ಶಿವಮೊಗ್ಗ, ಏ24:
ರಾಜ್ಯದಲ್ಲಿ ಹಲವು ಪೊಲೀಸ್ ಇನ್ಸ್ ಸ್ಪೆಕ್ಟರ್ ಗಳನ್ನು ರಾಜ್ಯ ಸರ್ಕಾರ ವರ್ಗಾಯಿಸಿದ್ದು ಇದರಲ್ಲಿ ಶಿವಮೊಗ್ಗ ಜಿಲ್ಲೆಯ ಮೂವರು ಇನ್ಸ್ ಸ್ಪೆಕ್ಟರ್ ಗಳು ಹೊರಜಿಲ್ಲೆಗೆ ವರ್ಗಾವಣೆಯಾಗಿದ್ದಾರೆ. ಮತ್ತೊಂದು ಮೂಲಗಳ ಪ್ರಕಾರ ಇಲ್ಲೇ ಬದಲಾಯಿಸಿ ನಾಲ್ವರು ಇನ್ಸ್ ಸ್ಪೆಕ್ಟರ್ ಗಳು ಇಲ್ಲಿಯೇ ಉಳಿದಿದ್ದಾರೆ.
ಜಿಲ್ಲೆಯ ಮೂರು ಪೊಲೀಸ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆ ಆಗಿದ್ದು ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯ ಗುರುರಾಜ್ ಕೆ.ಟಿ, ಹೊಸನಗರ ಪೊಲೀಸ್ ಅಧಿಕಾರಿ ಮಧುಸೂಧನ್ ಮತ್ತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಚೈತನ್ಯ ಸಿ.ಜೆ. ವರ್ಗವಣೆಗೊಂಡಿರುವ ಪಿಐಗಳಾಗಿದ್ದಾರೆ.
ಪಿಐ ಗುರುರಾಜ್ ಕೆ.ಟಿ ಕಡೂರು ಪೊಲೀಸ್ ತರಬೇತಿ ಕೇಂದ್ರಕ್ಕೆ ವರ್ಗಾವಣೆಗೊಂಡರೆ, ಹೊಸನಗರ ಪಿಐ ಮಧುಸೂಧನ್ ಜಿ.ಕೆ ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಚೈತನ್ಯ ಸಿ.ಜೆ ಬೆಂಗಳೂರು ಅಶೋಕನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ರಾಜ್ಯದಲ್ಲಿ 179 ಪಿಐಗಳು ವರ್ಗಾವಣೆಗೊಂಡಿದ್ದಾರೆ. ಇದರಲ್ಲಿ ಶಿವಮೊಗ್ಗ ಮೂವರು ಪಿಐಗಳು ವರ್ಗಾವಣೆಗೊಂಡಿದ್ದಾರೆ.
ಶಿವಮೊಗ್ಗ ಕೋಟೆ ಹಾಗೂ ದೊಡ್ಡಪೇಟೆ ಪಿಐಗಳ ಸ್ಥಳ ಬದಲಾವಣೆಯಾಗಿದೆ ಎನ್ನಲಾಗಿದೆ. ಅಂದರೆ ಹರೀಶ್ ಪಾಟೀಲ್ ಹಾಗೂ ಚಂದ್ರಶೇಖರ್ ಅದಲು ಬದಲಾಗಿದ್ದಾರೆ.
ಕುಂಸಿ ಇನ್ಸ್ ಸ್ಪೆಕ್ಟರ್ ಅಭಯ್ ಪ್ರಕಾಶ್ ಅವರನ್ನು ಶಿವಮೊಗ್ಗ ಗ್ರಾಮಾಂತರ ಠಾಣೆಗೆ, ಅಲ್ಲಿದ್ದ ಸಂಜೀವ್ ಕುಮಾರ್ ಅವರನ್ನು ತುಂಗಾನಗರಕ್ಕೆ ಹಾಗೂ ತುಂಗಾನಗರದ ದೀಪಕ್ ಅವರನ್ನು ಸಿಇಎ್ ಠಾಣೆಗೆ ಬದಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ನಿಖರತೆಗೆ ಕಾಯಲಾಗುತ್ತಿದೆ.


