್ಲಿಯೇ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಎಂ.ಜಿ.ರಾಮಚಂದ್ರ ಮೂರ್ತಿ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ರೋಟರಿ ಶಿವಮೊಗ್ಗ ಮಿಡ್‌ಟೌನ್ ಕ್ಲಬ್‌ನ ಅಧಿಕೃತ ಭೇಟಿ ಸಂದರ್ಭ ದಲ್ಲಿ ಸಂಸ್ಥೆ ಕಾರ್ಯ ಪರಿಶೀಲಿಸಿ ಮಾತನಾ ಡಿದರು.
ಪಲ್ಸ್ ಪೊಲಿಯೋ ಅಭಿಯಾನದಲ್ಲಿ ರೋಟರಿ ಸಂಸ್ಥೆ ಸೇವೆ ಅಪಾರ. ಆರೋಗ್ಯ ಕ್ಷೇತ್ರದ ಜತೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿಯು ರೋಟರಿ ಸೇವೆ ಸಲ್ಲಿಸುತ್ತಿದ್ದು, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಗ್ರಾಮೀಣ ಪ್ರದೇಶಗಳ ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಟ್ಯಾಬ್‌ಗಳ ವಿತರಣೆ ಹಾಗೂ ಶೌಚಗೃಹ ನಿರ್ಮಾ ಣ ಸೇರಿದಂತೆ ಮಕ್ಕಳಿಗೆ ಅನುಕೂಲ ಆಗುವ ಕೆಲಸಗಳನ್ನು ರೋಟರಿ ಸಂಸ್ಥೆ ಮಾಡುತ್ತಿದೆ ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಮಿಡ್‌ಟೌನ್‌ಕ್ಲಬ್ ಬ್ಲಡ್ ಬ್ಯಾಂಕ್ ಮುಖಾಂತರ ಲಕ್ಷಾಂತರ ಯೂನಿಟ್ ಬ್ಲಡ್‌ಅನ್ನು ರೋಗಿಗಳಿಗೆ ಸಕಾಲದಲ್ಲಿ ಒದಗಿಸುವ ಕೆಲಸ ಮಾಡಿದ್ದು, ಜೀವ ಉಳಿಸುವ ಪವಿತ್ರಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿ.ಎಸ್. ಅರುಣ್ ಮಾತನಾಡಿ, ರೋಟರಿ ಸಂಸ್ಥೆ ಪರಸ್ಪರ ಓಡನಾಟ ಹೆಚ್ಚಿಸುವುದರ ಜತೆಯಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಇರುವ ರೋಟರಿ ಸದಸ್ಯರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತದೆ. ಹೆಚ್ಚು ಹೆಚ್ಚು ಸದಸ್ಯರನ್ನು ರೋಟರಿ ಸಂಸ್ಥೆಗೆ ಸೇರಿಸಬೇಕು ಎಂದು ಹೇಳಿದರು.
ಜಿಲ್ಲಾಗವರ್ನರ್‌ಎಂ.ಜಿ.ರಾಮಚಂದ್ರಮೂರ್ತಿ ಹಾಗೂ ಸುರೇಖಾ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ವಲಯ ಸೇನಾನಿ ಕೆ.ಪಿ.ಶೆಟ್ಟಿ, ಮಾಜಿ ಸಹಾಯಕಗವರ್ನರ್ ಜಿ.ವಿಜಯ್‌ಕುಮಾರ್, ಎಂ.ಮುರಳಿ, ಗುರುರಾಜ್ ಗಿರಿಮಾಜಿ, ಮಾಜಿ ಅಧ್ಯಕ್ಷರಾದರಾಜೇಂದ್ರ ಪ್ರಸಾದ್, ಸುರೇಶ್, ಅನ್ಸ್‌ಕ್ಲಬ್‌ಅಧ್ಯಕ್ಷೆ ಪ್ರತಿಭಾಅರುಣ್, ಕಾರ್ಯದರ್ಶಿ ಬಿಂದು ಅನಿಲ್ ಮತ್ತಿತರರು ಉಪಸ್ಥಿತರಿದ್ದರು.