ಶಿವಮೊಗ್ಗ, ಆ.15:
ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಮಿತಿಮೀರಿದ ಕೊರೊನಾ ಸೋಂಕಿತರ ಸಂಖ್ಯೆ ಕಾಣುತ್ತಿದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಇಂದು ಬಂದ ವರದಿಯ ಪ್ರಕಾರ 327 ಜನರಿಗೆ ಸೋಂಕು ತಗಲಿದೆ. ದುರಂತವೆಂದರೆ (ಶಿವಮೊಗ್ಗ ತಾಲೂಕಿನಲ್ಲಿ 144 ನಗರದಲ್ಲೇ ಹೆಚ್ಚು) ಹಾಗೂ ಶಿಕಾರಿಪುರದಲ್ಲಿ ಅದೂ ಮುಖ್ಯಮಂತ್ರಿಗಳ ತವರಿನಲ್ಲಿ ಮತ್ತೆ ಇಂದು 111 ಜನರಿಗೆ ಸೋಂಕು ತಗುಲಿದೆ.
ಇಲ್ಲಿ ಸೋಂಕಿತರ ಸಂಖ್ಯೆ ಗಿಂತ ಅತ್ಯಧಿಕವಾಗಿ ಅದರ ಬಳಕೆಯ ಹಣದ ಬಗ್ಗೆ ನೂರೆಂಟು ಪ್ರಶ್ನೆಗಳು ಬಂದಿವೆ. ಹುಡುಕಾಟವಷ್ಟೆ ಮಾದ್ಯಮಗಳದಾಗಿರಲಿ.
ಡೊಂಟ್ ವರಿ
ನಿಮಗೇನೂ ಸಮಸ್ಸೆ ಇಲ್ಲ ಅಂದ್ರೆ ಡೊಂಟ್ ವರಿ…, ಅನಗತ್ಯ ಒತ್ತಡ, ಭಯ, ಯೋಚನೆ, ಮುಲಾಜಿನ ಮಾತುಕತೆ ಬಗ್ಗೆ ಚಿಂತಿಸದಿರಿ. ಕೊರೊನಾ ಕಿರಿಕ್ ಏನಲ್ಲ.

ಶಿವಮೊಗ್ಗದಲ್ಲಿನ ಇಂದಿನ ವರದಿಯಲ್ಲಿ ನಿನ್ನೆಗಿಂತ ಅಂದರೆ ಎಂದಿಗಿಂತ ಇಂದು ಅಧಿಕ ಸೊಂಕಿತರಿದ್ದಾರೆ. ಇವತ್ತಿನ ಈ ವರದಿಯಲ್ಲಿ 327
ಜನರಿಗೆ ಕೊರೊನಾ ಸೊಂಕು ಕಾಣಿಸಿಕೊಂಡಿದೆ.
ಶಿವಮೊಗ್ಗದ ಕೋವಿಡ್ ಚೆಕ್ ಮಾಡಿಸಿಕೊಂಡ 1337 ಜನರಲ್ಲಿ 640 ಜನರಿಗೆ ನೆಗಿಟೀವ್ ಬಂದಿದ್ದು ಉಳಿದವರಿಗೆ ಪಾಸೀಟೀವ್ ಬಂದಿದೆ. 327 ಜನರಿಗೆ ಪಾಸಿಟೀವ್ ಬಂದಿದೆ. ಶಿವಮೊಗ್ಗ ನಗರದ ಜೊತೆ ಶಿಕಾರಿಪುರವೂ ಸಂಪೂರ್ಣಮಯವಾಗ ಹೊರಟಿದೆ.
ಶಿವಮೊಗ್ಗ ಜಿಲ್ಲೆಯ ಕೊರೊನಾ ಸಾವಿನ ಕಂಟಕಗಳು ದಿನೇ ದಿನೇ ಹೆಚ್ಚುತ್ತಿದ್ದು, ಇಂದು ಸಹ 03 ಜನರು ಸಾವು ಕಂಡಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದ್ದು, ನಿಧನ ಹೊಂದಿದವರ ಸಂಖ್ಯೆ 71 ಬಂದಿರುವುದು ಆತಂಕದ ಸಂಗತಿ.
ಇಂದಿನ ಈ ಜಿಲ್ಲಾ ವರದಿಯಲ್ಲಿ ಶಿವಮೊಗ ಜಿಲ್ಲೆಯಲ್ಲಿ 327 ಜನರಿಗೆ ಸೊಂಕು ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ರಾಜ್ಯ ವರದಿಯಲ್ಲಿ ಇಂದಿನ ಸಂಖ್ಯೆ ಎಂದಿನಂತೆ ವ್ಯತ್ಯಾಸವಾಗಿದೆ. ಅದನ್ನು ಸರಿ ಮಾಡಲು ಸಾಧ್ಯವೇ ಇಲ್ಲ.
ಇದು ನಮ್ಮ ಇಂದಿನ ವ್ಯವಸ್ಥೆಯ ಬುಡಗಳಿಗೆ ಕೊರೊನಾ ಟಾರ್ಗೇಟ್ ಮಾಡುತ್ತಿರುವುದು ಕಂಡುಬರುತ್ತಿದೆ.
ಇವತ್ತು 107 ಜನ ಡಿಸ್ಚಾರ್ಜ್ ಆಗಿದ್ದರೂ ಸಹ 4084 ಸೋಂಕಿತರಲ್ಲಿಈಗಾಗಲೇ 2538 ಜನ ಗುಣಮುಖರಾಗಿದ್ದಾರೆ.
ಇಂದಿನ ಈ ವರದಿಯಲ್ಲಿ ಇಂದು ರಕ್ಕಸ ನರ್ತನ ಕ್ಷೇತ್ರವನ್ಮಾಗಿಸಿದ ಸಿ.ಎಂ. ಕ್ಷೇತ್ರ ಶಿಕಾರಿಪುರದಲ್ಲಿ 111, ಶಿವಮೊಗ್ಗದಲ್ಲಿ ರಾಕ್ಷಸ ಕಳೆಯೆಂಬಂತೆ 144, ಭದ್ರಾವತಿಯಲ್ಲಿಯೂ 62, ಸೊರಬದಲ್ಲಿ 04, ಹೊಸನಗರ 03, ತೀರ್ಥಹಳ್ಳಿಯಲ್ಲಿ 01 ಪ್ರಕರಣ ಪತ್ತೆಯಾಗಿವೆ. ಹೊರಜಿಲ್ಲೆಯ 02 ಪ್ರಕರಣಗಳು ಪತ್ತೆಯಾಗಿವೆ.
ಇಂದಿನವರೆಗೆ ಸಾವು ಕಂಡವರ ಸಂಖ್ಯೆ 71 ಆಗಿದ್ದು, ಅದರ ಸಂಖ್ಯೆ ಹೆಚ್ಚಾಗುತ್ತಿದೆ.
ದಿನೇ ದಿನೇ ಸಾವಿನ ಸಂಖ್ಯೆ ಶಿವಮೊಗ್ಗದಲ್ಲಿ ಹೆಚ್ಚುತ್ತಿರುವುದು ಭಯ ಹುಟ್ಟಿಸಿದೆ.
ನಮ್ಮ ಜಾಗೃತೆ ಮಾತ್ರ ನಮ್ದಾಗಿದೆ. ಯಾರನ್ನೂ ನಂಬುವಂತಿಲ್ಲ. ಸರ್ಕಾರದ ಆಸರೆ ಹಣದ ಹಿಂದೆ ಅನ್ಯ ವ್ಯವಹಾರ ಜೊತೆಗಿರುವಂತಿದೆ.

  • ತುಂಗಾತರಂಗ ದಿನಪತ್ರಿಕೆ
  • 94482 56183

By admin

ನಿಮ್ಮದೊಂದು ಉತ್ತರ

You missed

error: Content is protected !!