ಶಿವಮೊಗ್ಗ, ಮೇ.31:
ರಾಷ್ಟೀಯ ಸ್ವಯಂ ಸೇವಕ ಸಂಘ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಟೀಕಿಸಿರುವ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಮಾಜಿ ಸೂಡಾ ಅಧ್ಯಕ್ಷರಾದ ಎಸ್. ಎಸ್. ಜ್ಯೋತಿಪ್ರಕಾಶ್ ಅವರು ತೀವ್ರವಾಗಿ ಖಂಡಿಸಿದ್ದಾರೆ.


ಹೆಸರೇ ಹೇಳುವಂತೆ ರಾಷ್ಟೀಯ ಸ್ವಯಂ ಸೇವಕ ಸಂಘ ಎಂದರೆ ಯಾವುದೇ ಪ್ರತಿಫಲಾಪೆಕ್ಷೇ ಇಲ್ಲದೆ ಸ್ವಯಂ ಪ್ರೇರಣೆಯಿಂದ ದೇಶದ ಸೇವೆಯಲ್ಲಿ ನಿರಂತರವಾಗಿ ತೊಡಗುವಂತೆ ಯುವಕರನ್ನು ಪ್ರೇರೇಪಿಸುವುದಾಗಿದ್ದು, ಸಿದ್ದರಾಮಯ್ಯ ಅವರು ಅದನ್ನು ಅರಿತು ಮಾತನಾಡಬೇಕು ಎಂದರು.
ದೇಶದಲ್ಲಿ ಯಾವುದಾದರೂ ಒಂದು ಸಂಘಟನೆ ದೇಶದ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ, ಪ್ರಕೃತಿ ವಿಕೋಪ ದಂತಹ ಕ್ಲಿಷ್ಟಕರ ಸಮಯದಲ್ಲಿ ವಿಪತ್ತು ಪರಿಹಾರ ತಂಡದೊಂದಿಗೆ ಕೈಜೋಡಿಸುವ ಹಾಗೂ ಪಾಕಿಸ್ತಾನ ಮತ್ತು ಚೈನಾ ದೇಶದವರು ನಮ್ಮ ಮೇಲೆ ಯುದ್ಧ ಸಾರಿದ ಸಂದರ್ಭದಲ್ಲಿ ಅವರ ವಿರುದ್ಧ ನಮ್ಮ ಸೈನಿಕರು ವೀರಾವೇಶದಿಂದ ಹೋರಾಡುತ್ತಿದ್ದ ಸಮಯದಲ್ಲಿ ಅವರ ಬೆನ್ನಿಗೆ ನಿಂತು ಸಹಾಯ ಹಸ್ತ ಚಾಚಿದ ಏಕೈಕ ಸಂಘಟನೆ ಇದ್ದರೆ ಅದು ಆರ್.ಎಸ್.ಎಸ್ ಮಾತ್ರವಾಗಿದ್ದು, ಇಂತಹ ಐತಿಹಾಸಿಕ ಸಂಘಟನೆಯ ಕುರಿತು ಪೂರ್ವಪರ ತಿಳಿಯದೇ ಮಾತನಾಡುವ ಸಿದ್ದರಾಮಯ್ಯ ಅವರು ಈ ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಇಲ್ಲಿಯವರೆಗೆ ಸಾವಿರಾರು ಸಂಘ ಸಂಸ್ಥೆಗಳು ಹುಟ್ಟಿಕೊಂಡು ಏನನ್ನೂ ಸಾಧಿಸಲಾಗದೆ ತನ್ನ ಗಂಟು ಮೂಟೆ ಕಟ್ಟಿಕೊಂಡು ಬಾಗಿಲು ಹಾಕಿಕೊಂಡಿವೇ, ಒಂದು ವೇಳೆ ಆರ್.ಎಸ್.ಎಸ್ ಸಂಸ್ಥಾಪಕರಾದ ಕೇಶವ ಬಲಿರಾಂ ಹೆಡಗೆವಾರ್ ಅವರು ಬೇರೆ ಯಾವುದೋ ಕೆಟ್ಟ ದುರಾಲೋಚನೆ ಇಟ್ಟುಕೊಂಡು ಸಂಘವನ್ನು ಸ್ಥಾಪನೆ ಮಾಡಿದ್ದರೆ ಅದು ಶತಮಾನಗಳ ಕಾಲ ವಿಜೃಂಭಿಸಿ ಕೋಟ್ಯಾಂತರ ಕಾರ್ಯಕರ್ತರ ಪಡೆಯನ್ನು ಹೊಂದಲು ಸಾಧ್ಯವಾಗುತ್ತಿತ್ತಾ ? ಎಂದು ಕುಟುಕಿದರು.


ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಬ್ರಿಟಿಷರ ಆಡಳಿತವನ್ನು ಯಥಾವತ್ತಾಗಿ ದೇಶದ ಮೇಲೆ ಏರಿದ ಅಂದಿನ ಕಾಂಗ್ರೆಸ್ ಸರ್ಕಾರದ ಪ್ರಧಾನ ಮಂತ್ರಿಗಳು ಎಲ್ಲಿ, ದೇಶವನ್ನು ಪ್ರಗತಿ ಪಥದತ್ತಾ ಸಾಗಿಸಲು ವಿಶ್ವ ಗುರು ಸ್ಥಾನವನ್ನು ಅಲಂಕರಿಸಲೂ ದಿನದ ಬಹುಪಾಲು ಸಮಯವನ್ನು ಅಭಿವೃದ್ಧಿ ಕಾರ್ಯಕ್ಕಾಗಿ ಮೀಸಲಿಡುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಮ್ಮ ನಾಯಕರೊಂದಿಗೆ ಹೋಲಿಕೆ ಮಾಡುವುದು ಯಾರು ಒಪ್ಪಲು ಸಾಧ್ಯವಿಲ್ಲ, ಕೇವಲ ಕೇಂದ್ರದ ನಿಮ್ಮ ನಾಯಕರ ಮನಸ್ಸನ್ನು ತೃಪ್ತಿ ಪಡಿಸಲು ಕೊಡುವ ಹೇಳಿಕೆಯಿಂದ ಯಾವ ಪ್ರಯೋಜನವಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಚುಕ್ಕಾಣಿ ಹಿಡಿದ ನಂತರದಲ್ಲಿ ಸೇನಾ ವಲಯಕ್ಕೆ ನೂರಾರು ನೂತನ ತಂತ್ರಜ್ಞಾನವನ್ನು ಒದಗಿಸಿದ್ದಾರೆ ಜೊತೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಗಳನ್ನು ನೀಡಿದ್ದಾರೆ ಮೇಲಾಗಿ ಸೈನಿಕರಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ನೀಡುವುದರೊಂದಿಗೆ ಗಡಿ ಭಾಗಗಳನ್ನು ಅಭಿವೃದ್ಧಿ ಪಡಿಸಿದ್ದಾರೆ ಈ ಮೂಲಕ ಸೇನಾ ವಲಯಕ್ಕೆ ಆನೆ ಬಲ ಒದಗಿಸಿದ್ದಾರೆ ಎಂದರು.


ರಾಜ ತಾಂತ್ರಿಕ ವಿಚಾರಕ್ಕೆ ಬಂದರೆ, ವಿಶ್ವದ ಬಲಿಷ್ಠ ರಾಷ್ಟ್ರಗಳು ನಮ್ಮ ಸ್ನೇಹವನ್ನು ಅಪೇಕ್ಷಿಸಿ ವ್ಯಾಪಾರ ವ್ಯವಹಾರಗಳಿಗೆ ಮನ್ನಣೆ ನೀಡುತ್ತಿವೆ ಜೊತೆಗೆ ಹೊಸ ಹೊಸ ಸೇನಾ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಒಪ್ಪಿಗೆ ನೀಡುತ್ತಿದೆ ಜಾಗತಿಕ ಮಟ್ಟದಲ್ಲಿ ನಮ್ಮ ಮಾತಿಗೆ ಮನ್ನಣೆ ದೊರಕುತ್ತಿದೆ ಇದು ಸಾಧ್ಯವಾಗಿದ್ದು ಪ್ರಧಾನಿ ಮೋದಿ ಅವರ ಆಡಳಿತ ವೈಖರಿಯಿಂದ ಎಂಬುದನ್ನು ಮರೆಯಬಾರದು, ಇದರೊಂದಿಗೆ ಜನ ಸಾಮಾನ್ಯರಿಗೆ ಹಾಗೂ ರೈತರಿಗೆ ಉಪಯುಕ್ತ ನೂರಾರು ಜನಪ್ರಿಯ ಯೋಜನೆಗಳನ್ನು ನೀಡಿದ್ದಾರೆ ಇವೆಲ್ಲವೂ ತಿಳಿದಿದ್ದರು ಕೇವಲ ರಾಜಕೀಯ ದುರುದ್ದೇಶದಿಂದ ಸಿದ್ದರಾಮಯ್ಯ ಅವರು ಹೇಳಿಕೆ ನೀಡಬಾರದು ಎಂದು ಖಂಡಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!