ಶಿವಮೊಗ್ಗ,ಆ.15:
ಗಾಂಜಾ,ಅಫೀಮು ಅಂತಹ ಮಾದಕ ವಸ್ತು ಹಾಗೂ ಇಸ್ಪೀಟ್ ಓಸಿ ವಿರುದ್ದ ಜಿಲ್ಲಾ ಪೊಲೀಸ್ ಇಲಾಖೆ ಸಿಡಿದೆದ್ದಿದೆ.
ಇಂದು ಗಾಂಜಾವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ, 04 ಜನ ಆರೋಪಿತರ ಬಂಧನ ಹಾಗೂ 1 ಕೆ.ಜಿ 115 ಗ್ರಾಂ ತೂಕದ ಮಾದಕ ವಸ್ತು ಗಾಂಜಾ (ಅಂದಾಜು ಮೌಲ್ಯ ರೂ 20,000/- (ರೂಪಾಯಿ ಇಪ್ಪತ್ತು ಸಾವಿರ) ಹಾಗೂ 01 ಕಾರು, 05 ಮೊಬೈಲ್ ಫೋನ್ ಗಳು ಮತ್ತು ರೂ 6,660/- (ರೂಪಾಯಿ ಆರು ಸಾವಿರದ ಆರು ನೂರ ಅರವತ್ತು) ನಗದು ಹಣ ಅಮಾನತ್ತು ಪಡಿಸಿಕೊಂಡು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ಸ್ವಾತಂತ್ರ ದಿನದ ಇಂದು ಆರೋಪಿತರುಗಳು ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುವ ಸಲುವಾಗಿ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಬೈಲಿನ ಪದವಿ ಕಾಲೇಜು ಹತ್ತಿರ ರಸ್ತೆಯಲ್ಲಿ ಕಾರಿನಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಡಾ|| ಸಂತೋಷ್ ಡಿ.ವೈಎಸ್.ಪಿ ತೀರ್ಥಹಳ್ಳಿ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಪ್ರವೀಣ್ ಜಿ ನೀಲಮ್ಮನವರ್, ಪೊಲೀಸ್ ವೃತ್ತ ನಿರೀಕ್ಷಕರು, ತೀರ್ಥಹಳ್ಳಿ ವೃತ್ತ ರವರ ನೇತೃತ್ವದ ಸಿಬ್ಬಂದಿಗಳನ್ನೊಳಗೊಂಡ ತಂಡವು ದಾಳಿ ನಡೆಸಿ ಆರೋಪಿತರಾದ ಅರುಣ್ 26 ವರ್ಷ, ಎನ್ಎಂಸಿ ಭದ್ರಾವತಿ, ರಂಜಿತ್ 23 ವರ್ಷ, ಪೇಪರ್ ಟೌನ್ ಭದ್ರಾವತಿ, ಕಿರಣ್ 23 ವರ್ಷ ವಾಸ ಭೋವಿ ಕಾಲೋನಿ ಭದ್ರಾವತಿ ಮತ್ತು ಪ್ರದೀಪ 24 ವರ್ಷ, ಭದ್ರಾವತಿ ಟೌನ್ ಒಟ್ಟು 04 ಜನ ಆರೋಪಿತರನ್ನು ಬಂಧಿಸಿ, ಆರೋಪಿತರಿಂದ 1 ಕೆ.ಜಿ 115 ಗ್ರಾಂ ತೂಕದ ಮಾದಕ ವಸ್ತು ಗಾಂಜಾ, ಅಂದಾಜು ಮೌಲ್ಯ ರೂ 20,000/- (ರೂಪಾಯಿ ಇಪ್ಪತ್ತು ಸಾವಿರ) ಹಾಗೂ 01 ಕಾರು, 05 ಮೊಬೈಲ್ ಫೋನ್ ಗಳು ಮತ್ತು ರೂ 6,660/- (ರೂಪಾಯಿ ಆರು ಸಾವಿರದ ಆರು ನೂರ ಅರವತ್ತು) ನಗದು ಹಣ ಅಮಾನತ್ತು ಪಡಿಸಿಕೊಂಡು, NDPS ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿದೆ.
ಮಾದಕ ವಸ್ತು ಗಾಂಜಾ ಮಾರಾಟದ ಬಗ್ಗೆ ಸಾರ್ವಜನಿಕರು ಶಿವಮೊಗ್ಗ ಜಿಲ್ಲಾ ಪೊಲೀಸ್ ದೂರವಾಣಿ ಸಂಖ್ಯೆ 9480803301 ಗೆ ಕರೆ ಮಾಡಿ ಮಾಹಿತಿಯನ್ನು ನೀಡಬಹುದು. ಮಾಹಿತಿಯನ್ನು ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಸಿಡಿದೆದ್ದ ಕುಂಸಿ ಪಿಎಸ್ಐ
ಜಿಲ್ಲೆಯಲ್ಲಿ ಗಾಂಜಾ ಮಾರಾಟಗಾರರಿಗೆ ಅತಿಹೆಚ್ಚು ದುಸ್ವಪ್ನವಾಗುವಂತೆ ಕುಂಸಿ ಠಾಣೆಯ ಪಿಎಸ್ಐ ನವೀನ್ ಕುಮಾರ್ ಮಠಪತಿ ನಿಂತಿದ್ದಾರೆ.
ಗಾಂಜಾ ಮಾರಾಟಗಾರರಿಂದ ಇತ್ತೀಚೆಗೆ ಹಲ್ಲೆಗೊಳಗಾಬೇಕಾದ ಪಿಎಸ್ ಐ ನವೀನ್ ಮತ್ತೊಮ್ಮೆ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟಗಾರರಿಗೆ ಹೆಡೆಮುರಿ ಕಟ್ಟಲು ಟೊಂಕಕಟ್ಟಿ ನಿಂತಿದ್ದಾರೆ.
ಇಂದು ಗಾಂಜಾ ಮಾರಲು ಮುಂದಾಗಿದ್ದ ಇಬ್ಬರನ್ನ ಹೆಡೆಮುರಿ ಕಟ್ಟಿದ ನವೀನ್ ಕುಮಾರ್ ಹಾಗೂ ಅವರ ಸಿಬ್ಬಂದಿಗಳ ತಂಡ ಗಾಂಜಾ ಮಾರಾಟಗಾರರಿಂದ ಬರೋಬ್ಬರಿ 16 ಕೆ.ಜಿ.ಗಾಂಜಾವನ್ನ ವಶಪಡಿಸಿಕೊಂಡಿದ್ದಾರೆ. ದೊಡ್ಡಮಟ್ಟಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ದುರ್ಗಪ್ಪ ಮತ್ತು ರಾಜುವನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಾಂಜಾ ವಿರುದ್ದ ಸಿಡಿದೆದ್ದ ಡಿಸಿಐಬಿ
ಡಿ.ವೈ.ಎಸ್.ಪಿ ತೀರ್ಥಹಳ್ಳಿ ಉಪ ವಿಭಾಗ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ DCIB ತಂಡದಿಂದ ಜಂಟಿ ದಾಳಿ,ದ್ವಿ ಚಕ್ರ ವಾಹನದಲ್ಲಿ ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿತರ ಬಂಧನ ಹಾಗೂ 2 ಕೆ.ಜಿ 500 ಗ್ರಾಂ ತೂಕದ ಮಾದಕ ವಸ್ತು ಗಾಂಜಾ, ಅಂದಾಜು ಮೌಲ್ಯ ರೂ 62,500 /- (ರೂಪಾಯಿ ಅರವತ್ತೆರಡು ಸಾವಿರದ ಐದು ನೂರು) ಹಾಗೂ 01 ದ್ವಿ ಚಕ್ರ ವಾಹನ ಮತ್ತು 02 ಮೊಬೈಲ್ ಫೋನ್ ಗಳನ್ನು ಅಮಾನತ್ತು ಪಡಿಸಿಕೊಂಡು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಆರೋಪಿತರು ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುವ ಸಲುವಾಗಿ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಬೈಲು ಗ್ರಾಮದ ಹತ್ತಿರ ಆಗುಂಬೆ ತೀರ್ಥಹಳ್ಳಿ ರಸ್ತೆಯಲ್ಲಿ ದ್ವಿ ಚಕ್ರ ವಾಹನದಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಡಾ|| ಸಂತೋಷ್ ಡಿ.ವೈಎಸ್.ಪಿ ತೀರ್ಥಹಳ್ಳಿ ಉಪ ವಿಭಾಗ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಕುಮಾರಸ್ವಾಮಿ, ಪೊಲೀಸ್ ನಿರೀಕ್ಷಕರು, ಡಿಸಿಐಬಿ ವಿಭಾಗರವರ ಜಂಟಿ ನೇತೃತ್ವದ ತಂಡವು ದಾಳಿ ನಡೆಸಿ, ಆರೋಪಿತರಾದ ಯೋಗಪ್ಪ, 67 ವರ್ಷ, ಶೃಂಗೇರಿ ಚಿಕ್ಕಮಗಳೂರು ಮತ್ತು
ದೀಪಕ್ 23 ವರ್ಷ, ದಂಡಿನಕೊಡಿಗೆ ತೀರ್ಥಹಳ್ಳಿ ರವರನ್ನು ಬಂಧಿಸಿ, ಆರೋಪಿತರಿಂದ 2 ಕೆ.ಜಿ 500 ಗ್ರಾಂ ತೂಕದ ಮಾದಕ ವಸ್ತು ಗಾಂಜಾ, ಅಂದಾಜು ಮೌಲ್ಯ ರೂ 62,500 /-(ರೂಪಾಯಿ ಅರವತ್ತೆರಡು ಸಾವಿರದ ಐದು ನೂರು) ಹಾಗೂ 01 ದ್ವಿ ಚಕ್ರ ವಾಹನ ಮತ್ತು 02 ಮೊಬೈಲ್ ಫೋನ್ ಗಳನ್ನು ಅಮಾನತ್ತು ಪಡಿಸಿಕೊಂಡು, NDPS ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿ ಆರೋಪಿತರನ್ನು ಘನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.