ಹೊಸನಗರ, ಏ.೨೨:
ಸಕಾಲ ಸೇವೆಗಳನ್ನು ನಾಗರೀಕರಿಗೆ ನಿಗದಿತ ಕಾಲಮಿತಿಯೊಳಗೆ ಒದಗಿಸುವುದು ಸಕಾಲ ಯೋಜನೆಯ ಗುರಿಯಾಗಿದ್ದು, ಈ ಯೋಜನೆಯನ್ನು ನಾಗರೀಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೊಸನಗರ ತಹಶೀಲ್ದಾರ್ ರಾಜೀವ್‌ರವರು ತಿಳಿಸಿದರು.


ಹೊಸನಗರ ತಾಲ್ಲೂಕು ಆಡಳಿತ ನಾಗರಿಕ ಸೇವೆಗೆ ಸಾರ್ಥಕತೆ ತಂದ ಸಕಾಲ ಯೋಜನೆಗೆ ದಶಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು ಈ ಸಂಭ್ರಮದಲ್ಲಿ ಸಕಾಲ ಸೇವೆಯ ಬಗ್ಗೆ ಇಂದು ನಾಳೆ ಇನ್ನಿಲ್ಲ ಹೇಳಿದ ದಿನ ತಪ್ಪೋಲ್ಲ ಎಂಬ ಬ್ಯಾನರ್‌ನೊಂದಿಗೆ ತಾಲ್ಲೂಕು ಕಛೇರಿಯ ಸಿಬ್ಬಂದಿಗಳು ಹಾಗೂ ಸಕಾಲ ಯೋಜನೆಯ ನೌಕರ ವರ್ಗ ಮೆರವಣಿಗೆ ನಡೆಸಿ ನಂತರ ಮಾತನಾಡಿದರು.


ಸಕಾಲ ಸೇವೆಗಳನ್ನು ನಾಗರೀಕರಿಗೆ ನಿಗದಿತ ಕಾಲಮೀತಿಯೊಳಗೆ ಒದಗಿಸುವುದೇ ಒಂದು ಗುರಿಯಾಗಿದ್ದು ಪ್ರಸ್ತುತ ಸಕಾಲ ಯೋಜನೆಗೆ ಒಳಪಟ್ಟ ಸೇವೆಗಳನ್ನು ಪಡೆಯಲು ಕೆಳಕಂಡ ವಿಧಾನಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು ಕಛೇರಿಯ ಚೀಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.


ಈ ಸಂದರ್ಭದಲ್ಲಿ ಗ್ರೇಡ್೨ ತಹಶೀ ಲ್ದಾರ್ ರಾಕೇಶ್, ಶಿರಾಸ್ಥೆದಾರ್ ಸುಧೀಂದ್ರ ಕುಮಾರ್, ಶ್ರೀಕಾಂತ್ ಹೆಗಡೆ, ಪ್ರಥಮ ದರ್ಜೆ ಗುಮಾಸ್ಥರಾದ ವಿನಯ್ ಎಂ ಆರಾಧ್ಯ, ಚಿರಾಗ್, ಮಂಜುಳ, ಚಾಂದಿನಿ, ಸುರೇಶ್, ಆರ್.ಐ ವೆಂಕಟೇಶ ಮುರ್ತಿ, ನವೀನ್ ವಿನಯ್ ಮತ್ತಿತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!